Shakuntala Gita
| Verse | English | Kannada |
|---|---|---|
| वैशंपायन उवाच। प्रतिज्ञाय तु दुःषन्ते प्रतियाते शकुन्तला। गर्भं सुषाव वामोरुः कुमारममितौजसम् ॥ 01-068-001॥ |
Vaisampayana said, “After Dushanta had left the ashram having made those promises unto Sakuntala, the latter of tapering thighs brought forth a boy of immeasurable energy. |
ವೈಶಂಪಾಯನನು ಹೇಳಿದನು: ““ಹಿಂದಿರುಗುತ್ತೇನೆ” ಎಂದು ಪ್ರತಿಜ್ಞೆ ಮಾಡಿ ದುಃಷಂತನು ಹೊರಟು ಹೋದ ನಂತರ ಆ ವಾಮೋರು ಶಕುಂತಲೆಯು ಅಮಿತೌಜಸ ಕುಮಾರನಿಗೆ ಜನ್ಮವನ್ನಿತ್ತಳು. |
| त्रिषु वर्षेषु पूर्णेषु दिप्तानलसमद्युतिम्। रूपौदार्यगुणोपेतं दौःषन्तिं जनमेजय ॥ 01-068-002॥ |
Janamejaya! And when the child was three years old, he became in splendour like the blazing fire. And, O Janamejaya, he was possessed of beauty and magnanimity and every accomplishment. |
ಜನಮೇಜಯ! ಮೂರು ವರ್ಷಗಳು ತುಂಬಿದಾಗಲೇ ದುಃಷಂತನ ಆ ಮಗನು ಅಗ್ನಿಯ ತೇಜಸ್ಸಿನಲ್ಲಿ ಬೆಳಗುತ್ತಿದ್ದನು ಮತ್ತು ರೂಪ ಔದಾರ್ಯ ಗುಣಗಳಿಂದ ತುಂಬಿದ್ದನು. |
| जातकर्मादिसंस्कारं कण्वः पुण्यकृतां वरः। तस्याथ कारयामास वर्धमानस्य धीमतः ॥ 01-068-003॥ |
And that first of virtuous men, Kanwa, caused all the rites of religion to be performed in respect of that intelligent child thriving day by day. |
ಪುಣ್ಯಕೃತರಲ್ಲಿ ಶ್ರೇಷ್ಠ ಕಣ್ವನು ಬೆಳೆಯುತ್ತಿರುವ ಆ ಧೀಮಂತನಿಗೆ ಜಾತಕರ್ಮ ಮೊದಲಾದ ಸಂಸ್ಕಾರಗಳನ್ನು ನಡೆಯಿಸಿದನು. |
| दन्तैः शुक्लैः शिखरिभिः सिंहसंहननो युवा। चक्राङ्कितकरः श्रीमान्महामूर्धा महाबलः। कुमारो देवगर्भाभः स तत्राशु व्यवर्धत ॥ 01-068-004॥ |
And the boy gifted with pearly teeth and shining locks, capable of slaying lions even then, with all auspicious signs on his palm, and broad expansive forehead, grew up in beauty and strength. And like unto a celestial child in splendour, he began to grow up rapidly. |
ಅವನ ಹಲ್ಲುಗಳು ಬಿಳಿಯಾಗಿದ್ದವು, ಸಿಂಹವನ್ನೂ ಕೊಲ್ಲಬಲ್ಲ ಶಕ್ತಿಯನ್ನು ಹೊಂದಿದ್ದನು, ಚಕ್ರದ ಗುರುತನ್ನು ಹೊಂದಿದ್ದನು, ಶ್ರೀಮಾನ್ ಕುಮಾರನು ಅಗಲವಾದ ಹಣೆ, ಮಹಾಬಲಶಾಲಿ, ದೇವಗರ್ಭದಲ್ಲಿ ಜನಿಸಿದನೋ ಅನ್ನುವ ಹಾಗೆ ಕಾಂತಿಯಿಂದ ಅಲ್ಲಿ ಬೆಳೆದನು. |
| षड्वर्ष एव बालः स कण्वाश्रमपदं प्रति। व्याघ्रान्सिंहान्वराहांश्च गजांश्च महिषांस्तथा ॥ 01-068-005॥ बद्ध्वा वृक्षेषु बलवानाश्रमस्य समन्ततः। आरोहन्दमयंश्चैव क्रीडंश्च परिधावति ॥ 01-068-006॥ |
And when he was only six years of age, endued with great strength he used to seize and bind to the trees that stood around that asylum, lions and tigers and bears and buffaloes and elephants. |
ಆರುವರ್ಷದವನಾಗ ಆ ಬಾಲಕನು ಕಣ್ಣಾಶ್ರಮದ ಬಳಿಯಲ್ಲಿ ಹುಲಿ, ಸಿಂಹ, ವರಾಹ, ಆನೆ, ಮತ್ತು ಕಾಡೆಮ್ಮೆಗಳನ್ನು ಮರಗಳಿಗೆ ಕಟ್ಟಿ ಅವುಗಳ ಮೇಲೆ ಸವಾರಿ ಮಾಡುತ್ತಿದ್ದನು ಅಥವಾ ಹೊಡೆದು ಓಡಿಸಿ ಆಟವಾಡುತ್ತಿದ್ದನು. |
| ततोऽस्य नाम चक्रुस्ते कण्वाश्रमनिवासिनः। अस्त्वयं सर्वदमनः सर्वं हि दमयत्ययम् ॥ 01-068-007॥ |
And he rode on some animals, and pursued others in sportive mood. The dwellers at Kanwa’s asylum thereupon bestowed on him a name. And they said, because he seizes and restrains an animals however strong, let him, be called Sarvadamana (the subduer of all). |
ಸರ್ವ ಪ್ರಾಣಿಗಳನ್ನೂ ಹತೋಟಿಯಲ್ಲಿಡುತ್ತಿದ್ದುದರಿಂದ “ಅವನು ಸರ್ವದಮನ” ಎಂದು ಕಣ್ಣಾಶ್ರಮವಾಸಿಗಳು ಅವನಿಗೆ ಹೆಸರನ್ನಿತ್ತರು. |
| स सर्वदमनो नाम कुमारः समपद्यत। विक्रमेणौजसा चैव बलेन च समन्वितः ॥ 01-068-008॥ |
And it was thus that the boy came to be named Sarvadamana, endued as he was with prowess, and energy and strength. |
“ಹೀಗೆ ವಿಕ್ರಮ& ತೇಜಸ್ಸು ಮತ್ತು ಬಲಗಳಿಂದೊಡಗೂಡಿದ ಆ ಕುಮಾರನು “ಸರ್ವದಮನ”ಎಂಬ ಹೆಸರಿನಿಂದ ಕರೆಯಲ್ಪಟ್ಟನು.” |
| तं कुमारमृषिर्दृष्ट्वा कर्म चास्यातिमानुषम्। समयो यौवराज्यायेत्यब्रवीच्च शकुन्तलाम् ॥ 01-068-009॥ |
And the Rishi seeing the boy and marking also his extraordinary acts, told Sakuntala that the time had come for his installation as the heir-apparent. |
ಅವನ ಅಮಾನುಷ ಕೃತ್ಯಗಳನ್ನು ನೋಡಿದ ಖಷಿಯು “ಇವನು ಯುವರಾಜನಾಗುವ ಸಮಯ ಬಂದಿದೆ” ಎಂದು ಶಕುಂತಲೆಗೆ ಹೇಳಿದನು. |
| तस्य तद्बलमाज्ञाय कण्वः शिष्यानुवाच ह। शकुन्तलामिमां शीघ्रं सहपुत्रामितोऽऽश्रमात्। भर्त्रे प्रापयताद्यैव सर्वलक्षणपूजिताम् ॥ 01-068-010॥ |
And beholding the strength of the boy, Kanwa commanded his disciples, saying, “Take her without delay this Sakuntala with her son from this abode to that of her husband, blessed with every auspicious sign. |
ತನ್ನ ಶಿಷ್ಯಬಲವನ್ನು ಕರೆದು ಕಣ್ವನು ಹೇಳಿದನು: “ಈ ಸರ್ವ ಲಕ್ಷಣ ಪೂಜಿತ ಶಕುಂತಲೆಯನ್ನು ಅವಳ ಪುತ್ರನೊಂದಿಗೆ ಶೀಘ್ರದಲ್ಲಿ ಆಶ್ರಮದಿಂದ ಅವಳ ಪತಿಯ ಮನೆಗೆ ಕರೆದೊಯ್ಯಿರಿ. |
| नारीणां चिरवासो हि बान्धवेषु न रोचते। कीर्तिचारित्रधर्मघ्नस्तस्मान्नयत माचिरम् ॥ 01-068-011॥ |
Women should not live long in the houses of their paternal or maternal relations. Such residence is destructive of their reputation, their good conduct, their virtue. Therefore, delay not in taking her(to her husband) hence. |
ತನ್ನ ಬಾಂಧವರಲ್ಲಿಯೇ ಸದಾ ವಾಸಿಸಿರುವುದು ನಾರಿಗೆ ಒಳ್ಳೆಯದಲ್ಲ. ಹೀಗೆ ಇರುವುದರಿಂದ ಅವಳ ಕೀರ್ತಿ, ಚಾರಿತ್ರ ಮತ್ತು ಧರ್ಮಕ್ಕೆ ಧಕ್ಕೆಯುಂಟಾಗುತ್ತದೆ. ಆದುದರಿಂದ ಅವಳನ್ನು ಶೀಘ್ರದಲ್ಲಿಯೇ ಕರೆದೊಯ್ಯಿರಿ.” |
| तथेत्युक्त्वा तु ते सर्वे प्रातिष्ठन्तामितौजसः। शकुन्तलां पुरस्कृत्य सपुत्रां गजसाह्वयम् ॥ 01-068-012॥ |
These disciples of the Rishi thereupon, saying “So be it” went towards the city named after an elephant (Hastinapura) with Sakuntala and her son ahead of them. |
ಅವನು ಹೀಗೆ ಹೇಳಿದ ಬಳಿಕ ಸರ್ವ ಅಮಿತೌಜಸ ಶಿಷ್ಯರೂ ಶಕುಂತಲೆಯನ್ನು ಅವಳ ಪುತ್ರನ ಸಹಿತ ಕರೆದುಕೊಂಡು ಗಜಸಾಹ್ವಯಕ್ಕೆ ಹೊರಟರು. |
| गृहीत्वामरगर्भाभं पुत्रं कमललोचनम्। आजगाम ततः शुभ्रा दुःषन्तविदिताद्वनात् ॥ 01-068-013॥ |
And then she of fair eye-brows, taking with her that boy of celestial beauty, endued with eyes like lotus petals, left the woods where she had been first known by Dushanta. |
ಕಮಲಲೋಚನೆ ಶುಬ್ರೆಯು ಅಮರಗರ್ಭದ ಕಾಂತಿಯುಳ್ಳ ತನ್ನ ಪುತ್ರನನ್ನು ಕರೆದುಕೊಂಡು ದುಃಷಂತನನ್ನು ಮೊದಲಬಾರಿ ಭೆಟ್ಟಿಯಾದ ಆ ವನವನ್ನು ಬಿಟ್ಟು ಹೊರಟಳು. |
| अभिसृत्य च राजानं विदिता सा प्रवेशिता। सह तेनैव पुत्रेण तरुणादित्यवर्चसा ॥ 01-068-014॥ |
And having approached the king, she with her boy resembling in splendour the rising sun was introduced to him. And the disciples of the Rishi having introduced her, returned to the asylum. |
ರಾಜನಿಗೆ ವಾರ್ತೆಯನ್ನು ಕಳುಹಿಸಿ ಅವಳು ತನ್ನ ಆದಿತ್ಯವರ್ಚೆಸ ಪುತ್ರನೊಂದಿಗೆ ಪ್ರವೇಶಿಸಿದಳು. |
| पूजयित्वा यथान्यायमब्रवीत्तं शकुन्तला। अयं पुत्रस्त्वया राजन्यौवराज्येऽभिषिच्यताम् ॥ 01-068-015॥ |
And Sakuntala having worshipped the king according to proper form, told him, “This is your son, O king! Let him be installed as your heir-apparent. |
ಯಥಾವತ್ತಾಗಿ ಅವನನ್ನು ಪೂಜಿಸಿ ಶಕುಂತಲೆಯು “ರಾಜನ್। ಇವನು ನಿನ್ನ ಪುತ್ರ. ಇವನಿಗೆ ಯುವರಾಜ್ಯಾಭಿಷೇಕವನ್ನು ಮಾಡು” ಎಂದಳು. |
| त्वया ह्ययं सुतो राजन्मय्युत्पन्नः सुरोपमः। यथासमयमेतस्मिन्वर्तस्व पुरुषोत्तम ॥ 01-068-016॥ |
O king, this child, like unto a celestial, has been begotten by you upon me. Therefore, O best of men, fulfill now the promise you gave me. |
“ರಾಜನ್ ಈ ಸುರೋಪಮನು ನನ್ನಲ್ಲಿ ಹುಟ್ಟಿದ ನಿನ್ನ ಸುತ. ಪುರುಷೋತ್ತಮ । ನೀನು ವಚನವಿತ್ತಿದ್ದಹಾಗೆ ನಡೆದುಕೋ. |
| यथा समागमे पूर्वं कृतः स समयस्त्वया। तं स्मरस्व महाभाग कण्वाश्रमपदं प्रति ॥ 01-068-017॥ |
Call to mind, O great man, the agreement you had made on the occasion of your union with me in the asylum of Kanwa.” |
ಮಹಾಭಾಗ; ಹಿಂದೆ ಕಣ್ವಾಶ್ರಮದಲ್ಲಿ ನಮ್ಮ ಸಮಾಗಮದ ಸಮಯದಲ್ಲಿ ನೀನು ಕೊಟ್ಟಿದ್ದ ವಚನವನ್ನು ನೆನಪಿಸಿಕೋ.” |
| सोऽथ श्रुत्वैव तद्वाक्यं तस्या राजा स्मरन्नपि। अब्रवीन्न स्मरामीति कस्य त्वं दुष्टतापसि ॥ 01-068-018॥ |
The king, hearing these her words, and remembering everything said, “I do not remember anything. Who are you, O wicked woman in ascetic guise? |
ಅವಳ ಈ ಮಾತುಗಳನ್ನು ಕೇಳಿದ ರಾಜನು ಎಲ್ಲ ನೆನಪಿಸಿಕೊಂಡರೂ ಮರೆತುಹೋದವನ ಹಾಗೆ ಹೇಳಿದನು: “ದುಷ್ಟ ತಾಪಸಿ । ನೀನು ಯಾರವಳು? |
| धर्मकामार्थसंबन्धं न स्मरामि त्वया सह। गच्छ वा तिष्ठ वा कामं यद्वापीच्छसि तत्कुरु ॥ 01-068-019॥ |
I do not remember having any connection with you in respect of Dharma, Kama and Arthas. Go or stay or do as you please.” |
ನಿನ್ನೊಂದಿಗೆ ಧರ್ಮ, ಅರ್ಥ ಅಥವಾ ಕಾಮದಲ್ಲಿ ಯಾವುದೇ ರೀತಿಯ ಸಂಬಂಧವನ್ನಿಟ್ಟಿದ್ದುದೂ ನನಗೆ ನೆನಪಿಲ್ಲ. ಹೊರಟು ಹೋಗು ಅಥವಾ ಇಲ್ಲಿಯೇ ಇರು ಅಥವಾ ನಿನಗಿಷ್ಟವಾದ ಹಾಗೆ ಮಾಡು.” |
| सैवमुक्ता वरारोहा व्रीडितेव मनस्विनी। विसंज्ञेव च दुःखेन तस्थौ स्थाणुरिवाचला ॥ 01-068-020॥ |
Thus addressed by him, the fair-coloured innocent one became abashed. Grief deprived her of consciousness and she stood for a time like an wooden post. |
ಇದನ್ನು ಕೇಳಿದ ಆ ವರಾರೋಹೆ ಮನಸ್ವಿನಿಯು ನಾಚಿಕೆ-ದುಃಖಗಳಿಂದ ಮೂರ್ಛೆಗೊಂಡವಳ ಹಾಗೆ ಮರದ ಕಂಭದಂತೆ ಅಚಲಳಾಗಿ ಅಲ್ಲಿಯೇ ನಿಂತಳು. |
| संरम्भामर्षताम्राक्षी स्फुरमाणोष्ठसंपुटा। कटाक्षैर्निर्दहन्तीव तिर्यग्राजानमैक्षत ॥ 01-068-021॥ |
Soon, however, her eyes became red like copper and her lips began to quiver. And the glances she now and then cast upon the king seemed to burn the latter. |
ತಕ್ಷಣವೇ ಆ ಸುಂದರಿಯ ಕಣ್ಣುಗಳು ಕೆಂಪಾದವು, ತುಟಿಗಳು ಕಂಪಿಸತೊಡಗಿದವು, ಮತ್ತು ರಾಜನನ್ನು ಸುಟ್ಟುಬಿಡುತ್ತಾಳೋ ಎನ್ನುವಂತೆ ಅವನ ಕಡೆ ನೋಡಿದಳು. |
| आकारं गूहमाना च मन्युनाभिसमीरिता। तपसा संभृतं तेजो धारयामास वै तदा ॥ 01-068-022॥ |
Her rising wrath however, and the fire of her asceticism, she extinguished within herself by an extraordinary effort. |
ಅವಳು ತನ್ನ ತಪೋ ಬಲದಿಂದ ಏರುತ್ತಿರುವ ಸಿಟ್ಟಿನ ತೇಜಸ್ಸನ್ನು ತಡೆಹಿಡಿಯಲು ಪ್ರಯತ್ನಿಸಿದಳು. |
| सा मुहूर्तमिव ध्यात्वा दुःखामर्षसमन्विता। भर्तारमभिसंप्रेक्ष्य क्रुद्धा वचनमब्रवीत् ॥ 01-068-023॥ |
Collecting her thoughts in a moment, her heart possessed with sorrow and rage, she thus addressed her lord in anger, looking at him |
ಸ್ವಲ್ಪ ಹೊತ್ತು ಯೋಚಿಸಿ ದುಃಖ ಮತ್ತು ಕೋಪಸಮನ್ವಿತಳಾಗಿ ಸಿಟ್ಟಿನಿಂದ ತನ್ನ ಪತಿಯನ್ನು ನೇರವಾಗಿ ನೋಡುತ್ತಾ ಹೇಳಿದಳು: |
| जानन्नपि महाराज कस्मादेवं प्रभाषसे। न जानामीति निःसङ्गं यथान्यः प्राकृतस्तथा ॥ 01-068-024॥ |
“Knowing everything, O monarch, how can you, like an inferior person, thus say that you know it not? |
“ಮಹಾರಾಜ । ಎಲ್ಲವನ್ನು ತಿಳಿದಿದ್ದರೂ ಏನೂ ತಿಳಿಯದಿರುವನ ಹಾಗೆ ಒಬ್ಬ ಕೀಳು ಮನುಷ್ಯನಂತೆ ಹೇಗೆ ಈ ರೀತಿ ಮಾತನಾಡುತ್ತಿರುವೆ? |
| अत्र ते हृदयं वेद सत्यस्यैवानृतस्य च। कल्याण बत साक्षी त्वं मात्मानमवमन्यथाः ॥ 01-068-025॥ |
You heart is a witness to the truth or falsehood of this matter. Therefore, speak truly without degrading yourself. |
ನನ್ನ ಈ ಮಾತುಗಳ ಸತ್ಯ-ಅಸತ್ಯತೆಯ ಕುರಿತು ನಿನ್ನ ಹೃದಯವೇ ತಿಳಿದಿದೆ. ಆದುದರಿಂದ ಸತ್ಯವನ್ನು ಹೇಳು. ನಿನ್ನನ್ನು ನೀನೇ ಅಪಮಾನಿಸಬೇಡ. |
| योऽन्यथा सन्तमात्मानमन्यथा प्रतिपद्यते। किं तेन न कृतं पापं चोरेणात्मापहारिणा ॥ 01-068-026॥ |
He who being one thing represents himself as another thing to others, is like a thief and a robber of his own self. Of what sin is he not capable? |
ಮನಸ್ಸಿನಲ್ಲಿ ಒಂದನ್ನು ಯೋಚಿಸಿ ಇತರರಿಗೆ ಬೇರೆಯದನ್ನೇ ತೋರಿಸುವವನು ತನ್ನ ಆತ್ಮವನ್ನೇ ಅಪಹರಿಸುವ ಕಳ್ಳನಲ್ಲವೇ? ಅವನು ಪಾಪ ಮಾಡಿದ ಹಾಗಲ್ಲವೇ? |
| एकोऽहमस्मीति च मन्यसे त्वं; न हृच्छयं वेत्सि मुनिं पुराणम्। यो वेदिता कर्मणः पापकस्य; तस्यान्तिके त्वं वृजिनं करोषि ॥ 01-068-027॥ |
You think that you alone have knowledge of your deed. But don’t you know not that the Ancient, Omniscient one (Narayana) live in your heart? He knows all your sins, and you are sinning in his presence. |
ನೀನೊಬ್ಬನೇ ಮಾಡಿದ್ದುದು ನಿನಗೊಬ್ಬನಿಗೇ ಗೊತ್ತು ಎಂದು ತಿಳಿಯಬೇಡ. ನಿನ್ನ ಹೃದಯದಲ್ಲಿ ವಾಸಿಸುವ ಅವನಿಗೆ ಎಲ್ಲವೂ ತಿಳಿದಿದೆ. ಎಲ್ಲ ಪಾಪಗಳನ್ನೂ ನೋಡುವ ಅವನ ಎದುರಿನಲ್ಲಿಯೇ ನೀನು ಹೇಗೆ ಪಾಪವನ್ನೆಸಗುತ್ತಿರುವೆ? |
| मन्यते पापकं कृत्वा न कश्चिद्वेत्ति मामिति। विदन्ति चैनं देवाश्च स्वश्चैवान्तरपूरुषः ॥ 01-068-028॥ |
He that sins thinks that none observes him. But he is observed by the gods and by Him also who is in every heart. |
ಪಾಪಿಯು ಪಾಪವನ್ನೆಸಗಿ ಇದು ಬೇರೆ ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸುತ್ತಾನೆ. ಆದರೆ ದೇವತೆಗಳು ಮತ್ತು ತನ್ನಲ್ಲಿಯೇ ಇರುವ ಪುರುಷನು ನೋಡುತ್ತಿದ್ದಾನೆ ಎಂದು ತಿಳಿಯುವುದಿಲ್ಲ. |
| आदित्यचन्द्रावनिलानलौ च; द्यौर्भूमिरापो हृदयं यमश्च। अहश्च रात्रिश्च उभे च संध्ये; धर्मश्च जानाति नरस्य वृत्तम् ॥ 01-068-029॥ |
The Sun, the Moon, the Air, the Fire, the Earth, the Sky, Water, the heart, Yama, the day, the night, both twilights, and Dharma, all witness the acts of man. |
ಆದಿತ್ಯ, ಚಂದ್ರ, ಅನಿಲ, ಅನಲ, ಆಕಾಶ, ಭೂಮಿ, ಆಪ, ಹೃದಯ, ಯಮ, ಹಗಲು, ರಾತ್ರಿ, ಸಂಧ್ಯಾ, ಧರ್ಮ ಇವೆಲ್ಲವೂ ನರನ ಪ್ರತಿಯೊಂದು ಕಾರ್ಯವನ್ನೂ ತಿಳಿದಿರುತ್ತವೆ. |
| यमो वैवस्वतस्तस्य निर्यातयति दुष्कृतम्। हृदि स्थितः कर्मसाक्षी क्षेत्रज्ञो यस्य तुष्यति ॥ 01-068-030॥ |
Yama, the son of Surya, takes no account of the sins of him with whom Narayana the witness of all acts, is gratified. But he with whom Narayana is not gratified is tortured for his sins by Yama. |
ಹೃದಯಸ್ಥಿತ ಕರ್ಮಸ್ನಾಕ್ಷೀ ಕೇತ್ರಜ್ಞನನ್ನು ಸಂತುಷ್ಟಗೊಳಿಸುವವನ ದುಷ್ಕೃತವನ್ನು ವೈವಸ್ವತ ಯಮನೂ ಸಹ ಗಣನೆಗೆ ತೆಗೆದುಕೊಳ್ಳುವುದಿಲ್ಲ. |
| न तु तुष्यति यस्यैष पुरुषस्य दुरात्मनः। तं यमः पापकर्माणं निर्यातयति दुष्कृतम् ॥ 01-068-031॥ |
He who degrades himself by representing his self falsely, the Gods never bless. Even his own soul blesses him not. |
ಆದರೆ ಆ ಪುರುಷನನ್ನು ತೃಪ್ತಿಗೊಳಿಸದ ದುರಾತ್ಮನ ಪಾಪ ಕರ್ಮಗಳನ್ನು ಯಮನು ದುಷ್ಕೃತವೆಂದು ಪರಿಗಣಿಸುತ್ತಾನೆ. |
| अवमन्यात्मनात्मानमन्यथा प्रतिपद्यते। देवा न तस्य श्रेयांसो यस्यात्मापि न कारणम् ॥ 01-068-032॥ |
He desecrated his own self, otherwise the gods do not give credit to the assertor. his Even his own self does not give him credit. |
ತನ್ನ ಆತ್ಮವನ್ನು ಅನಾದರಣಿಸಿ, ತನ್ನನ್ನು ಅನ್ಯಥಾ ಪ್ರತಿಪಾದಿಸುವವನಿಗೆ ದೇವತೆಗಳು ಶ್ರೇಯಸ್ಸನ್ನು ನೀಡುವುದಿಲ್ಲ. ಅವನ ಸ್ವಂತ ಆತ್ಮವೂ ಕೂಡ ಅವನಿಗೆ ಶ್ರೇಯಸ್ಸನ್ನು ನೀಡುವುದಿಲ್ಲ. |
| स्वयं प्राप्तेति मामेवं मावमंस्थाः पतिव्रताम्। अर्घ्यार्हां नार्चयसि मां स्वयं भार्यामुपस्थिताम् ॥ 01-068-033॥ |
I am a wife devoted to my husband. I have come of my own accord, it is true. But do not, on that account, treat me with disrespect. I am your wife and, therefore, deserve to be treated respectfully. Will you not treat me so, because I have come here of my own accord? |
ಸ್ವಯಂ ತಾನಾಗಿಯೇ ಇಲ್ಲಿಗೆ ಬಂದಿರುವ ಪತಿವ್ರತೆಯನ್ನು ಅಪಮಾನಿಸಬೇಡ. ಅರ್ಫ್ಯಾರ್ಹ ನನ್ನನ್ನು ನಿನ್ನ ಭಾರ್ಯೆಯನ್ನು ಸತ್ಕರಿಸದೇ ಅವಹೇಳನಮಾಡಬೇಡ. |
| किमर्थं मां प्राकृतवदुपप्रेक्षसि संसदि। न खल्वहमिदं शून्ये रौमि किं न शृणोषि मे ॥ 01-068-034॥ |
In the presence of so many, why do you treat me like an ordinary woman? I am not certainly crying in the wilderness. Do you not hear me? |
ಈ ಸಂಸತ್ತಿನಲ್ಲಿ ನನ್ನನ್ನು ಏಕೆ ಓರ್ವ ಸಾಮಾನ್ಯ ಸ್ತ್ರೀಯಂತೆ ಕಾಣುತ್ತಿರುವೆ? ನಾನು ಸುಮ್ಮನೇ ಇಲ್ಲಿ ರೋದಿಸುತ್ತಿಲ್ಲವಲ್ಲ! ನನ್ನ ಮಾತುಗಳನ್ನು ನೀನು ಏಕೆ ಕೇಳುತ್ತಿಲ್ಲ? |
| यदि मे याचमानाया वचनं न करिष्यसि। दुःषन्त शतधा मूर्धा ततस्तेऽद्य फलिष्यति ॥ 01-068-035॥ |
But if you refuse to do what I am requesting you for, O Dushanta, my head this moment shall burst into a hundred pieces! |
ದುಃಷಂತ। ಯಾಚಸುತ್ತಿರುವ ನನ್ನ ಮಾತಿನಂತೆ ನಡೆದುಕೊಳ್ಳದಿದ್ದರೆ ನಿನ್ನ ತಲೆಯು ನೂರಾರು ಚೂರುಗಳಾಗಿ ಒಡೆದುಹೋಗುತ್ತದೆ. |
| भार्यां पतिः संप्रविश्य स यस्माज्जायते पुनः। जायाया इति जायात्वं पुराणाः कवयो विदुः ॥ 01-068-036॥ |
The husband entering the womb of the wife comes out himself in the form of the son. Therefore is the wife called by those knowlegable of the Vedas as Jaaya (जाया) (she of whom one is born). |
ಪತಿಯು ತನ್ನ ಭಾರ್ಯೆಯನ್ನು ಪ್ರವೇಶಿಸಿ ಪುನಃ ಹುಟ್ಟಿಬರುವುದರಿಂದ ಭಾರ್ಯೆಯನ್ನು ಜಾಯಾ ಎಂದು ಪುರಾಣಗಳು, ಕವಿಗಳು ಮತ್ತು ವಿದ್ವಾಂಸರು ಕರೆಯುತ್ತಾರೆ. |
| यदागमवतः पुंसस्तदपत्यं प्रजायते। तत्तारयति संतत्या पूर्वप्रेतान्पितामहान् ॥ 01-068-037॥ |
And the son that is so born onto persons knowlegable of the Vedic Mantras rescues the spirits of deceased ancestors. |
ಒಳ್ಳೆಯವನು ತನ್ನ ಪತ್ನಿಯಲ್ಲಿ ಮಗನನ್ನು ಪಡೆಯುತ್ತಾನೆ ಮತ್ತು ಆ ಸಂತತಿಯಿಂದ ತನ್ನ ಪೂರ್ವ ಪಿತಾಮಹರ ಪ್ರೇತಾತ್ಮಗಳನ್ನು ಕಾಪಾಡುತ್ತಾನೆ. |
| पुन्नाम्नो नरकाद्यस्मात्पितरं त्रायते सुतः। तस्मात्पुत्र इति प्रोक्तः स्वयमेव स्वयम्भुवा ॥ 01-068-038॥ |
And because the son rescues ancestors from the hell called “Put”, therefore, have he been called by the self-existent himself as Puttra (the rescuer from Put). |
ಸುತನು ಪು ಎಂಬ ಹೆಸರಿನ ನರಕದಿಂದ ತನ್ನ ಪಿತೃಗಳನ್ನು ದಾಟಿಸುವುದರಿಂದ ಸ್ವಯಂ ಸ್ವಯಂಭುವೇ ಅವನನ್ನು ಪುತ್ರ ಎಂದು ಕರೆದಿದ್ದಾನೆ. |
| सा भार्या या गृहे दक्षा सा भार्या या प्रजावती। सा भार्या या पतिप्राणा सा भार्या या पतिव्रता ॥ 01-068-039॥ |
She is a true wife who is skillful in household affairs. She is a true wife who has borne a son. She is a true wife whose heart is devoted to her lord. She is a true wife who knows none but her lord. |
ಗೃಹವನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗುವವಳೇ ಭಾರ್ಯೆ. ಮಕ್ಕಳಿಗೆ ತಾಯಿಯಾಗುವವಳೇ ಭಾರ್ಯೆ. ಪತಿಯಲ್ಲಿಯೇ ಪ್ರಾಣವನ್ನಿಟ್ಟವಳು ಭಾರ್ಯೆ. ಮತ್ತು ಪತಿವ್ರತೆಯಾದವಳೇ ಭಾರ್ಯೆ. |
| अर्धं भार्या मनुष्यस्य भार्या श्रेष्ठतमः सखा। भार्या मूलं त्रिवर्गस्य भार्या मित्रं मरिष्यतः ॥ 01-068-040॥ |
The wife is a man’s half. The wife is the first of friends. The wife is the root of religion, profit, and desire. The wife is the root of salvation. |
ಮನುಷ್ಯನ ಅರ್ಧವೇ ಭಾರ್ಯೆ. ಭಾರ್ಯೆಯೇ ಅವನ ಶ್ರೇಷ್ಠತಮ ಸಖ. ಭಾರ್ಯೆಯು ತ್ರಿವರ್ಗಗಳ (ಧರ್ಮ, ಅರ್ಥ ಮತ್ತು ಕಾಮ) ಮೂಲ. ಮತ್ತು ಭಾರ್ಯೆಯೇ ಮನುಷ್ಯನ ವಿತ್ರೆ. |
| भार्यावन्तः क्रियावन्तः सभार्या गृहमेधिनः। भार्यावन्तः प्रमोदन्ते भार्यावन्तः श्रियान्विताः ॥ 01-068-041॥ |
They that have wives can perform religious acts. They that have wives can lead domestic lives. They that have wives have the means to be cheerful. They that have wives can achieve good fortune. |
ಭಾರ್ಯೆಯನ್ನು ಪಡೆದವನು ಕ್ರಿಯೆಗಳನ್ನು ಮಾಡಬಹುದು. ಭಾರ್ಯೆಯನ್ನು ಹೊಂದಿದವನು ಗೃಹಸ್ಥಾಶ್ರಮವನ್ನು ನಡೆಸಬಹುದು. ಭಾರ್ಯೆಯನ್ನು ಹೊಂದಿದವರು ಸಂತೋಷದಿಂದಿರುವರು. ಮತ್ತು ಭಾರ್ಯೆಯನ್ನು ಹೊಂದಿದವರು ಧನವನ್ನೂ ಹೊಂದುವರು. |
| सखायः प्रविविक्तेषु भवन्त्येताः प्रियंवदाः। पितरो धर्मकार्येषु भवन्त्यार्तस्य मातरः ॥ 01-068-042॥ |
Sweet-speeched wives are friends on occasions of joy. They are as fathers on occasions of religious acts. They are mothers in sickness and woe. |
ಅವಳು ಎಕಾಂತದಲ್ಲಿ ಸಖನಂತೆ ಪ್ರೀತಿಯ ಮಾತುಗಳನ್ನಾಡುತ್ತಾಳೆ, ಧರ್ಮಕಾರ್ಯಗಳಲ್ಲಿ ತಂದೆಯಂತಿರುತ್ತಾಳೆ ಮತ್ತು ಆರ್ತ ಸಮಯದಲ್ಲಿ ತಾಯಿಯಂತಿರುತ್ತಾಳೆ. |
| कान्तारेष्वपि विश्रामो नरस्याध्वनिकस्य वै। यः सदारः स विश्वास्यस्तस्माद्दाराः परा गतिः ॥ 01-068-043॥ |
Even in the deep woods to a traveller a wife is his refreshment and solace. He that have a wife is trusted by all. A wife, therefore, is one’s most valuable possession. |
ಕಾನನದಲ್ಲಿ ಅಲೆಯುತ್ತಿರುವವನಿಗೆ ಕೂಡ ಅವಳು ವಿಶ್ರಾಮವಿದ್ದಂತೆ. ಪತ್ನಿಸಹತನಾದವನನ್ನು ಎಲ್ಲರೂ ವಿಶ್ವಾಸದಿಂದ ಕಾಣುತ್ತಾರೆ. ಆದುದರಿಂದ ಪತ್ನಿಯು ಪರಮ ಗತಿಯನ್ನು ನೀಡುತ್ತಾಳೆ. |
| संसरन्तमपि प्रेतं विषमेष्वेकपातिनम्। भार्यैवान्वेति भर्तारं सततं या पतिव्रता ॥ 01-068-044॥ |
Even when the husband leaving this world goes into the region of Yama, it is the devoted wife that accompanies him there! |
ಪತಿಯು ಯಮಲೋಕಕ್ಕೆ ಹೋದಾಗ ಅವನನ್ನು ಹಿಂಬಾಲಿಸುವವಳು ಅವನ ಪತಿವ್ರತೆ ಪತ್ನಿಯೇ! |
| प्रथमं संस्थिता भार्या पतिं प्रेत्य प्रतीक्षते। पूर्वं मृतं च भर्तारं पश्चात्साध्व्यनुगच्छति ॥ 01-068-045॥ |
A wife going before waits for the husband. But if the husband goes before, the chaste wife follows close. |
ಒಂದುವೇಳೆ ಭಾರ್ಯೆಯೇ ಮೊದಲು ತೀರಿಕೊಂಡರೆ ಅವಳು ತನ್ನ ಪತಿಗಾಗಿ ಅಲ್ಲಿ ಕಾಯುತ್ವಾಳೆ. ಗಂಡನೇ ಮೊದಲು ತೀರಿಕೊಂಡರೆ, ಆ ಸಾಧ್ವಿಯು ಅವನನ್ನು ಅನುಸರಿಸುತ್ತಾಳೆ. |
| एतस्मात्कारणाद्राजन्पाणिग्रहणमिष्यते। यदाप्नोति पतिर्भार्यामिह लोके परत्र च ॥ 01-068-046॥ |
For these reasons, O king, does marriage exist. The husband enjoys the companionship of the wife both in this and in the other worlds. |
ರಾಜನ್! ಈ ಎಲ್ಲ ಕಾರಣಗಳಿಂದ ಪಾಣಿಗ್ರಹಣವಿದೆ. ಪತಿಯು ತನ್ನ ಭಾರ್ಯೆಯನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಅನುಭವಿಸುತ್ತಾನೆ. |
| आत्मात्मनैव जनितः पुत्र इत्युच्यते बुधैः। तस्माद्भार्यां नरः पश्येन्मातृवत्पुत्रमातरम् ॥ 01-068-047॥ |
It has been said by learned persons that one is himself born as one’s son. Therefore, a man whose wife has borne a son should look upon her as his mother. |
ತಾನೇ ತನ್ನ ಪುತ್ರನಾಗಿ ಜನಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ಮನುಷ್ಯನು ತನ್ನ ಮಗನ ತಾಯಿಯನ್ನು ತನ್ನ ತಾಯಿಯ ಹಾಗೆಯೇ ಕಾಣಬೇಕು. |
| भार्यायां जनितं पुत्रमादर्शे स्वमिवाननम्। ह्लादते जनिता प्रेष्क्य स्वर्गं प्राप्येव पुण्यकृत् ॥ 01-068-048॥ |
Beholding the face of the son one has begotten upon his wife, like his own face in a mirror, one feels as happy as a virtuous man, on attaining to heaven. |
ಕನ್ನಡಿಯಲ್ಲಿ ಕಂಡಂತೆ ಭಾರ್ಯೆಯಿಂದ ಜನಿಸಿದ ಪುತ್ರನ ಮುಖದಲ್ಲಿ ತನ್ನನ್ನು ತಾನೇ ಕಾಣುತ್ತಾನೆ ಮತ್ತು ಪುಣ್ಯಕರ್ಮಗಳಿಂದ ಸ್ವರ್ಗವನ್ನು ಸೇರಿದ ಸಂತೋಷವನ್ನು ಪಡೆಯುತ್ತಾನೆ. |
| दह्यमाना मनोदुःखैर्व्याधिभिश्चातुरा नराः। ह्लादन्ते स्वेषु दारेषु घर्मार्ताः सलिलेष्विव ॥ 01-068-049॥ |
Men scorched by mental grief, or suffering under bodily pain, feel as much refreshed in the companionship of their wives as a perspiring person in a cool bath. |
ಮನೋದುಃಖ, ವ್ಯಾಧಿ ಮತ್ತು ಆತುರತೆಯಿಂದ ಸುಡುತ್ತಿದ್ದ ನರನಿಗೆ ತನ್ನ ಹೆಂಡತಿಯನ್ನು ನೋಡಿದರೆ ಬೇಸಿಗೆಯ ಬಿಸಿಲಿನಿಂದ ಬಳಲಿತ್ತಿರುವವನಿಗೆ ತಣೀರಿನ ಸ್ನಾನಮಾಡಿದಷ್ಟು ಸಂತೋಷವಾಗುತ್ತದೆ. |
| सुसंरब्धोऽपि रामाणां न ब्रूयादप्रियं बुधः। रतिं प्रीतिं च धर्मं च तास्वायत्तमवेक्ष्य च ॥ 01-068-050॥ |
No man, even in anger, should ever do anything that is disagreeable to his wife, seeing that happiness, joy, and virtue,–everything depends on the wife. |
ತಿಳಿದವನು ಕೋಪದಲ್ಲಿಯೂ ತನ್ನ ಪತ್ನಿಗೆ ಇಷ್ಟವಾಗಿಲ್ಲದುದನ್ನು ಮಾಡಬಾರದು; ಯಾಕೆಂದರೆ, ಸಂತೋಷ, ಪ್ರೀತಿ, ಧರ್ಮ ಮತ್ತು ಎಲ್ಲವೂ ಪತ್ನಿಯನ್ನು ಅವಲಂಬಿಸಿರುತ್ತದೆ. |
| आत्मनो जन्मनः क्षेत्रं पुण्यं रामाः सनातनम्। ऋषीणामपि का शक्तिः स्रष्टुं रामामृते प्रजाः ॥ 01-068-051॥ |
The self-generating eternal virtuous quality is female. Even Rishis cannot create creatures without women. |
ತನ್ನನ್ನು ತಾನೇ ಹುಟ್ಟಿಸಿಕೊಳ್ಳುವ ಸನಾತನ ಪುಣ್ಯ ಕ್ಷೇತ್ರ ಹೆಣ್ಣು. ಖುಷಿಗಳಿಗೂ ಕೂಡ ಹೆಣ್ಣಿಲ್ಲದೇ ಸಂತತಿಯನ್ನು ಹುಟ್ಟಿಸಲು ಶಕ್ತಿಯೆಲ್ಲಿದೆ? |
| परिपत्य यदा सूनुर्धरणीरेणुगुण्ठितः। पितुराश्लिष्यतेऽङ्गानि किमिवास्त्यधिकं ततः ॥ 01-068-052॥ |
What happiness is greater than what the father feels when the son running towards him, even though his body be covered with dust, clasps his limbs? |
ಧೂಳು ಕೊಳಕುಗಳಿಂದ ತುಂಬಿದ್ದರೂ ತನ್ನ ಮಗನು ಓಡಿ ಬಂದು ಬಿಗಿದಪ್ಪಿದಾಗ ಆಗುವ ಸಂತೋಷಕ್ಕಿಂತಲೂ ಹೆಚ್ಚಿನ ಸಂತೋಷ ಇನ್ನು ಯಾವುದಿದೆ? |
| स त्वं स्वयमनुप्राप्तं साभिलाषमिमं सुतम्। प्रेक्षमाणं च काक्षेण किमर्थमवमन्यसे ॥ 01-068-053॥ |
Why then do you treat with indifference such a son, who has approached you by himself and who cast wishful glances towards you for climbing your knees? |
ತಾನಾಗಿಯೇ ಬಂದಿರುವ, ನಿನ್ನನ್ನು ಅಭಿಲಾಷೆಯ ದೃಷ್ಠಿಯಿಂದ ನೋಡುತ್ತಿರುವ ಈ ನಿನ್ನ ಮಗನನ್ನು ನೀನು ಏಕೆ ತಿರಸ್ಕಾರ ದೃಷ್ಠಿಯಿಂದ ನೋಡುತ್ತಿರುವೆ? |
| अण्डानि बिभ्रति स्वानि न भिन्दन्ति पिपीलिकाः। न भरेथाः कथं नु त्वं धर्मज्ञः सन्स्वमात्मजम् ॥ 01-068-054॥ |
Even ants support their own eggs without destroying them; then why should not you, a virtuous man that you are, support your own child? |
ಇರುವೆಗಳೂ ಕೂಡ ತಮ್ಮ ಮೊಟ್ಟೆಗಳನ್ನು ಒಡೆಯದ ಹಾಗೆ ರಕ್ಷಿಸುತ್ತವೆ. ಧರ್ಮಜ್ಞನಾದ ನೀನು ಏಕೆ ನಿನ್ನ ಸ್ವಂತ ಮಗನನ್ನು ಪಾಲಿಸುವುದಿಲ್ಲ? |
| न वाससां न रामाणां नापां स्पर्शस्तथा सुखः। शिशोरालिङ्ग्यमानस्य स्पर्शः सूनोर्यथा सुखः ॥ 01-068-055॥ |
The touch of soft sandal paste, of women, of (cool) water is not so agreeable as the touch of one’s own infant son locked in one’s embrace. |
ತನ್ನ ಮಗುವಿನ ಗಾಢ ಆಲಿಂಗನ, ಸ್ಪರ್ಷ ಮತ್ತು ಸುವಾಸನೆಯು ಕೊಡುವಷ್ಟು ಸುಖವನ್ನು ಸುಗಂಧವಾಗಲೀ, ಸ್ತ್ರೀಯಾಗಲೀ, ನೀರಾಗಲೀ ಕೊಡುವುದಿಲ್ಲ. |
| ब्राह्मणो द्विपदां श्रेष्ठो गौर्वरिष्ठा चतुष्पदाम्। गुरुर्गरीयसां श्रेष्ठः पुत्रः स्पर्शवतां वरः ॥ 01-068-056॥ |
As a Brahmana is the foremost of all bipeds, a cow, the foremost of all quadrupeds, a protector, the foremost of all superiors, so is the son the foremost of all objects, agreeable to the touch. |
ದ್ವಿಪದರಲ್ಲಿ ಬ್ರಾಹ್ಮಣರು ಹೇಗೆ ಶ್ರೇಷ್ಠರೋ, ಚತುಷ್ಪದರಲ್ಲಿ ಗೋವುಗಳು ಹೇಗೆ ಶ್ರೇಷ್ಠವೋ, ಹಿರಿಯರಲ್ಲಿ ಗುರುವು ಹೇಗೆ ಶ್ರೇಷ್ಠವೋ, ಹಾಗೆ ಸ್ಪರ್ಷದಲ್ಲಿ ಪುತ್ರನೇ ಶ್ರೇಷ್ಠ |
| स्पृशतु त्वां समाश्लिष्य पुत्रोऽयं प्रियदर्शनः। पुत्रस्पर्शात्सुखतरः स्पर्शो लोके न विद्यते ॥ 01-068-057॥ |
Let, therefore, this handsome child touch you in embrace. There is nothing in the world more agreeable to the touch than the embrace of one’s son. |
ಈ ಪ್ರಿಯದರ್ಶನ ಪುತ್ರನು ನಿನ್ನನ್ನು ಆಲಿಂಗಿಸಿ ಸ್ಪರ್ಷಿಸಲಿ. ಪುತ್ರಸ್ಪರ್ಷ ಸುಖಕ್ಕಿಂತ ಹೆಚ್ಚಿನದು ಈ ಲೋಕದಲ್ಲಿ ಇನ್ನಿಲ್ಲ. |
| त्रिषु वर्षेषु पूर्णेषु प्रजाताहमरिंदम। इमं कुमारं राजेन्द्र तव शोकप्रणाशनम् ॥ 01-068-058॥ |
O chastiser of foes, I have brought forth this child, O monarch, capable of dispelling all your sorrows after bearing him in my womb for full three years. |
ಅರಿಂದವು। ರಾಜೇಂದ್ರ! ಮೂರು ವರ್ಷಗಳು ಪೂರ್ಣವಾದ ನಂತರ ನಾನು ನಿನ್ನ ಈ ಶೋಕಪ್ರಾಣಾಶ ಕುಮಾರನಿಗೆ ಜನ್ಮವಿತ್ತಿದ್ದೇನೆ. |
| आहर्ता वाजिमेधस्य शतसंख्यस्य पौरव। इति वागन्तरिक्षे मां सूतकेऽभ्यवदत्पुरा ॥ 01-068-059॥ |
O monarch of Puru’s race, “He shall perform a hundred horse-sacrifices”–these were the words uttered from the sky when I was in the lying-in room. |
ಪೌರವ! ಹಿಂದೆ ನಾನು ಸೂತಕದಲ್ಲಿದ್ದಾಗ ಇವನು ಒಂದು ನೂರು ಅಶ್ಚಮೇಧ ಯಜ್ಞಗಳನ್ನು ನಡೆಸುತ್ತಾನೆ ಎಂದು ಆಕಾಶದಲ್ಲಿ ಅಶರೀರವಾಣಿಯಾಯಿತು. |
| ननु नामाङ्कमारोप्य स्नेहाद्ग्रामान्तरं गताः। मूर्ध्नि पुत्रानुपाघ्राय प्रतिनन्दन्ति मानवाः ॥ 01-068-060॥ |
Indeed, men going into places remote from their homes take up there others’ children on their laps and smelling their heads feel great happiness. |
ಮನೆಯನ್ನು ಬಿಟ್ಟು ದೂರ ಪ್ರಯಾಣಮಾಡುವವರು ಬೇರೊಬ್ಬರ ಮಕ್ಕಳನ್ನು ತಮ್ಮ ತೊಡೆಯಮೇಲಿರಿಸಿ, ಅವರ ತಲೆಯನ್ನು ಸೂಸಿ ತಮ್ಮ ಮಕ್ಕಳ ಆನಂದವನ್ನು ಪಡೆಯುತ್ತಾರೆ. |
| वेदेष्वपि वदन्तीमं मन्त्रवादं द्विजातयः। जातकर्मणि पुत्राणां तवापि विदितं तथा ॥ 01-068-061॥ |
You know that Brahmanas repeat these Vedic mantras on the occasion of the consecrating rites of infancy. |
ಮಕ್ಕಳ ಜಾತಕರ್ಮದ ಸಮಯದಲ್ಲಿ ದ್ವಿಜರು ಹೇಳುವ ಈ ಮಂತ್ರಗಳನ್ನು ನೀನೂ ಕೂಡ ಕೇಳಿರಬಹುದು. |
| अङ्गादङ्गात्संभवसि हृदयादभिजायसे। आत्मा वै पुत्रनामासि स जीव शरदः शतम् ॥ 01-068-062॥ |
“You are born, O son, of my body! You are sprung from my heart. You are myself in the form of a son. May you live to a hundred years! |
“ನೀನು ನನ್ನ ಅಂಗಗಳಿಂದ ಸಂಭವಿಸಿರುವೆ. ಹೃದಯದಿಂದ ಹುಟ್ಟಿರುವೆ. ಪುತ್ರನಾಗಿರುವ ನೀನು ನಾನೇ. ನೂರು ಸಂವತ್ಸರಗಳನ್ನು ಜೀವಿಸು. |
| पोषो हि त्वदधीनो मे संतानमपि चाक्षयम्। तस्मात्त्वं जीव मे वत्स सुसुखी शरदां शतम् ॥ 01-068-063॥ |
My life depends on you, and the continuation of my race also, on you. Therefore, O son, may you live in great happiness to a hundred years.” |
ನನ್ನ ಪೋಷಣೆಯ ನಿನ್ನನ್ನವಲಂಬಿಸಿದೆ. ನನ್ನ ಸಂತಾನವೂ ನಿನ್ನಿಂದ ಅಕ್ಷಯವಾಗುತ್ತದೆ. ನಿನ್ನಿಂದಲೇ ನನಗೆ ಜೀವ. ವತ್ಸ । ನೂರು ಸಂವತ್ಸರಗಳು ಸುಖವಾಗಿ ಬಾಳು.” |
| त्वदङ्गेभ्यः प्रसूतोऽयं पुरुषात्पुरुषोऽपरः। सरसीवामलेऽऽत्मानं द्वितीयं पश्य मे सुतम् ॥ 01-068-064॥ |
He has sprung from your body, this second being from you! Behold yourself in your son, as you behold your image in the clear lake. |
ಇವನು ನಿನ್ನ ಅಂಗಗಳಿಂದ ಹುಟ್ಟಿದವನು, ಪುರುಷನಿಂದ ಹುಟ್ಟಿದ ಇನ್ನೊಬ್ಬ ಪುರುಷನು. ತಿಳಿ ಕೊಳದಂತಿರುವ ನಿನ್ನ ಮಗನಲ್ಲಿ ನಿನ್ನನ್ನೇ ಕಾಣು. |
| यथा ह्याहवनीयोऽग्निर्गार्हपत्यात्प्रणीयते। तथा त्वत्तः प्रसूतोऽयं त्वमेकः सन्द्विधा कृतः ॥ 01-068-065॥ |
As the sacrificial fire is kindled from the domestic one, so have this one sprung from you. Though one, you have divided yourself. |
ಗಾರ್ಹಪತ್ಯದ ಅಗ್ನಿಯಿಂದ ಹೇಗೆ ಯಜ್ಞೇಶ್ವರನು ಹುಟ್ಟುತ್ತಾನೋ ಹಾಗೆ ಈ ಮಗುವೂ ಕೂಡ ನಿನ್ನಿಂದಲೇ ಹುಟ್ಟಿದವನು. ನೀನು ಒಬ್ಬನೇ ಆದರೂ ನಿನ್ನನ್ನು ನೀನೇ ಎರಡಾಗಿ ವಿಭಜನೆಗೊಂಡಿದ್ದೀಯೆ. |
| मृगापकृष्टेन हि ते मृगयां परिधावता। अहमासादिता राजन्कुमारी पितुराश्रमे ॥ 01-068-066॥ |
In course of hunting while engaged in pursuit of the deer, I was approached by you, O king, I who was then maiden in the asylum of my father. |
ರಾಜನ್! ಮೃಗಗಳ ಬೇಟೆಗೆಂದು ಬಂದು ಆಯಾಸಗೊಂಡಾಗ ನೀನು ಕುಮಾರಿಯಾಗಿದ್ದ ನನ್ನನ್ನು ನನ್ನ ತಂದೆಯ ಆಶ್ರಮದಲ್ಲಿ ಪಡೆದಿದ್ದೆ. |
| उर्वशी पूर्वचित्तिश्च सहजन्या च मेनका। विश्वाची च घृताची च षडेवाप्सरसां वराः ॥ 01-068-067॥ |
Urvasi, Purvachitti, Sahajanya, Menaka, Viswachi and Ghritachi, these are the six foremost of Apsaras. |
ಊರ್ವಶೀ, ಪೂರ್ವಚಿತ್ತಿ ಸಹಜನ್ಯ, ಮೇನಕಾ, ವಿಶ್ವಾ, ಮತ್ತು ಘೃತಾಚೀ ಈ ಆರು ಮಂದಿ ಅಪ್ಸರೆಯರಲ್ಲಿ ಶ್ರೇಷ್ಠರು. |
| तासां मां मेनका नाम ब्रह्मयोनिर्वराप्सराः। दिवः संप्राप्य जगतीं विश्वामित्रादजीजनत् ॥ 01-068-068॥ |
Amongst them again, Menaka, born of Brahman, is the first. Descending from heaven on Earth, after intercourse with Viswamitra, she gave birth to me. |
ಅವರಲ್ಲಿಯೇ ಶ್ರೇಷ್ಠ ಬ್ರಹ್ಮಯೋನಿಯಲ್ಲಿ ಜನಿಸಿದ ಮೇನಕಾ ಎಂಬ ಹೆಸರಿನ ಅಪ್ಸರೆಯು ಸ್ವರ್ಗದಿಂದ ಕೆಳಗಿಳಿದು ವಿಶ್ವಾಮಿತ್ರನಿಂದ ನನಗೆ ಜನ್ಮವಿತ್ತಳು. |
| सा मां हिमवतः पृष्ठे सुषुवे मेनकाप्सराः। अवकीर्य च मां याता परात्मजमिवासती ॥ 01-068-069॥ |
That celebrated Apsara, Menaka, brought me forth in a valley of Himavat. Bereft of all affection, she went away, cast me there as if I were the child of somebody else. |
ಅಪ್ಸರೆ ಮೇನಕಾ ನನ್ನನ್ನು ಹಿಮಾಲಯದ ತಪ್ಪಲಿನಲ್ಲಿ ಜನ್ಮವಿತ್ತಳು. ಆ ವಾತ್ಸಲ್ಯವಿಹೀನಳು ಬೇರೆ ಯಾರದ್ದೋ ಮಗುವಿನಂತೆ ನನ್ನನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು. |
| किं नु कर्माशुभं पूर्वं कृतवत्यस्मि जन्मनि। यदहं बान्धवैस्त्यक्ता बाल्ये संप्रति च त्वया ॥ 01-068-070॥ |
What sinful act did I do, of old, in some other life that I was in infancy cast away by my parents and at present am cast away by you! |
ಹಿಂದಿನ ಜನ್ಮದಲ್ಲಿ ನಾನು ಯಾವ ಅಶುಭ ಕರ್ಮವನ್ನು ಮಾಡಿದ್ದೆನೋ ಏನೋ ಬಾಲ್ಯದಲ್ಲಿಯೇ ನನ್ನ ತಂದೆತಾಯಿಗಳು ಬಿಟ್ಟುಹೋದರು. ಈಗ ನಿನ್ನಿಂದ ನಾನು ಪರಿತ್ಯಜಿಸಲ್ಪಟ್ಟಿದ್ದೇನೆ. |
| कामं त्वया परित्यक्ता गमिष्याम्यहमाश्रमम्। इमं तु बालं संत्यक्तुं नार्हस्यात्मजमात्मना ॥ 01-068-071॥ |
Put away by you, I am ready to return to the refuge of my father. But it is not suitable for you to cast off this child who is your own.” |
ನಿನ್ನಿಂದ ಪರಿತ್ಯಕ್ಷಳಾದರೆ ನಾನು ಆಶ್ರಮಕ್ಕೆ ಹಿಂದಿರುಗಲು ಸಿದ್ಧ ಇದ್ದೇನೆ. ಆದರೆ ನಿನ್ನದೇ ಮಗನಾಗಿರುವ ಈ ಬಾಲಕನನ್ನು ನೀನು ತ್ಯಜಿಸುವುದು ಸರಿಯಲ್ಲ.” |
| दुःषन्त उवाच। न पुत्रमभिजानामि त्वयि जातं शकुन्तले। असत्यवचना नार्यः कस्ते श्रद्धास्यते वचः ॥ 01-068-072॥ |
Hearing all this, Dushanta said, “O Sakuntala, I do not know having begot upon you this son. Women generally speak untruths. Who shall believe in your words? |
ದುಃಷಂತನು ಹೇಳಿದನು: “ಶಕುಂತಲೇ। ನಿನ್ನಲ್ಲಿ ಹುಟ್ಟಿದ ಈ ಪುತ್ರನು ನನಗೆ ಗೊತ್ತೇ ಇಲ್ಲ. ಸಾಧಾರಣವಾಗಿ ನಾರಿಯರು ಅಸತ್ಯವನ್ನೇ ನುಡಿಯುವರು. ನಿನ್ನ ಈ ಮಾತುಗಳನ್ನು ಯಾರುತಾನೆ ನಂಬುವರು? |
| मेनका निरनुक्रोशा बन्धकी जननी तव। यया हिमवतः पृष्ठे निर्माल्येव प्रवेरिता ॥ 01-068-073॥ |
Destitute of all affection, the lewd Menaka is your mother, and she cast you off on the surface of the Himavat as one throws away, after the worship is over, the flowery offering made to his gods. |
ಅನುಕಂಪವಿಲ್ಲದ ವೇಶ್ಯೆ ನಿನ್ನ ಜನನಿ ಮೇನಕೆಯು ದೇವರಿಗೇರಿಸಿದ ಮಾಲೆಯನ್ನು ಹೇಗೋ ಹಾಗೆ ನಿನ್ನನ್ನು ಹಿಮಾಲಯದಲ್ಲಿ ಬಿಸುಟು ಹೋದಳು. |
| स चापि निरनुक्रोशः क्षत्रयोनिः पिता तव। विश्वामित्रो ब्राह्मणत्वे लुब्धः कामपरायणः ॥ 01-068-074॥ |
Your father too of the Kshatriya race, the lustful Viswamitra, who was tempted to become a Brahmana, is destitute of all affection. |
ಕ್ಷತ್ರಿಯನಾಗಿ ಹುಟ್ಟಿಯೂ ಬಾಹ್ಮಣತ್ವದ ಆಸೆಗೊಳಗಾದ ಕಾಮಪರಾಯಣ ನಿನ್ನ ಪಿತ ವಿಶ್ವಾಮಿತ್ರನಿಗೂ ಅನುಕಂಪವಿರಲಿಲ್ಲ. |
| मेनकाप्सरसां श्रेष्ठा महर्षीणां च ते पिता। तयोरपत्यं कस्मात्त्वं पुंश्चलीवाभिधास्यसि ॥ 01-068-075॥ |
However, Menaka is the first of Apsaras, and your father also is the first of Rishis. Being their daughter, why do you speak like a lewd woman? |
ಮೇನಕೆಯು ಅಪ್ಸರೆಯರಲ್ಲಿ ಮತ್ತು ನಿನ್ನ ಪಿತನು ಮಹರ್ಷಿಗಳಲ್ಲಿ ಶ್ರೇಷ್ಠರೆನಿಸಿದರೂ ಅವರ ಮಗಳಾದ ನೀನು ಯಾವ ಕಾರಣಕ್ಕಾಗಿ ಈ ರೀತಿ ನೆಲೆಗೋಸ್ಕರ ಅಲೆಯುತ್ತಿರುವೆ? |
| अश्रद्धेयमिदं वाक्यं कथयन्ती न लज्जसे। विशेषतो मत्सकाशे दुष्टतापसि गम्यताम् ॥ 01-068-076॥ |
Your words deserve no credit. Are you not ashamed to speak them, especially before me? Go hence, O wicked woman in ascetic guise. |
ನಿನ್ನ ಈ ಮಾತುಗಳಲ್ಲಿ ಸ್ವಲ್ಪವೂ ವಿಶ್ವಾಸ ಬರುತ್ತಿಲ್ಲ. ಈ ರೀತಿ ವಿಶೇಷತಃ ನನ್ನ ಎದಿರು ಇದನ್ನೆಲ್ಲಾ ಹೇಳಿಕೊಳ್ಳಲು ನಾಚಿಕೆಯಾದರೂ ಆಗುತ್ತಿಲ್ಲವೇ? ದುಷ್ಟ ತಾಪಸಿ! ಹೊರಟು ಹೋಗು. |
| क्व महर्षिः सदैवोग्रः साप्सरा क्व च मेनका। क्व च त्वमेवं कृपणा तापसीवेषधारिणी ॥ 01-068-077॥ |
Where is that foremost of great Rishis, where also is that Apsara Menaka? And why are you, low as you are, in the guise of an ascetic? |
ಸದ್ಯವರಲ್ಲಿ ಅಗ್ರ ಮಹರ್ಷಿಯೆಲ್ಲಿ? ಅಪ್ಸರೆ ಮೇನಕೆ ಎಲ್ಲಿ? ತಾಪಸೀ ವೇಷಧಾರಿಣಿ ಕೃಪಣೆ ನೀನಾದರೂ ಎಲ್ಲಿದ್ದೀಯೆ? |
| अतिकायश्च पुत्रस्ते बालोऽपि बलवानयम्। कथमल्पेन कालेन शालस्कन्ध इवोद्गतः ॥ 01-068-078॥ |
Your child too is grown up. You say he is a boy, but he is very strong. How has he soon grown with “tallish stature like a sala tree?”” |
ನಿನ್ನ ಈ ಪುತ್ರನು ಅತಿಕಾಯನಾಗಿ ತೋರುತ್ತಿದ್ದಾನೆ, ಬಾಲಕನಾದರೂ ಬಲಶಾಲಿಯಾಗಿದ್ದಾನೆ. ಈ ಅಲ್ಪ ಕಾಲದಲ್ಲಿಯೇ ಇವನು ಹೇಗೆ ಶಾಲಸ್ಕಂಧದ ಹಾಗೆ ಬೆಳೆದಿದ್ದಾನೆ? |
| सुनिकृष्टा च योनिस्ते पुंश्चली प्रतिभासि मे। यदृच्छया कामरागाज्जाता मेनकया ह्यसि ॥ 01-068-079॥ |
Your birth is low. You speak like a lewd woman. Lustfully have you been begotten by Menaka. |
ಮೇನಕೆಯ ಕಾಮರಾಗದಿಂದ ಜನಿಸಿದ ನೀನು ನೀಚ ಯೋನಿಯಲ್ಲಿ ಜನಿಸಿದವಳು. ನನಗೆ ವ್ಯಭಿಚಾರಿಣಿಯಂತೆ ತೋರುತ್ತಿರುವೆ. |
| सर्वमेतत्परोक्षं मे यत्त्वं वदसि तापसि। नाहं त्वामभिजानामि यथेष्टं गम्यतां त्वया ॥ 01-068-080॥ |
O woman of ascetic guise, all that you sayest is quite unknown to me. I don’t know you. Go wherever you choose to.” |
ತಾಪಸಿ। ನೀನು ಹೇಳುತ್ತಿರುವ ಸರ್ವವೂ ನನಗೆ ತಿಳಿಯದಾಗಿದೆ. ನನಗೆ ನೀನು ಗೊತ್ತೇ ಇಲ್ಲ. ನಿನಗಿಷ್ಟವಾದಲ್ಲಿ ನೀನು ಹೋಗಬಹುದು.” |
| शकुन्तलोवाच। राजन्सर्षपमात्राणि परच्छिद्राणि पश्यसि। आत्मनो बिल्वमात्राणि पश्यन्नपि न पश्यसि ॥ 01-069-001॥ |
Sakuntala replied, “You see, O king, the fault of others, even though they be as small as a mustard seed. But seeing, you notice not your own faults even though they be as large as the Vilwa fruit. |
ಶಕುಂತಲೆಯು ಹೇಳಿದಳು: “ರಾಜನ್! ನೀನು ಇನ್ನೊಬ್ಬರ ತಪ್ಪು ಸಾಸಿವೆ ಕಾಳಿನಷ್ಟು ಸಣ್ಣದಾಗಿದ್ದರೂ ಗಮನಿಸುತ್ತೀಯೆ. ಆದರೆ ನಿನ್ನ ತಪ್ಪು ಬಿಲ್ವದಷ್ಟು ದೊಡ್ಡದಾಗಿದ್ದರೂ ನೋಡಿದರೂ ನೋಡದಂತೆ ಇದ್ದೀಯೆ. |
| मेनका त्रिदशेष्वेव त्रिदशाश्चानु मेनकाम्। ममैवोद्रिच्यते जन्म दुःषन्त तव जन्मतः ॥ 01-069-002॥ |
Menaka is one of the celestials. Indeed, Menaka is reckoned as the first of celestials. My birth, therefore, O Dushanta, is far higher than you. |
ಮೇನಕೆಯು ದೇವಲೋಕದವಳು ಮತ್ತು ದೇವತೆಗಳಲ್ಲೇ ಶ್ರೇಷ್ಠಳೆಂದೆನಿಸಿಕೊಂಡವಳು. ದುಃಷಂತ! ಹೀಗೆ ನನ್ನ ಜನ್ಮವು ನಿನ್ನ ಜನ್ಮಕ್ಕಿಂತಲೂ ಶ್ರೇಷ್ಠವಾದದ್ದು. |
| क्षितावटसि राजंस्त्वमन्तरिक्षे चराम्यहम्। आवयोरन्तरं पश्य मेरुसर्षपयोरिव ॥ 01-069-003॥ |
You walk upon the Earth, O king, but I roam in the skies! Behold, the difference between ourselves is as that between (the mountain) Meru and a mustard seed! |
ರಾಜನ್ ನೀನು ಭೂಮಿಯ ಮೇಲೆ ನಡೆಯುತ್ತೀಯೆ. ನಾನು ಅಂತರಿಕ್ಷದಲ್ಲಿ ಸಂಚರಿಸುತ್ತೇನೆ. ನನ್ನ ಮತ್ತು ನಿನ್ನ ನಡುವಿನ ಅಂತರ ಮೇರು ಮತ್ತು ಸಾಸಿವೆ ಕಾಳುಗಳ ನಡುವಿರುವ ಅಂತರವೆಂದು ತಿಳಿ. |
| महेन्द्रस्य कुबेरस्य यमस्य वरुणस्य च। भवनान्यनुसंयामि प्रभावं पश्य मे नृप ॥ 01-069-004॥ |
Behold my power, O king! I can repair to the abodes of Indra, Kuvera, Yama, and Varuna! |
ನೃಪಃ ನನ್ನ ಪ್ರಭಾವವನ್ನು ನೋಡು. ನಾನು ಮಹೇಂದ್ರ, ಕುಬೇರ, ಯಮ, ಮತ್ತು ವರುಣರ ಭವನಗಳಿಗೆ ಹೋಗಬಲ್ಲೆ. |
| सत्यश्चापि प्रवादोऽयं यं प्रवक्ष्यामि तेऽनघ। निदर्शनार्थं न द्वेषात्तच्छ्रुत्वा क्षन्तुमर्हसि ॥ 01-069-005॥ |
The saying is true which I shall refer to before you, O sinless one! The following I refer as analogy and do not mean literally and so forgive me on hearing this. |
ಅನಘ ಸತ್ಯವನ್ನು ತೋರಿಸಬಲ್ಲ ಒಂದು ಗಾದೆಯನ್ನು ಹೇಳುತ್ತೇನೆ ಕೇಳು. ಇದನ್ನು ದ್ವೇಷದಿಂದ ಹೇಳುತ್ತಿಲ್ಲ. ಒಂದು ನಿದರ್ಶನದ ರೂಪದಲ್ಲಿ ಹೇಳುತ್ತಿದ್ದೇನೆ. ಇದನ್ನು ಕೇಳಿ ನನ್ನನ್ನು ಕ್ಷಮಿಸಬೇಕು. |
| विरूपो यावदादर्शे नात्मनः पश्यते मुखम्। मन्यते तावदात्मानमन्येभ्यो रूपवत्तरम् ॥ 01-069-006॥ |
An ugly person considers himself handsomer than others until he sees his own face in the mirror. |
ವಿರೂಪನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡುವವರೆಗೆ ಎಲ್ಲರಿಗಿಂತ ತಾನೇ ರೂಪವಂತನೆಂದು ತಿಳಿದುಕೊಂಡಿರುತ್ತಾನೆ. |
| यदा तु मुखमादर्शे विकृतं सोऽभिवीक्षते। तदेतरं विजानाति आत्मानं नेतरं जनम् ॥ 01-069-007॥ |
But when he sees his own ugly face in the mirror, it is then that he perceives the difference between himself and others. |
ತನ್ನ ವಿಕೃತ ಮುಖವನ್ನು ಕನ್ನಡಿಯಲ್ಲಿ ನೋಡಿದಾಗಲೇ ಅವನಿಗೆ ತನ್ನ ಮತ್ತು ಇತರರ ನಡುವಿನ ವ್ಯತ್ಯಾಸ ಅರಿವಾಗುತ್ತದೆ. |
| अतीव रूपसंपन्नो न किंचिदवमन्यते। अतीव जल्पन्दुर्वाचो भवतीह विहेठकः ॥ 01-069-008॥ |
He that is really handsome never taunts anybody. And he that always talks evil is a freak. |
ಅತೀವ ರೂಪಸಂಪನ್ನನು ಇತರರನ್ನು ಎಂದೂ ಅವಹೇಳನ ಮಾಡುವುದಿಲ್ಲ. ಅನ್ಯರನ್ನು ಅತೀವವಾಗಿ ಅವಹೇಳನ ಮಾಡುವವನು ವಿಹಟಕನೆಂದು ಅನ್ನಿಸಿಕೊಳ್ಳುತ್ತಾನೆ. |
| मूर्खो हि जल्पतां पुंसां श्रुत्वा वाचः शुभाशुभाः। अशुभं वाक्यमादत्ते पुरीषमिव सूकरः ॥ 01-069-009॥ |
And as the swine always look for dirt and filth even when in the midst of a flower-garden, so the wicked always choose the evil out of both evil and good that others speak. |
ಹಂದಿಯು ಹೇಗೆ ಹೂವಿನ ತೋಟದಿಂದಲೂ ಹೊಲಸನ್ನೇ ಹೆಕ್ಕುತ್ತದೆಯೋ ಹಾಗೆ ಮೂರ್ಥ್ವನೂ ಕೂಡ ಶುಭಾಶುಭಮಾತುಗಳಲ್ಲಿ ಅಶುಭ ಮಾತುಗಳನ್ನೇ ಆರಿಸುತ್ತಾನೆ. |
| प्राज्ञस्तु जल्पतां पुंसां श्रुत्वा वाचः शुभाशुभाः। गुणवद्वाक्यमादत्ते हंसः क्षीरमिवाम्भसः ॥ 01-069-010॥ |
Those, however, that are wise, on hearing the speeches of others that are intermixed with both good and evil, accept only what is good, like geese that always extract the milk only, though it be mixed with water. |
ನೀರಿನಿಂದ ಕೂಡಿದ ಕ್ಷೀರದಿಂದ ಹಂಸವು ಕ್ಷೀರವನ್ನೇ ಹೇಗೆ ಆರಿಸುತ್ತದೆಯೋ ಹಾಗೆ ಪ್ರಾಜ್ಞರೂ ಕೂಡ ಶುಭಾಶುಭ ವಚನಗಳಿಂದ ಶುಭಮಾತುಗಳನ್ನೇ ಕೇಳುತ್ತಾರೆ. |
| अन्यान्परिवदन्साधुर्यथा हि परितप्यते। तथा परिवदन्नन्यांस्तुष्टो भवति दुर्जनः ॥ 01-069-011॥ |
As the honest are always pained at speaking ill of others, so do the wicked always rejoice in doing the same thing. |
ಸಾಧು ಜನರು ಅನ್ಯರ ಕುರಿತು ಕೀಳು ಮಾತನ್ನಾಡುವಾಗ ಬಹಳಷ್ಟು ವೇದನೆಗೊಳಗಾಗುತ್ತಾರೆ. ಆದರೆ ದುರ್ಜನರು ಅನ್ಯರ ನಿಂದನೆಗೈಯುವುದರಲ್ಲಿಯೇ ಸಂತುಷ್ಟರಾಗುತ್ತಾರೆ. |
| अभिवाद्य यथा वृद्धान्सन्तो गच्छन्ति निर्वृतिम्। एवं सज्जनमाक्रुश्य मूर्खो भवति निर्वृतः ॥ 01-069-012॥ |
As the honest always feel pleasure in showing regard for the old, so do the wicked always take delight in aspersing the good. |
ಸಂತರು ವೃದ್ಧರನ್ನು ಗೌರವಿಸುವುದರಲ್ಲಿ ಸಂತೋಷ ಹೊಂದುತ್ತಾರೆ. ಆದರೆ ಮೂರ್ಖ ಜನರು ಸಜ್ಜನರನ್ನು ಅವಹೇಳನ ಮಾಡುವುದರಲ್ಲಿ ಸಂತೋಷ ಹೊಂದುತ್ತಾರೆ. |
| सुखं जीवन्त्यदोषज्ञा मूर्खा दोषानुदर्शिनः। यत्र वाच्याः परैः सन्तः परानाहुस्तथाविधान् ॥ 01-069-013॥ |
The honest are happy in not seeking for faults. The wicked are happy in seeking for them. |
ಸಂತರು ಇನ್ನೊಬ್ಬರಲ್ಲಿ ದೋಷವನ್ನು ಕಾಣದೆಯೇ ಸುಖದಿಂದಿರುವರು; ಮೂರ್ಖರು ದೋಷವನ್ನು ಹುಡುಕುವುದರಲ್ಲಿಯೇ ಸುಖವನ್ನು ಹೊಂದುವರು. |
| अतो हास्यतरं लोके किंचिदन्यन्न विद्यते। यत्र दुर्जन इत्याह दुर्जनः सज्जनं स्वयम् ॥ 01-069-014॥ |
The wicked ever speak ill of the honest. But the latter never injure the former, even if injured by them. What can be more ridiculous in the world than that those that are themselves wicked should represent the really honest as wicked? |
ಈ ಲೋಕದಲ್ಲಿ ಇದಕ್ಕಿಂತ ಬೇರೆ ಹಾಸ್ಯದ ವಿಷಯವಾದರೂ ಏನಿದೆ? ಇಲ್ಲಿ ಸಜ್ಜನರನ್ನು ಸ್ವಯಂ ದುರ್ಜನರೇ ದುರ್ಜನರೆಂದು ಕರೆಯುತ್ತಿರುವರಲ್ಲ? |
| सत्यधर्मच्युतात्पुंसः क्रुद्धादाशीविषादिव। अनास्तिकोऽप्युद्विजते जनः किं पुनरास्तिकः ॥ 01-069-015॥ |
When even atheists are annoyed with those that have fallen off from truth and virtue and who are really like angry snakes of virulent poison, what shall I say of myself who am nurtured in faith? |
ನಾಸ್ತಿಕರೂ ಕೂಡ ಸತ್ಯಧರ್ಮದಿಂದ ಚ್ಯುತರಾದವರನ್ನು ಕಂಡರೆ ಘೋರ ವಿಷಸರ್ಪವನ್ನು ಕಂಡಂತೆ ಭಯಪಡುತ್ತಾರೆ. ನನ್ನಂಥಹ ಆಸ್ತೀಕರ ಗತಿಯೇನು? |
| स्वयमुत्पाद्य वै पुत्रं सदृशं योऽवमन्यते। तस्य देवाः श्रियं घ्नन्ति न च लोकानुपाश्नुते ॥ 01-069-016॥ |
He that having begotten a son who is his own image, regards him not and never attains to the worlds he aspires, and verily the gods destroy his good fortune and possessions. |
ಸದೃಶ ಪುತ್ರನನ್ನು ಸ್ವಯಂ ಹುಟ್ಟಿಸಿ ಅವನನ್ನು ಸ್ವೀಕರಿಸದಿರುವವನ ಶ್ರಿಯನ್ನು ದೇವತೆಗಳು ನಾಶಪಡಿಸುತ್ತಾರೆ ಮತ್ತು ಅವನಿಗೆ ಉತ್ತಮ ಲೋಕವು ದೊರೆಯುವುದಿಲ್ಲ. |
| कुलवंशप्रतिष्ठां हि पितरः पुत्रमब्रुवन्। उत्तमं सर्वधर्माणां तस्मात्पुत्रं न संत्यजेत् ॥ 01-069-017॥ |
The Pitris have said that the son continue the race and the line and is, therefore, the best of all religious acts. Therefore, none should abandon a son. |
ಪುತ್ರನು ಕುಲವಂಶ ಪ್ರತಿಷ್ಠನೆಂದು ಪಿತೃಗಳು ಹೇಳುತ್ತಾರೆ. ಪುತ್ರನಿಗೆ ಜನ್ಮ ನೀಡುವುದು ಸರ್ವಧರ್ಮಗಳಲ್ಲಿ ಉತ್ತಮವೆಂದು ಹೇಳುತ್ತಾರೆ. ಆದುದರಿಂದ ಪುತ್ರನನ್ನು ತ್ಯಜಿಸಬಾರದು. |
| स्वपत्नीप्रभवान्पञ्च लब्धान्क्रीतान्विवर्धितान्। कृतानन्यासु चोत्पन्नान्पुत्रान्वै मनुरब्रवीत् ॥ 01-069-018॥ |
Manu has said that there are five kinds of sons; those begotten by one’s self upon his own wife, those obtained (as gift) from others, those purchased for a consideration, those reared with affection and those begotten upon other women than upon wedded wives. |
ಸ್ವಪತ್ನಿಯಲ್ಲಿ ಪಡೆದವನು, ಬೇರೆಯವರಿಂದ ಪಡೆದವನು, ಖರೀದಿಸಿಕೊಂಡವನು, ವಾತ್ಸಲ್ಯದಿಂದ ಬೆಳೆಸಲ್ಬಟ್ಟವನು, ಮತ್ತು ಅಪತ್ನಿಯಿಂದ ಜನಿಸಿದವನು ಹೀಗೆ ಐದು ತರಹದ ಪುತ್ರರ ಕುರಿತು ಮನುವು ಹೇಳುತ್ತಾನೆ. |
| धर्मकीर्त्यावहा नॄणां मनसः प्रीतिवर्धनाः। त्रायन्ते नरकाज्जाताः पुत्रा धर्मप्लवाः पितॄन् ॥ 01-069-019॥ |
Sons support the religion and achievements of men, enhance their joys, and rescue deceased ancestors from hell. |
ಪುತ್ರರು ನರನ ಧರ್ಮ ಕೀರ್ತಿಯನ್ನು ವೃದ್ಧಿಸುತ್ತಾರೆ. ಮನಸ್ಸಿನ ಸಂತೋಷವನ್ನು ವರ್ಧಿಸುತ್ತಾರೆ. ನರಕಕ್ಕೆ ಹೋಗಬಹುದಾದವರನ್ನು ಬಿಡುಗಡೆಗೊಳಿಸುತ್ತಾರೆ. |
| स त्वं नृपतिशार्दूल न पुत्रं त्यक्तुमर्हसि। आत्मानं सत्यधर्मौ च पालयानो महीपते। नरेन्द्रसिंह कपटं न वोढुं त्वमिहार्हसि ॥ 01-069-020॥ |
It befitting you not, therefore, O tiger among kings, to abandon a son who is such. Therefore, O lord of Earth, cherish your own self, truth, and virtue by cherishing your son. O lion among monarchs, it befitting you not to support this deceitfulness. |
ನೃಪತಿಶಾರ್ದೂಲ! ಆದುದರಿಂದ ನಿನ್ನ ಪುತ್ರನನ್ನು ತ್ಯಜಿಸುವುದು ಸರಿಯಲ್ಲ. ಮಹೀಪತೇ! ನಿನ್ನ ಸತ್ಯ-ಧರ್ಮವನ್ನು ಪರಿಪಾಲಿಸು. ನರೇಂದ್ರಸಿಂಹ। ನಿನ್ನಂಥವನಿಗೆ ಈ ವಿಷಯದಲ್ಲಿ ಕಪಟನಾಗುವುದು ಸರಿಯಲ್ಲ. |
| वरं कूपशताद्वापी वरं वापीशतात्क्रतुः। वरं क्रतुशतात्पुत्रः सत्यं पुत्रशताद्वरम् ॥ 01-069-021॥ |
Digging a hundred wells is better than performing a hundred yagas; Getting one son is greater than a hundred yagas; But greater than a hundred sons is truth. |
ನೂರು ಯಾಗಗಳನ್ನು ಮಾಡುವುದಕ್ಕಿಂತ ನೂರು ಬಾವಿಗಳನ್ನು ತೋಡುವುದೇ ಶ್ರೇಷ್ಠ; ನೂರು ಯಾಗಗಳನ್ನು ಮಾಡುವುದಕ್ಕಿಂಥ ಒಂದು ಪುತ್ರನನ್ನು ಪಡೆಯುವುದು ಶ್ರೇಷ್ಠ; ಆದರೆ ನೂರು ಪುತ್ರಂಗಿಂತಲೂ ಶ್ರೇಷ್ಠವಾದದ್ದು ಸತ್ಯ. |
| अश्वमेधसहस्रं च सत्यं च तुलया धृतम्। अश्वमेधसहस्राद्धि सत्यमेव विशिष्यते ॥ 01-069-022॥ |
A hundred horse-sacrifices had once been weighed against Truth, and Truth was found heavier than a hundred horse-sacrifices. |
ಸಹಸ್ರ ಅಶ್ವಮೇಧಗಳನ್ನು ಮತ್ತು ಸತ್ಯವನ್ನೂ ತುಲನೆ ಮಾಡಿದರೆ, ಸಹಸ್ರ ಅಶ್ವಮೇಧಗಳಿಗಿಂತಲೂ ಸತ್ಯವೇ ವಿಶೇಷವಾಗುತ್ತದೆ. |
| सर्ववेदाधिगमनं सर्वतीर्थावगाहनम्। सत्यं च वदतो राजन्समं वा स्यान्न वा समम् ॥ 01-069-023॥ |
O king, Truth, I believe, may be equal to the study of, the entire Vedas and ablutions in all holy places. There is no virtue equal to Truth: there is nothing superior to Truth. |
ರಾಜನ್। ಸತ್ಯವು ಸರ್ವವೇದಗಳ ಪಾಂಡಿತ್ಯ ಮತ್ತು ಸರ್ವ ತೀರ್ಥಗಳ ಯಾತ್ರೆಗೆ ಸಮವೆಂದು ಹೇಳುತ್ತಾರೆ. ಇದಕ್ಕೆ ಸರಿಯಾದುದು ಇನ್ನು ಯಾವುದೂ ಇಲ್ಲ. |
| नास्ति सत्यात्परो धर्मो न सत्याद्विद्यते परम्। न हि तीव्रतरं किंचिदनृतादिह विद्यते ॥ 01-069-024॥ |
There is no virtue equal to Truth: there is nothing superior to Truth. Because there is nothing in this world more severe than untruth |
ಸತ್ಯಕ್ಕಿಂತಲೂ ಶ್ರೇಷ್ಠವಾದ ಧರ್ಮವಿಲ್ಲ, ಸತ್ಯಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಅನೃತಕ್ಕಿಂತಲೂ ತೀವ್ರತರ ಪಾಪವಾದರೂ ಏನು? |
| राजन्सत्यं परं ब्रह्म सत्यं च समयः परः। मा त्याक्षीः समयं राजन्सत्यं संगतमस्तु ते ॥ 01-069-025॥ |
O king, Truth is God himself; Truth is the highest vow. Therefore, violate not your pledge, O monarch! Let Truth and you be even united. |
ರಾಜನ್! ಸತ್ಯವೇ ಪರಬ್ರಹ್ಮ, ಸತ್ಯವೇ ಪರಮ ತಪಸ್ಸು. ನಿನ್ನ ವಚನವನ್ನು ತೊರೆಯಬೇಡ ರಾಜನ್! ನೀನು ಸತ್ಯದಲ್ಲಿ ಒಂದಾಗು. |
| अनृते चेत्प्रसङ्गस्ते श्रद्दधासि न चेत्स्वयम्। आत्मनो हन्त गच्छामि त्वादृशे नास्ति संगतम् ॥ 01-069-026॥ |
If you place no credit in my words, I shall of my own accord go hence. Indeed, your companionship should be avoided. |
ಸುಳ್ಳು ನಿನ್ನನ್ನು ಬಿಡದಿದ್ದರೆ ಅಥವಾ ನನ್ನಲ್ಲಿ ನಿನಗೆ ವಿಶ್ವಾಸವಿಲ್ಲದ್ದಿದ್ದರೆ ನಾನೇ ಇಲ್ಲಿಂದ ಹೊರಟು ಹೋಗುತ್ತೇನೆ. ನನಗೆ ನಿನ್ನ ಜೊತೆ ಇರುವುದು ಬೇಡ. |
| ऋतेऽपि त्वयि दुःषन्त शैलराजावतंसकाम्। चतुरन्तामिमामुर्वीं पुत्रो मे पालयिष्यति ॥ 01-069-027॥ |
But you, O Dushanta, that when you are gone, this son of mine shall rule the whole Earth surrounded by the four seas and adorned with the king of the mountains.” |
ದುಃಷಂತ। ನಿನ್ನ ನಂತರ ನಾಲ್ಯೂ ಎಡೆಯಲ್ಲಿ ಸಮುದ್ರದಿಂದ ಕೂಡಿದ ಈ ಶೈಲರಾಜವತಂಸಕ ಭೂಮಿಯನ್ನು ನನ್ನ ಈ ಪುತ್ರನು ಆಳುವನು.” |
| वैशंपायन उवाच। एतावदुक्त्वा वचनं प्रातिष्ठत शकुन्तला। अथान्तरिक्षे दुःषन्तं वागुवाचाशरीरिणी। ऋत्विक्पुरोहिताचार्यैर्मन्त्रिभिश्चावृतं तदा ॥ 01-069-028॥ |
Vaisampayana continued, “Sakuntala having spoken to the monarch in this wise, left his presence. But as soon as she had left, a voice from the skies, emanating from no visible shape, thus spoke unto Dushanta as he was sitting surrounded by his occasional and household priests, his preceptors, and ministers. |
ವೈಶಂಪಾಯನನು ಹೇಳಿದನು: “ಈ ಮಾತುಗಳನ್ನಾಡಿದ ಶಕುಂತಲೆಯು ಹಿಂದಿರುಗುತ್ತಿದ್ದಂತೆಯೇ ಖುತ್ವಿಜರು, ಪುರೋಹಿತರು, ಆಚಾರ್ಯರು ಮತ್ತು ಮಂತ್ರಿಗಳಿಂದ ಸುತ್ತುವರೆಯಲ್ಪಟ್ಟಿದ್ದ ದುಃಷಂತನನ್ನುದ್ದೇಶಿಸಿ ಅಂತರಿಕ್ಷದಿಂದ ಅಶರೀರವಾಣಿಯೊಂದು ಕೇಳಿಬಂದಿತು. |
| भस्त्रा माता पितुः पुत्रो येन जातः स एव सः। भरस्व पुत्रं दुःषन्त मावमंस्थाः शकुन्तलाम् ॥ 01-069-029॥ |
And the voice said, “The mother is but the sheath of flesh; the son sprung from the father is the father himself. Therefore, O Dushanta, cherish your son, and insult not Sakuntala. |
“ದುಃಷಂತ। ತಾಯಿಯು ಮಗನ ಮಾಂಸ ಮತ್ತು ಚರ್ಮ. ಆದರೆ ತಂದೆಯು ಅವನ ಆತ್ಮ. ಆದುದರಿಂದ ನಿನ್ನ ಈ ಮಗನನ್ನು ಸ್ವೀಕರಿಸು. ಶಕುಂತಲೆಯನ್ನು ಅವಮಾನಿಸಬೇಡ. |
| रेतोधाः पुत्र उन्नयति नरदेव यमक्षयात्। त्वं चास्य धाता गर्भस्य सत्यमाह शकुन्तला ॥ 01-069-030॥ |
O best of men, the son, who is but a form of one’s own seed, rescues (ancestors) from the region of Yama. You are the progenitor of this boy. Sakuntala has spoken the truth. |
ತನ್ನ ರೇತದಿಂದ ಪಡೆದ ಮಗನು ನರನನ್ನು ಯಮಕ್ಷಯದಿಂದ ರಕ್ಷಿಸುತ್ತಾನೆ. ನೀನೇ ಈ ಗರ್ಭವನ್ನಿತ್ತವನು. ಶಕುಂತಲೆಯು ಸತ್ಯವನ್ನು ನುಡಿದಿದ್ದಾಳೆ. |
| जाया जनयते पुत्रमात्मनोऽङ्गं द्विधा कृतम्। तस्माद्भरस्व दुःषन्त पुत्रं शाकुन्तलं नृप ॥ 01-069-031॥ |
The husband, dividing his body in twain, is born of his wife in the form of son. Therefore, O Dushanta, cherish, O monarch, your son born of Sakuntala. |
ನರನು ತನ್ನನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಪತ್ನಿಯಲ್ಲಿ ಹುಟ್ಟುತ್ತಾನೆ. ಆದುದರಿಂದ ನೃಪ ದುಃಷಂತ। ಶಕುಂತಲೆಯಲ್ಲಿ ಜನಿಸಿದ ನಿನ್ನ ಈ ಪುತ್ರನನ್ನು ಸ್ವೀಕರಿಸು. |
| अभूतिरेषा कस्त्यज्याज्जीवञ्जीवन्तमात्मजम्। शाकुन्तलं महात्मानं दौःषन्तिं भर पौरव ॥ 01-069-032॥ |
To live by forsaking one’s living son is a great, misfortune. Therefore, O greatness of Puru’s race, cherish your high-souled son born of Sakuntala. |
ತನ್ನ ಮಗನನ್ನು ಪರಿತ್ಯಜಿಸಿ ಜೀವಿಸುವುದು ಅತಿ ದುರಾದೃಷ್ಟ ವಿಷಯ. ಪೌರವ । ಮಹಾತ್ಮ । ದೌಃಷಂತ ಮತ್ತು ಶಕುಂತಲೆಯನ್ನು ಪಾಲಿಸು. |
| भर्तव्योऽयं त्वया यस्मादस्माकं वचनादपि। तस्माद्भवत्वयं नाम्ना भरतो नाम ते सुतः ॥ 01-069-033॥ |
And because this child is to be cherished by you even at our word, therefore shall this your son be known by the name of Bharata (the cherished).” |
ನಮ್ಮ ಈ ಮಾತುಗಳ ಆಧಾರದ ಮೇಲೆ ನೀನು ಇವನನ್ನು ಪಾಲಿಸುವುದರಿಂದ ಇಂದಿನಿಂದ ನಿನ್ನ ಈ ಮಗನ ಹೆಸರು ಭರತ ಎಂದಾಗಲಿ.” |
| तच्छ्रुत्वा पौरवो राजा व्याहृतं वै दिवौकसाम्। पुरोहितममात्यांश्च संप्रहृष्टोऽब्रवीदिदम् ॥ 01-069-034॥ |
Hearing these words uttered by the dwellers in heaven, the monarch of Puru’s race became overjoyed and spoke as follows unto his priests and ministers. |
ದಿವೌಕಸರ ಈ ಮಾತುಗಳನ್ನು ಕೇಳಿದ ರಾಜ ಪೌರವನು ಸಂಪ್ರಹೃಷ್ಟನಾಗಿ ತನ್ನ ಪುರೋಹಿತರು ಮತ್ತು ಅಮಾತ್ಯರನ್ಮುದ್ದೇಶಿಸಿ ಹೇಳಿದನು: |
| शृण्वन्त्वेतद्भवन्तोऽस्य देवदूतस्य भाषितम्। अहमप्येवमेवैनं जानामि स्वयमात्मजम् ॥ 01-069-035॥ |
“Do you hear these words uttered by the celestial messenger? I myself know this one to be my son. |
“ದೇವದೂತನಾಡಿದ ಈ ಮಾತುಗಳನ್ನು ಕೇಳಿ. ಇವನು ನನ್ನ ಮಗನೇ ಎಂದು ನನಗೂ ತಿಳಿದಿತ್ತು. |
| यद्यहं वचनादेव गृह्णीयामिममात्मजम्। भवेद्धि शङ्का लोकस्य नैवं शुद्धो भवेदयम् ॥ 01-069-036॥ |
If I had taken him as my son on the strength of Sakuntala’s words alone, my people would have been suspicious and my son also would not have been regarded as pure.” |
ಕೇವಲ ಇವಳ ಮಾತಿನ ಆಧಾರದ ಮೇಲೆ ಇವನನ್ನು ನಾನು ಸ್ವೀಕರಿಸಿದ್ದರೆ ಲೋಕದ ಜನರು ಶಂಕಿತರಾಗುತ್ತಿದ್ದರು, ಮತ್ತು ಇವನನ್ನು ಪರಿಶುದ್ಧ ನೆಂದು ಪರಿಗಣಿಸುತ್ತಿರಲಿಲ್ಲ.” |
| तं विशोध्य तदा राजा देवदूतेन भारत। हृष्टः प्रमुदितश्चापि प्रतिजग्राह तं सुतम् ॥ 01-069-037॥ |
Vaisampayana continued, “The monarch, then, O Bharatha!, seeing the purity of his son established by the celestial messenger, became exceedingly glad. |
ಭಾರತ। ತನ್ನ ಮಗನ ಜನ್ಮದ ಪವಿತ್ರತೆಯು ತಿಳಿದಾದ ನಂತರ ರಾಜನು ತುಂಬಾ ಸಂತೋಷಗೊಂಡನು. |
| मूर्ध्नि चैनमुपाघ्राय सस्नेहं परिषस्वजे। सभाज्यमानो विप्रैश्च स्तूयमानश्च बन्दिभिः। स मुदं परमां लेभे पुत्रसंस्पर्शजां नृपः ॥ 01-069-038॥ |
And he took unto him that son with joy. And the king with a joyous heart then performed all those rites upon his son that a father should perform. And the king smelt his child’s head and hugged him with affection. |
ತನ್ನ ಮಗನ ನೆತ್ತಿಯನ್ನು ಆಫ್ರಾಣಿಸಿ ಸ್ನೇಹದಿಂದ ಅಪ್ಪಿಕೊಂಡನು. ಸಭೆಯಲ್ಲಿದ್ದ ವಿಪ್ರರೆಲ್ಲರೂ ಆಶೀರ್ವದಿಸಿದರು. ಸೂತರು ಹೊಗಳಿದರು. ರಾಜನು ತನ್ನ ಮಗುವಿನ ಸ್ಪರ್ಷದ ಪರಮ ಸಂತಸವನ್ನು ಅನುಭವಿಸಿದನು. |
| तां चैव भार्यां धर्मज्ञः पूजयामास धर्मतः। अब्रवीच्चैव तां राजा सान्त्वपूर्वमिदं वचः ॥ 01-069-039॥ |
And Dushanta also received religiously his wife with affection. And he told her these words, pacifying her affectionately: |
ಧರ್ಮಜ್ಞ ರಾಜನು ತನ್ನ ಭಾರ್ಯೆಯನ್ನೂ ಧಾರ್ಮಿಕವಾಗಿ ಗೌರವಿಸಿದನು ಮತ್ತು ಅವಳಿಗೆ ಸಾಂತ್ವನದ ಈ ಮಾತುಗಳನ್ನು ನುಡಿದನು: |
| कृतो लोकपरोक्षोऽयं संबन्धो वै त्वया सह। तस्मादेतन्मया देवि त्वच्छुद्ध्यर्थं विचारितम् ॥ 01-069-040॥मन्यते चैव लोकस्ते स्त्रीभावान्मयि संगतम्। पुत्रश्चायं वृतो राज्ये मया तस्माद्विचारितम् ॥ 01-069-041॥ |
“O goddess, my union with you took place privately. Therefore, I was thinking of how best to establish your purity. My people might think that we were only lustfully united and not as husband and wife, and therefore, this son that I would have installed as my heir apparent would only have been regarded as one of impure birth. |
“ದೇವಿ! ನಿನ್ನೊಡನೆ ನನ್ನ ಸಂಬಂಧವು ಲೋಕ ಪರೋಕ್ಷವಾಗಿ ನಡೆಯಿತು. ಆದುದರಿಂದ ನಿನ್ನ ಶುದ್ಧತೆಯನ್ನು ಪ್ರತಿಪಾದಿಸುವುದು ಹೇಗೆಂದು ವಿಚಾರಿಸುತ್ತಿದ್ದೆ. ಇಲ್ಲದಿದ್ದರೆ ಲೋಕದ ಜನರು ನಿನ್ನ ಮತ್ತು ನನ್ನ ಸಂಗಮವು ಕೇವಲ ಕಾಮದಿಂದಾಯಿತೆಂದು ತಿಳಿದಾರು. ಮತ್ತು ನನ್ನ ರಾಜ್ಯದ ಒಡೆಯನಾಗುವ ನನ್ನ ಈ ಮಗನನ್ನು ಅನೈತಿಕವಾಗಿ ಹುಟ್ಟಿದವನೆಂದು ತಿಳಿಯುತ್ತಾರೆ. |
| यच्च कोपितयात्यर्थं त्वयोक्तोऽस्म्यप्रियं प्रिये। प्रणयिन्या विशालाक्षि तत्क्षान्तं ते मया शुभे ॥ 01-069-042॥ |
And dearest, every hard word you have uttered in your anger, have I, O large-eyed one, forgiven you. You are my dearest!” |
ಪ್ರಿಯೇ! ವಿಶಾಲಾಕ್ಷಿ! ಕೋಪದಲ್ಲಿ ನೀನು ನನಗೆ ಹೇಳಿದ ಎಲ್ಲ ಅಪ್ರಿಯ ಮಾತುಗಳನ್ನೂ ಕ್ಷಮಿಸಿದ್ದೇನೆ. ನೀನು ನನ್ನ ಪ್ರಿಯೆ ಶುಭೇ!” |
| तामेवमुक्त्वा राजर्षिर्दुःषन्तो महिषीं प्रियाम्। वासोभिरन्नपानैश्च पूजयामास भारत ॥ 01-069-043॥ |
And the royal sage Dushanta, having spoken thus unto his dear wife, O Bharata, received her with offerings of perfume, food, and drink. |
ಭಾರತ ರಾಜರ್ಷಿ ದುಃಷಂತನು ತನ್ನ ಪ್ರಿಯ ಮಹಿಷಿಗೆ ಈ ರೀತಿ ಹೇಳಿ ಅವಳನ್ನು ವಸ್ತ್ರ, ಆಹಾರ ಮತ್ತು ಪಾನೀಯಗಳನ್ನಿತ್ತು ಸತ್ಕರಿಸಿದನು. |
| दुःषन्तश्च ततो राजा पुत्रं शाकुन्तलं तदा। भरतं नामतः कृत्वा यौवराज्येऽभ्यषेचयत् ॥ 01-069-044॥ |
And king Dushanta, then, bestowed the name of Bharata upon his child, and formally installed him as the heir apparent. |
ನಂತರ, ರಾಜ ದುಃಷಂತನು ಶಕುಂತಲೆಯ ಪುತ್ರನಿಗೆ ಭರತನೆಂಬ ಹೆಸರಿನಲ್ಲಿ ಯುವರಾಜ್ಯಾಭಿಷೇಕವನ್ನು ನಡೆಸಿದನು. |
| तस्य तत्प्रथितं चक्रं प्रावर्तत महात्मनः। भास्वरं दिव्यमजितं लोकसंनादनं महत् ॥ 01-069-045॥ |
And the famous and bright wheels of Bharata’s Chariot, invincible and like unto the chariots owned by the gods, traversed every region, filling the whole Earth with their rattle. |
ಅಂದಿನ ನಂತರ ದೇವತೆಗಳ ರಥದಂತಿರುವ ಆ ಮಹಾತ್ಮನ ರಥದ ಹೊಳೆಯುತ್ತಿರುವ ಚಕ್ರಗಳು ತಮ್ಮ ಧ್ವನಿಯನ್ನು ಲೋಕದಲ್ಲೆಲ್ಲ ತುಂಬಿಸುತ್ತಾ ಇಡೀ ಭೂಮಿಯನ್ನೇ ತಿರುಗಿದವು. |
| स विजित्य महीपालांश्चकार वशवर्तिनः। चचार च सतां धर्मं प्राप चानुत्तमं यशः ॥ 01-069-046॥ |
And the son of Dushanta reduced to subjection all kings of the Earth. And he ruled virtuously and earned great fame. |
ಎಲ್ಲ ಮಹೀಪಾಲರನ್ನೂ ಗೆದ್ದು ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾ ಅನುತ್ತಮ ಯಶಸ್ಸನ್ನು ಗಳಿಸಿದನು. |
| स राजा चक्रवर्त्यासीत्सार्वभौमः प्रतापवान्। ईजे च बहुभिर्यज्ञैर्यथा शक्रो मरुत्पतिः ॥ 01-069-047॥ |
And that monarch of great prowess was known by the titles of Chakravarti and Sarvabhauma. And he performed many sacrifices like Sakra, the lord of the Maruts. |
ಆ ಪ್ರತಾಪಿ ರಾಜನು ಚಕ್ರವರ್ತಿ ಸಾರ್ವಭೌಮನೆಂದು ಕರೆಯಲ್ಪಟ್ಟನು. ಮರುತ್ಪತಿ ಇಂದ್ರನಂತೆ ಅವನು ಹಲವಾರು ಯಜ್ಞಗಳನ್ನು ನಡೆಸಿದನು. |
| याजयामास तं कण्वो दक्षवद्भूरिदक्षिणम्। श्रीमान्गोविततं नाम वाजिमेधमवाप सः। यस्मिन्सहस्रं पद्मानां कण्वाय भरतो ददौ ॥ 01-069-048॥ |
And Kanwa was the chief priest at those sacrifices, in which the offerings to Brahmanas were great. And the blessed monarch performed both the cow and the horse-sacrifices. And Bharata gave unto Kanwa a thousand gold coins as the sacerdotal fee. |
ಕಣ್ವನು ಈ ಯಜ್ಞಗಳಲ್ಲಿ ಪುರೋಹಿತನಾಗಿದ್ದನು, ಮತ್ತು ಬ್ರಾಹ್ಮಣರಿಗೆ ಸಾಕಷ್ಟು ದಕ್ಷಿಣೆಗಳನ್ನು ನೀಡಲಾಯಿತು. ಆ ಶ್ರೀಮಂತನು ಗೋಮೇಥ- ಅಶ್ವಮೇಧಗಳೆರಡನ್ನೂ ನೆರವೇರಿಸಿದನು. ಭರತನು ಕಣ್ಣನಿಗೆ ಸಹಸ್ರ ಚಿನ್ನದ ನಾಣ್ಯಗಳನ್ನು ದಕ್ಷಿಣೆಯನ್ನಾಗಿ ಇತ್ತನು. |
| भरताद्भारती कीर्तिर्येनेदं भारतं कुलम्। अपरे ये च पूर्वे च भारता इति विश्रुताः ॥ 01-069-049॥ |
It is that Bharata from whom have emanated so many mighty achievements, giving birth to our nation, Bharatavarsha. From Bharata arose the Bharata clan and they are addressed as “Bharata”s |
ಭರತನಿಂದ ಭಾರತ ಕುಲವು ಹುಟ್ಟಿತು, ಅವನ ನಂತರ ಹುಟ್ಟಿದ ರಾಜರು ಭಾರತರೆಂದು ವಿಶ್ರುತರಾದರು. |
| भरतस्यान्ववाये हि देवकल्पा महौजसः। बभूवुर्ब्रह्मकल्पाश्च बहवो राजसत्तमाः ॥ 01-069-050॥ |
And in the Bharata race there have been born many Godlike monarchs gifted with great energy, and like unto Brahman himself. |
ಭರತನ ಕುಲದಲ್ಲಿ ಹಲವಾರು ದೇವಕಲ್ಪ-ಬ್ರಹ್ಮಕಲ್ಪ ಮಹೌಜಸ ರಾಜಸತ್ವಮರು ಜನಿಸಿದರು. |
| Additional Notes: अतिकायश्च पुत्रस्ते बालोऽपि बलवानयम्। कथमल्पेन कालेन शालस्कन्ध इवोद्गतः ॥ 01-068-078॥ In this, ॥ 01-068-078॥ , King Dushanta indirectly admires the his Son stating “Your boy too is grown up. You say he is a boy, but he is very strong. How has he soon grown with “tallish stature like a Sal tree?”” In Kalidasa’s Raghuvamsa similar verse comes admiring King Dileepa. व्यूढोरस्को वृषस्कन्धः शालप्रांशुर्महाभुजः। आत्मकर्मक्षमं देहं क्षात्रो धर्म इवाश्रितः॥ १-१३ ॥ Translation: “He who has a befitting physique for his heroic deeds in kingship, with a sizable chest, bullish shoulders, tallish stature like a Sal tree, and with dextrous arms, abided as a personification of the devoir and valour of kshatriya-s.” PS: This Sloka was part of our state high school संस्कृतं syllabus appearing in textbook as poem named दिलीप राजकुमरस्य प्रभावत्व। |
||
