Marriage of Kumari Tapati and King Samvarana


This story of how “King Samvarana proposes to Tapati & how she handles that proposal” is from Mahabarata. Why I put this is again in modern world Love failure is a common cause of all youth problems & also youth unable to decide on the protocol. Some give up & get into not-so-good habits but some are wise to go to a phychiatrist. Our Indian tradition foundation is family values and agriculture.

The story is told in Chaitraratha upa-parva of Adi Parva from here till here on sacred-texts.com. Down the post is the verse-to-verse translation (Source this and this). It is very nicely explained how girls should handle proposals through the proper protocol. Girls these days have to come out to work to support their families and so… Compassion, Kindness, etc are okay (Ref: 01-111-014.) but breaking society’s protocol for that reason is something that can cause further repercussions.

Incidentally, today (Date of first post 1/11/22) being Karnataka Rajyothsava, this post is quite apt. The Karnataka flag is about arashina kumkuma given to women, especially married women.

Adhyaya 160

(Source: http://www.vyasaonline.com)

अर्जुन उवाच।
तापत्य इति यद्वाक्यमुक्तवानसि मामिह।
तदहं ज्ञातुमिच्छामि तापत्यार्थविनिश्चयम् ॥01-160-001॥

ಅರ್ಜುನನು ಹೇಳಿದನು: “ನೀನು ನನಗೆ ತಾಪತ್ಯ ಎನ್ನುವ ಮಾತಿನಿಂದ ಸಂಬೋಧಿಸಿದ್ದೀಯಲ್ಲ. ಆ ತಾಪತ್ಯದ ಅರ್ಥವನ್ನು ತಿಳಿಯಲು ಬಯಸುತ್ತೇನೆ.

तपती नाम का चैषा तापत्या यत्कृते वयम्।
कौन्तेया हि वयं साधो तत्त्वमिच्छामि वेदितुम् ॥01-160-002॥

ನಾವು ಹೇಗೆ ಕೌಂತೇಯರೆಂದು ಕರೆದುಕೊಳ್ಳಲ್ಪಟ್ಟಿದ್ದೇವೋ ಹಾಗೆ ತಾಪತ್ಯ ಎಂದು ಕರೆದೆಯಲ್ಲ ಆ ತಪತಿಯು ಯಾರು ಮತ್ತು ಅವರ ಮಕ್ಕಳು ಯಾರು ಎಂದು ತಿಳಿಯಲು ಬಯಸುತ್ತೇನೆ.”

वैशंपायन उवाच।
एवमुक्तः स गन्धर्वः कुन्तीपुत्रं धनंजयम्।
विश्रुतां त्रिषु लोकेषु श्रावयामास वै कथाम् ॥01-160-003॥

ವೈಶಂಪಾಯನನು ಹೇಳಿದನು: “ಕುಂತೀಪುತ್ರ ಧನಂಜಯನ ಈ ಮಾತುಗಳನ್ನು ಕೇಳಿದ ಗಂಧರ್ವನು ತ್ರಿಲೋಕವಿಶ್ರುತ ಕಥೆಯನ್ನು ಹೇಳಲು ತೊಡಗಿದನು.

गन्धर्व उवाच।
हन्त ते कथयिष्यामि कथामेतां मनोरमाम्।
यथावदखिलां पार्थ धर्म्यां धर्मभृतां वर ॥01-160-004॥

ಗಂಧರ್ವನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ ಪಾರ್ಥ !! ಅಖಿಲ ಧರ್ಮಗಳಿಂದೊಡಗೂಡಿದ ಆ ಮನೋರಮ ಕಥೆಯನ್ನು ನಡೆದಂತೆ ಹೇಳುತ್ತೇನೆ.

उक्तवानस्मि येन त्वां तापत्य इति यद्वचः।
तत्तेऽहं कथयिष्यामि शृणुष्वैकमना मम ॥01-160-005॥

ನಿನ್ನನ್ನು ಏಕೆ ತಾಪತ್ಯ ಎಂದು ಕರೆದೆ ಎನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ನನ್ನನ್ನು ಕೇಳು.

य एष दिवि धिष्ण्येन नाकं व्याप्नोति तेजसा।
एतस्य तपती नाम बभूवासदृशी सुता ॥01-160-006॥

ದಿವಿಯಲ್ಲಿದ್ದುಕೊಂಡು ನಾಕದವರೆಗೂ ತನ್ನ ತೇಜಸ್ಸಿನಿಂದ ಬೆಳಗಿಸುವವನಿಗೆ ತಪತೀ ಎಂಬ ಹೆಸರಿನ ಅಸದೃಶಿ ಮಗಳಿದ್ದಳು.

विवस्वतो वै कौन्तेय सावित्र्यवरजा विभो।
विश्रुता त्रिषु लोकेषु तपती तपसा युता ॥01-160-007॥

ಕೌಂತೇಯ! ಸಾವಿತ್ರಿಯಿಂದ ವಿವಸ್ವತನಲ್ಲಿ ಹುಟ್ಟಿದ ಈ ತಪತಿಯು ಮೂರೂ ಲೋಕಗಳಲ್ಲಿ ತಪಸ್ಸಿನಿಂದ ಯುಕ್ತಳಾಗಿ ವಿಶ್ರುತಳಾಗಿದ್ದಳು.

न देवी नासुरी चैव न यक्षी न च राक्षसी।
नाप्सरा न च गन्धर्वी तथारूपेण काचन ॥01-160-008॥

ಯಾರೇ ದೇವಿಯಾಗಲೀ, ಅಸುರಿಯಾಗಲೀ, ಯಕ್ಷಿಯಾಗಲೀ, ರಾಕ್ಷಸಿಯಾಗಲೀ, ಅಪ್ಸರೆಯಾಗಲೀ, ಗಂಧರ್ವಿಯಾಗಲೀ ಅವಳಷ್ಟು ರೂಪವಂತಳಾಗಿರಲಿಲ್ಲ.

सुविभक्तानवद्याङ्गी स्वसितायतलोचना।
स्वाचारा चैव साध्वी च सुवेषा चैव भामिनी ॥01-160-009॥

ಆ ಭಾಮಿನಿಯು ಸುವಿಭಕ್ತಳಾಗಿದ್ದಳು (ಅವಳ ದೇಹವು ಅಳತೆಯಲ್ಲಿ ಒಳ್ಳೆಯದಾಗಿದ್ದಿತ್ತು, ಅನವದ್ಯಾಂಗಿಯಾಗಿದ್ದಳು, ಕಪ್ಪಾದ ಅಗಲ ಕಣ್ಣುಗಳುಳ್ಳವಳಾಗಿದ್ದಳು, ಒಳ್ಳೆಯ ನಡತೆಯುಳ್ಳವಳಾಗಿದ್ದಳು, ಸಾಧ್ವಿಯಾಗಿದ್ದಳು ಮತ್ತು ಸುಂದರ ವೇಷ ಭೂಷಣಗಳನ್ನು ಧರಿಸುತ್ತಿದ್ದಳು.

न तस्याः सदृशं कंचित्त्रिषु लोकेषु भारत।
भर्तारं सविता मेने रूपशीलकुलश्रुतैः ॥01-160-010॥

ಭಾರತ! ಸವಿತುವು ರೂಪ, ಶೀಲ, ಕುಲ ಮತ್ತು ಕಲಿಕೆ ಯಾವುದರಲ್ಲಿಯೂ ಅವಳ ಸದೃಶರಾದವನು ಈ ಮೂರೂ ಲೋಕಗಳಲ್ಲಿ ಯಾರೂ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದನು.

संप्राप्तयौवनां पश्यन्देयां दुहितरं तु ताम्।
नोपलेभे ततः शान्तिं संप्रदानं विचिन्तयन् ॥01-160-011॥

ಅವಳು ಯೌವನವನ್ನು ಹೊಂದಲು ಮಗಳನ್ನು ಕೊಡಬೇಕು ಎನ್ನುವುದನ್ನು ನೋಡಿದ ಅವನು ಅವಳ ಮದುವೆಯ ಕುರಿತು ಯೋಚಿಸುತ್ತಾ ಚಿಂತೆಗೊಳಗಾದನು.

अर्थर्क्षपुत्रः कौन्तेय कुरूणामृषभो बली।
सूर्यमाराधयामास नृपः संवरणः सदा ॥01-160-012॥

अर्घ्यमाल्योपहारैश्च शश्वच्च नृपतिर्यतः।
नियमैरुपवासैश्च तपोभिर्विविधैरपि ॥01-160-013॥

ಕೌಂತೇಯ ಆಗ ಅರ್ಷ್ವಪುತ್ರ ಕುರುಖಷಭ ಬಲಶಾಲಿ ರಾಜ ಸಂವರಣನು ಸದಾ ಅರ್ಫ್ಥ್ಯ ಮಾಲೆ ಉಪಹಾರಗಳಿಂದ, ಉಪವಾಸ ವ್ರತಗಳಿಂದ ಮತ್ತು ವಿವಿಧ ತಪಸ್ಸುಗಳಿಂದ ನಿಯಮಬದ್ಧನಾಗಿ ಸೂರ್ಯಾರಾಧನೆಯಲ್ಲಿ ತೊಡಗಿದ್ದನು.

शुश्रूषुरनहंवादी शुचिः पौरवनन्दनः।
अंशुमन्तं समुद्यन्तं पूजयामास भक्तिमान् ॥01-160-014॥

ಆ ಪೌರವನಂದನನು ವಿನಯದಿಂದ, ಅಹಂಕಾರವಿಲ್ಲದೆ ಶುಚಿರ್ಭೂತನಾಗಿ ಭಕ್ತಿಯಿಂದ ಆ ಅಂಶುಮಂತನನ್ನು ಪೂಜಿಸುತ್ತಿದ್ದನು.

ततः कृतज्ञं धर्मज्ञं रूपेणासदृशं भुवि।
तपत्याः सदृशं मेने सूर्यः संवरणं पतिम् ॥01-160-015॥

ಆಗ ಕೃತಜ್ಞನೂ, ಧರ್ಮಜ್ಞನೂ, ಭುಮಿಯಲ್ಲಿಯೇ ರೂಪದಲ್ಲಿ ಅಸದೃಶನೂ ಆದ ಸಂವರಣನು ತಪತಿಗೆ ಸದೃಶ ಪತಿಯೆಂದು ಸೂರ್ಯನು ಅಭಿಪ್ರಾಯಪಟ್ಟನು.

दातुमैच्छत्ततः कन्यां तस्मै संवरणाय ताम्।
नृपोत्तमाय कौरव्य विश्रुताभिजनाय वै ॥01-160-016॥

ಕೌರವ್ಯ! ಆಗ ಅವನು ತನ್ನ ಕನ್ಯೆಯನ್ನು ವಿಶ್ರುತ ಅಭಿಜನ ನೃಪೋತ್ತಮ ಸಂವರಣನಿಗೆ ಕೊಡಲು ಇಚ್ಛಿಸಿದನು.

यथा हि दिवि दीप्तांशुः प्रभासयति तेजसा।
तथा भुवि महीपालो दीप्त्या संवरणोऽभवत् ॥01-160-017॥

ದಿವಿಯಲ್ಲಿ ದೀಪ್ತಾಂಶುವು ತನ್ನ ತೇಜಸ್ಸಿನಿಂದ ಹೇಗೆ ಬೆಳಗುತ್ತಾನೋ ಹಾಗೆ ಭುವಿಯಲ್ಲಿ ಮಹೀಪಾಲ ಸಂವರಣನು ಬೆಳಗುತ್ತಿದ್ದನು.

यथार्चयन्ति चादित्यमुद्यन्तं ब्रह्मवादिनः।
तथा संवरणं पार्थ ब्राह्मणावरजाः प्रजाः ॥01-160-018॥

ಬ್ರಹ್ಮವಾದಿಗಳು ಹೇಗೆ ಉದಯಿಸುತ್ತಿರುವ ಆದಿತ್ಯನನ್ನು ಅರ್ಚಿಸುತ್ತಾರೋ ಹಾಗೆ ಪಾರ್ಥ ! ಬ್ರಾಹ್ಮಣರೇ ಮೊದಲಾದ ಪ್ರಜೆಗಳು ಸಂವರಣನನ್ನು ಪೂಜಿಸುತ್ತಿದ್ದರು.

स सोममति कान्तत्वादादित्यमति तेजसा।
बभूव नृपतिः श्रीमान्सुहृदां दुर्हृदामपि ॥01-160-019॥

ಆ ಶ್ರೀಮಾನ್‌ ನೃಪತಿಯು ತನ್ನ ಸುಹೃದಯರಿಗೆ ಕಾಂತಿಯಲ್ಲಿ ಸೋಮನಂತಿದ್ದನು ಮತ್ತು ದುಹೃದಯರಿಗೆ ತೇಜಸ್ಸಿನಲ್ಲಿ ಆದಿತ್ಯನಂತಿದ್ದನು.

एवंगुणस्य नृपतेस्तथावृत्तस्य कौरव।
तस्मै दातुं मनश्चक्रे तपतीं तपनः स्वयम् ॥01-160-020॥

ಕೌರವ! ಈ ರೀತಿಯ ಗುಣ ಚಾರಿತ್ರ್ಯವುಳ್ಳ ನೃಪತಿಗೆ ಸ್ವಯಂ ತಪನನೇ ತಪತಿಯನ್ನು ಕೊಡಲು ನಿಶ್ಚಯಿಸಿದನು.

स कदाचिदथो राजा श्रीमानुरुयशा भुवि।
चचार मृगयां पार्थ पर्वतोपवने किल ॥01-160-021॥

ಪಾರ್ಥ ! ಹೀಗಿರಲು ಭೂವಿಯಲ್ಲಿಯೇ ಅತ್ಯಂತ ಪ್ರಸಿದ್ಧ ಆ ಶ್ರೀಮಾನ್‌ ರಾಜನು ಒಮ್ಮೆ ಬೇಟೆಯಾಡಲು ಪರ್ವತದ ಉಪವನವೊಂದಕ್ಕೆ ಹೋದನು.

चरतो मृगयां तस्य क्षुत्पिपासाश्रमान्वितः।
ममार राज्ञः कौन्तेय गिरावप्रतिमो हयः ॥01-160-022॥

ಕೌಂತೇಯ ! ಬೇಟೆಯಾಡುತ್ತಿರುವಾಗ ಆ ರಾಜನ ಅಪ್ರತಿಮ ಕುದುರೆಯು ಹಸಿವು, ಬಾಯಾರಿಕೆ ಮತ್ತು ಆಯಾಸಗಳಿಂದ ಬಳಲಿ ಅಲ್ಲಿಯೇ ಬಿದ್ದು ಸತ್ತುಹೋಯಿತು.

स मृताश्वश्चरन्पार्थ पद्भ्यामेव गिरौ नृपः।
ददर्शासदृशीं लोके कन्यामायतलोचनाम् ॥01-160-023॥

ಪಾರ್ಥ ! ಕುದುರೆಯು ಸಾಯಲು ನೃಪನು ನಡೆದುಕೊಂಡೇ ಆ ಗಿರಿಯಮೇಲೆ ಹೋದನು. ಅಲ್ಲಿ ಅವನು ಲೋಕದಲ್ಲಿಯೇ ಅಸದೃಷಿ ಆಯತಲೋಚನೆ ಕನ್ಯೆಯೋರ್ವಳನ್ನು ನೋಡಿದನು.

स एक एकामासाद्य कन्यां तामरिमर्दनः।
तस्थौ नृपतिशार्दूलः पश्यन्नविचलेक्षणः ॥01-160-024॥

ಅಲ್ಲಿ ಅವನು ಒಬ್ಬನೇ ಇದ್ದನು. ಅವಳೂ ಒಬ್ಬಳೇ ಇದ್ದಳು. ಆ ಅರಿಮರ್ದನ ನೃಪತಿಶಾರ್ದೂಲನು ಕನ್ಯೆಯನ್ನು ಅವಿಚಲೇಕ್ಷಣನಾಗಿ ನೋಡತೊಡಗಿದನು.

स हि तां तर्कयामास रूपतो नृपतिः श्रियम्।
पुनः संतर्कयामास रवेर्भ्रष्टामिव प्रभाम् ॥01-160-025॥

ಅವಳ ರೂಪದಿಂದ ಅವಳು ಶ್ರೀಯಿರಬಹುದೆಂದು ನೃಪತಿಯು ತರ್ಕಿಸಿದನು. ಪುನಃ ಅವಳು ಭೂಮಿಯ ಮೇಲೆ ಬಿದ್ದಿರುವ ರವಿಯ ಪ್ರಭೆಯೇ ಇರಬಹುದು ಎಂದು ಯೋಚಿಸಿದನು.

गिरिप्रस्थे तु सा यस्मिन्स्थिता स्वसितलोचना।
स सवृक्षक्षुपलतो हिरण्मय इवाभवत् ॥01-160-026॥

ಆ ಅಸಿತಲೋಚನೆಯಾ ನಿಂತಿದ್ದ ಆ ಗಿರಿಪ್ರದೇಶವು, ಅಲ್ಲಿರುವ ವೃಕ್ಷ ಕ್ಷುಪ ಲತೆಗಳ ಜೊತೆಗೆ ಹಿರಣ್ಮಯದಂತೆ ತೋರುತ್ತಿತ್ತು.

अवमेने च तां दृष्ट्वा सर्वप्राणभृतां वपुः।
अवाप्तं चात्मनो मेने स राजा चक्षुषः फलम् ॥01-160-027॥

ಅವಳನ್ನು ನೋಡಿದ ಅವನು ಸರ್ವ ಪ್ರಾಣಿಗಳ ಸೌಂದರ್ಯವನ್ನು ಅವಹೇಳನ ಮಾಡಿದನು ಮತ್ತು ಆ ರಾಜನು ತನ್ನ ಕಣ್ಣುಗಳು ತಮ್ಮ ಉದ್ದೇಶಗಳ ಫಲವನ್ನು ಹೊಂದಿದವು ಎಂದು ತಿಳಿದನು.

जन्मप्रभृति यत्किंचिद्दृष्टवान्स महीपतिः।
रूपं न सदृशं तस्यास्तर्कयामास किंचन ॥01-160-028॥

ಜನ್ಮಪ್ರಭೃತಿಯಾಗಿ ಏನೆಲ್ಲ ನೋಡಿದ್ದನೋ ರೂಪದಲ್ಲಿ ಅವಳ ಸದೃಶವಾದ ಬೇರೆ ಏನನ್ನೂ ನೋಡಲಿಲ್ಲ ಎಂದು ಆ ಮಹೀಪತಿಯು ತರ್ಕಿಸಿದನು

तया बद्धमनश्चक्षुः पाशैर्गुणमयैस्तदा।
न चचाल ततो देशाद्बुबुधे न च किंचन ॥01-160-029॥

ಅವಳ ಗುಣಪಾಶಗಳಿಂದ ಅವನ ಬುದ್ಧಿ, ಮನಸ್ಸು ಮತ್ತು ಕಣ್ಣುಗಳು ಬಂಧಿತವಾಗಿ ಅವನು ಆ ಸ್ಥಳದಿಂದ ಚಂಚಲಿಸಲಿಲ್ಲ ಮತ್ತು ಅಲ್ಲಿರುವ ಯಾವುದರ ಪರಿಜ್ಞಾನವೂ ಅವನಿಗಿರಲಿಲ್ಲ.

अस्या नूनं विशालाक्ष्याः सदेवासुरमानुषम्।
लोकं निर्मथ्य धात्रेदं रूपमाविष्कृतं कृतम् ॥01-160-030॥

“ದೇವಾಸುರಮಾನುಷರ ಲೋಕವನ್ನೆಲ್ಲಾ ಮಥಿಸಿ ಧಾತ್ರಿಯು ಈ ವಿಶಾಲಾಕ್ಷಿಯ ರೂಪವನ್ನು ಆವಿಷ್ಕೃತಗೊಳಿಸಿರಬೇಕು

एवं स तर्कयामास रूपद्रविणसंपदा।
कन्यामसदृशीं लोके नृपः संवरणस्तदा ॥01-160-031॥

ಈ ರೀತಿ ರೂಪದ್ರವಿಣಸಂಪನ್ನೆ ಲೋಕದಲ್ಲಿಯೇ ಅಸದೃಶಿ ಕನ್ಯೆಯ ಕುರಿತು ನೃಪ ಸಂವರಣನು ಯೋಚಿಸಿದನು.

तां च दृष्ट्वैव कल्याणीं कल्याणाभिजनो नृपः।
जगाम मनसा चिन्तां काममार्गणपीडितः ॥01-160-032॥

ಕಲ್ಯಾಣಾಭಿಜನ ನೃಪನು ಆ ಕಲ್ಯಾಣಿಯನ್ನು ನೋಡುತ್ತಲೇ ಮನಸ್ಸು ಕಾಮಮಾರ್ಗಪೀಡಿತವಾಗಿ ಅವನು ಚಿಂತೆಗೊಳಗಾದನು.

दह्यमानः स तीव्रेण नृपतिर्मन्मथाग्निना।
अप्रगल्भां प्रगल्भः स तामुवाच यशस्विनीम् ॥01-160-033॥

ಮನ್ಮ್ಶಥಾಗ್ನ್ಮಿಯಿಂದ ತೀವ್ರವಾಗಿ ದಹಿಸುತ್ತಿದ್ದ ಆ ನೃಪತಿಯು ಅಪ್ರಗಲ್ಫರಲ್ಲಿ ಪ್ರಗಲೃಳಾದ ಯಶಸ್ವಿನಿಯನ್ನು ಕುರಿತು ಹೇಳಿದನು

कासि कस्यासि रम्भोरु किमर्थं चेह तिष्ठसि।
कथं च निर्जनेऽरण्ये चरस्येका शुचिस्मिते ॥01-160-034॥

“ನೀನು ಯಾರು? ನೀನು ಯಾರವಳು? ರಂಭೋರು! ಇಲ್ಲಿ ಯಾವ ಕಾರಣಕ್ಕಾಗಿ ನಿಂತಿರುವೆ? ಶುಚಿಸ್ಮಿತೇ! ನಿರ್ಜನ ಅರಣ್ಯದಲ್ಲಿ ಒಬ್ಬಂಟಿಯಾಗಿ ಏಕೆ ತಿರುಗುತ್ತಿರುವೆ?

त्वं हि सर्वानवद्याङ्गी सर्वाभरणभूषिता।
विभूषणमिवैतेषां भूषणानामभीप्सितम् ॥01-160-035॥

ಸರ್ವಾನವದ್ಯಾಂಗಿ ಸರ್ವಾಭರಣ ಭೂಷಿತೆಯಾದ ನಿನ್ನ ವಿಭೂಷಣಗಳೆಲ್ಲವೂ ನಿನ್ನನ್ನೇ ಭೂಷಣವನ್ನಾಗಿ ಬಯಸುತ್ತಿರುವಂತಿದೆ.

न देवीं नासुरीं चैव न यक्षीं न च राक्षसीम्।
न च भोगवतीं मन्ये न गन्धर्वीं न मानुषीम् ॥01-160-036॥

ನೀನು ದೇವಿ ಅಥವಾ ಅಸುರಿ ಅಥವಾ ಯಕ್ಷೀ ಅಥವಾ ರಾಕ್ಷಸೀ ಅಥವಾ ಭೋಗವತೀ ಅಥವಾ ಗಂಧರ್ವಿ ಅಥವಾ ಮಾನುಷಿಯೆಂದು ನನಗೆ ಅನ್ನಿಸುವುದಿಲ್ಲ.

या हि दृष्टा मया काश्चिच्छ्रुता वापि वराङ्गनाः।
न तासां सदृशीं मन्ये त्वामहं मत्तकाशिनि ॥01-160-037॥

ಮತ್ತಕಾಶಿನೀ! ಇದೂವರೆಗೆ ನಾನು ಯಾವ ವರಾಂಗನೆಯರನ್ನು ನೋಡಿದ್ದೆನೋ ಅಥವಾ ಅವರ ಕುರಿತು ಕೇಳಿದ್ದೆನೋ ಅವರಲ್ಲಿ ಯಾರೂ ನಿನ್ನ ಸದೃಶರೆಂದು ನಾನು ತಿಳಿಯುವುದಿಲ್ಲ.”

एवं तां स महीपालो बभाषे न तु सा तदा।
कामार्तं निर्जनेऽरण्ये प्रत्यभाषत किंचन ॥01-160-038॥

ಈ ರೀತಿ ಆ ಮಹೀಪಾಲನು ಅವಳಲ್ಲಿ ಮಾತನಾಡಿದನು. ಆದರೆ ಆ ನಿರ್ಜನ ಅರಣ್ಯದಲ್ಲಿ ಅವಳು ಕಾಮಾರ್ತನಿಗೆ ಏನನ್ನೂ ಪ್ರತ್ಯುತ್ತರಿಸಲಿಲ್ಲ.

ततो लालप्यमानस्य पार्थिवस्यायतेक्षणा।
सौदामिनीव साभ्रेषु तत्रैवान्तरधीयत ॥01-160-039॥

ಆ ಪಾರ್ಥಿವನು ಈ ರೀತಿ ಲಾಲಪಿಸುತ್ತಿರಲು ಆ ಆಯತೇಕ್ಷಣೆಯು ಮೋಡಗಳಲ್ಲಿ ಮಿಂಚಿನಂತೆ ಅಲ್ಲಿಯೇ ಅಂತರ್ಧಾನಳಾದಳು.

तामन्विच्छन्स नृपतिः परिचक्राम तत्तदा।
वनं वनजपत्राक्षीं भ्रमन्नुन्मत्तवत्तदा ॥01-160-040॥

ಭ್ರಮೆಗೊಳಗಾದವನಂತೆ ಆ ನೃಪತಿಯು ಆ ವನಚಪತ್ಪಾಕ್ಷಿಯನ್ನು ವನದಲ್ಲೆಲ್ಲಾ ಹುಡುಕಾಡತೊಡಗಿದನು.

अपश्यमानः स तु तां बहु तत्र विलप्य च।
निश्चेष्टः कौरवश्रेष्ठो मुहूर्तं स व्यतिष्ठत ॥01-160-041॥

ಅವಳನ್ನು ಅಲ್ಲಿ ಕಾಣದಿರಲು ಆ ಕೌರವಶ್ರೇಷ್ಠನು ವಿಲಪಿಸುತ್ತಾ ಸ್ವಲ್ಪ ಹೊತ್ತು ಅಲ್ಲಿಯೇ ನಿಂತುಬಿಟ್ಟನು.”

Adhyaya 161

गन्धर्व उवाच।
अथ तस्यामदृश्यायां नृपतिः काममोहितः।
पातनः शत्रुसंघानां पपात धरणीतले ॥01-161-001॥

ಗಂಧರ್ವನು ಹೇಳಿದನು: “ಅವಳು ಅದೃಶ್ಯಳಾದ ನಂತರ ಶತ್ರುಸಂಘಗಳನ್ನು ಕೆಳಗುರುಳಿಸಬಲ್ಲ ನೃಪತಿಯು ಕಾಮಮೋಹಿತನಾಗಿ ಧರಣೀತಲದಲ್ಲಿ ಬಿದ್ದನು.

तस्मिन्निपतिते भूमावथ सा चारुहासिनी।
पुनः पीनायतश्रोणी दर्शयामास तं नृपम् ॥01-161-002॥

अथाबभाषे कल्याणी वाचा मधुरया नृपम्।
तं कुरूणां कुलकरं कामाभिहतचेतसम् ॥01-161-003॥

ಅವನು ಆ ರೀತಿ ಭೂಮಿಯ ಮೇಲೆ ಬೀಳಲು ಆ ಚಾರುಹಾಸಿನೀ ಪೀನಾಯತಶ್ರೋಣಿಯು ಪುನಃ ನೃಪತಿಗೆ ಕಾಣಿಸಿಕೊಂಡಳು. ಆ ಕಲ್ಯಾಣಿಯು ತನ್ನ ಮಧುರ ಮಾತುಗಳಿಂದ ಕಾಮಾಭಿಹತಚೇತನ ಆ ಕುರುಕುಲಕರ ನೃಪತಿಯನ್ನುದ್ದೇಶಿಸಿ ಹೇಳಿದಳು.

उत्तिष्ठोत्तिष्ठ भद्रं ते न त्वमर्हस्यरिंदम।
मोहं नृपतिशार्दूल गन्तुमाविष्कृतः क्षितौ ॥01-161-004॥

“ಎದ್ದೇಳು ಅರಿಂದವು! ನಿನಗೆ ಮಂಗಳವಾಗಲಿ! ನೃಪತಿಶಾರ್ದೂಲ! ಮೋಹ ಆವಿಷ್ಕೃತನಾಗಿ ಈ ರೀತಿ ಭೂಮಿಯ ಮೇಲೆ ಬೀಳುವುದು ನಿನಗೆ ಅರ್ಹವಾದುದಲ್ಲ.”

एवमुक्तोऽथ नृपतिर्वाचा मधुरया तदा।
ददर्श विपुलश्रोणीं तामेवाभिमुखे स्थिताम् ॥01-161-005॥

ಈ ಮಧುರ ಮಾತುಗಳನ್ನು ಕೇಳಿದ ನೃಪತಿಯು ಮೇಲೆ ನೋಡಲು ತನ್ನ ಎದುರೇ ನಿಂತಿದ್ದ ಆ ವಿಪುಲಶ್ರೋಣಿಯನ್ನು ಕಂಡನು.

अथ तामसितापाङ्गीमाबभाषे नराधिपः।
मन्मथाग्निपरीतात्मा संदिग्धाक्षरया गिरा ॥01-161-006॥

ಆಗ ಮನ್ಮಹಥಾಗ್ನಿ ಪರೀತಾತ್ಮ ಆ ನರಾಧಿಪನು ತಾಮಸಿತಾ ಅಪಾಂಗಿಗೆ ಸಂದಿಗ್ಧಾಕ್ಷರಗಳನ್ನೊಡಗೂಡಿದ ಮಾತಿನಿಂದ ಉತ್ತರಿಸಿದನು.

साधु मामसितापाङ्गे कामार्तं मत्तकाशिनि।
भजस्व भजमानं मां प्राणा हि प्रजहन्ति माम् ॥01-161-007॥

“ಮತ್ತಕಾಶಿನೀ! ಅಸಿತಾಪಾಂಗೇ! ಕಾಮಾರ್ತನಾದ ನನ್ನನ್ನು ಪ್ರೀತಿಸು. ಬಯಸುತ್ತಿರುವ ನನ್ನನ್ನು ಬಯಸು. ನನ್ನ ಪ್ರಾಣವೇ ನನ್ನನ್ನು ತೊರೆಯುತ್ತಿದೆ.

त्वदर्थं हि विशालाक्षि मामयं निशितैः शरैः।
कामः कमलगर्भाभे प्रतिविध्यन्न शाम्यति ॥01-161-008॥

ग्रस्तमेवमनाक्रन्दे भद्रे काममहाहिना।
सा त्वं पीनायतश्रोणि पर्याप्नुहि शुभानने ॥01-161-009॥

ವಿಶಾಲಾಕ್ಷಿ! ಕಮಲಗರ್ಭಾಭೇ! ಕಾಮದ ಈ ನಿಶಿತ ಶರಗಳು ನಿನ್ನಿಂದಾಗಿ ನನ್ನನ್ನು ಚುಚ್ಚುವುದನ್ನು ನಿಲ್ಲಿಸುತ್ತಲೇ ಇಲ್ಲ. ಭದ್ರೇ! ಕಾಮದ ವಿಷದಿಂದ ಗ್ರಸ್ತನಾಗಿದ್ದೇನೆ. ಪೀನಾಯತಶ್ರೋಣಿ ! ಶುಭಾನನೇ! ನನ್ನನ್ನು ತೃಪ್ತಿಗೊಳಿಸು.

त्वय्यधीना हि मे प्राणाः किंनरोद्गीतभाषिणि।
चारुसर्वानवद्याङ्गि पद्मेन्दुसदृशानने ॥01-161-010॥

ಚಾರು! ಸರ್ವಾನವದ್ಯಾಂಗೀ! ಪದ್ಮೇಂದುಸದೃಶಾನನೇ! ನನ್ನ ಈ ಪ್ರಾಣವು ಕಿನ್ನರರ ಗೀತಭಾಷಿಣಿ ನಿನ್ನ ಅಧೀನವಾಗಿದೆ.

न ह्यहं त्वदृते भीरु शक्ष्ये जीवितुमात्मना।
तस्मात्कुरु विशालाक्षि मय्यनुक्रोशमङ्गने ॥01-161-011॥
भक्तं मामसितापाङ्गे न परित्यक्तुमर्हसि।
त्वं हि मां प्रीतियोगेन त्रातुमर्हसि भामिनि ॥01-161-012॥

ಭೀರು! ನಿನ್ನ ಹೊರತಾಗಿ ನಾನು ನಾನೇ ಜೀವಿತವಿರಲು ಶಕ್ಕನಿಲ್ಲ. ಆದುದರಿಂದ ವಿಶಾಲಾಕ್ಷಿ! ಅಂಗನೇ! ನನ್ನ ಮೇಲೆ ಅನುಕ್ರೋಶವನ್ನು ತೋರು. ಅಸಿತಾಪಾಂಗೇ! ಭಕ್ತನಾದ ನನ್ನನ್ನು ತ್ಯಜಿಸಬೇಡ. ಭಾಮಿನೀ! ನೀನೇ ನನ್ನನ್ನು ಪ್ರೀತಿಯೋಗದಿಂದ ಉದ್ಧಾರ ಮಾಡಬಹುದು.

गान्धर्वेण च मां भीरु विवाहेनैहि सुन्दरि।
विवाहानां हि रम्भोरु गान्धर्वः श्रेष्ठ उच्यते ॥01-161-013॥

ಭೀರು! ಸುಂದರಿ ! ಗಾಂಧರ್ವ ವಿವಾಹದಿಂದಲೇ ನನ್ನವಳಾಗು. ರಂಭೋರು! ವಿವಾಹಗಳಲ್ಲಿಯೇ ಗಂಧರ್ವ ವಿವಾಹವು ಶ್ರೇಷ್ಠವೆಂದು ಹೇಳುತ್ತಾರೆ.”

तपत्युवाच।
नाहमीशात्मनो राजन्कन्या पितृमती ह्यहम्।
मयि चेदस्ति ते प्रीतिर्याचस्व पितरं मम ॥01-161-014॥

ತಪತಿಯು ಹೇಳಿದಳು: “ರಾಜನ್‌! ನನ್ನ ಒಡತಿ ನಾನಲ್ಲ. ನನ್ನ ತಂದೆಯು ಇದ್ದಾನೆ. ನನ್ನಲ್ಲಿ ನಿನ್ನ ಪ್ರೀತಿಯಿದ್ದರೆ ನನ್ನ ತಂದೆಯಲ್ಲಿ ಕೇಳಿಕೋ.

यथा हि ते मया प्राणाः संगृहीता नरेश्वर।
दर्शनादेव भूयस्त्वं तथा प्राणान्ममाहरः ॥01-161-015॥

ನರೇಶ್ವರ ನಿನ್ನ ಪ್ರಾಣವು ಹೇಗೆ ನನ್ನಿಂದ ಬಂಧಿಸಲ್ಪಟ್ಟಿದೆಯೋ ಅದೇರೀತಿ ನಿನ್ನನ್ನು ನೋಡಿದ ಕ್ಷಣದಿಂದ ನನ್ನ ಪ್ರಾಣವನ್ನೂ ನೀನು ಅಪಹರಿಸಿದ್ದೀಯೆ.

न चाहमीशा देहस्य तस्मान्नृपतिसत्तम।
समीपं नोपगच्छामि न स्वतन्त्रा हि योषितः ॥01-161-016॥

ನಾನು ನನ್ನ ಈ ದೇಹದ ಒಡತಿಯಲ್ಲ. ಆದುದರಿಂದ ನೃಪತಿಸತ್ತಮ ನಿನ್ನ ಸಮೀಪ ಬರಲಾರೆನು. ಕನ್ಯೆಯು ಸ್ವತಂತ್ರಳಲ್ಲ.

का हि सर्वेषु लोकेषु विश्रुताभिजनं नृपम्।
कन्या नाभिलषेन्नाथं भर्तारं भक्तवत्सलम् ॥01-161-017॥

ಆದರೆ ಯಾವ ಕನ್ಯೆಯು ತಾನೆ ಸರ್ವ ಲೋಕಗಳಲ್ಲಿಯೂ ವಿಶ್ರುತ ಕುಲದಲ್ಲಿ ಜನಿಸಿದ ನೃಪನನ್ನು ತನ್ನ ನಾಥ, ಭಕ್ತವತ್ಸಲ ಭರ್ತಾರನನ್ನಾಗಿ ಅಭಿಲಾಷಿಸುವುದಿಲ್ಲ?

तस्मादेवंगते काले याचस्व पितरं मम।
आदित्यं प्रणिपातेन तपसा नियमेन च ॥01-161-018॥

ಆದುದರಿಂದ ಈಗ ಸಮಯ ಬಂದಿರುವುದರಿಂದ ನನ್ನ ತಂದೆ ಆದಿತ್ಯನಲ್ಲಿ ಪ್ರಣಿಪಾತ, ತಪಸ್ಸು ಮತ್ತು ನಿಯಮಗಳಿಂದ ಬೇಡಿಕೋ.

स चेत्कामयते दातुं तव मामरिमर्दन।
भविष्याम्यथ ते राजन्सततं वशवर्तिनी ॥01-161-019॥

ಅರಿಮರ್ದನ! ರಾಜನ್‌! ಒಂದು ವೇಳೆ ಅವನು ನನ್ನನ್ನು ನಿನಗೆ ಕೊಡಲು ಬಯಸಿದರೆ ಸತತವಾಗಿಯೂ ನಿನ್ನ ವಶವರ್ತಿನಿಯಾಗಿರುತ್ತೇನೆ.

अहं हि तपती नाम सावित्र्यवरजा सुता।
अस्य लोकप्रदीपस्य सवितुः क्षत्रियर्षभ ॥01-161-020॥

ಕ್ಲತ್ರಿಯರ್ಷಭ! ನಾನು ಈ ಲೋಕಪ್ರದೀಪ ಸವಿತುವಿನ ಮಗಳು, ಸಾವಿತ್ರಿಯ ತಂಗಿ. ನನ್ನ ಹೆಸರು ತಪತೀ.””

Adhyaya 162

गन्धर्व उवाच।
एवमुक्त्वा ततस्तूर्णं जगामोर्ध्वमनिन्दिता।
स तु राजा पुनर्भूमौ तत्रैव निपपात ह ॥01-162-001॥

ಗಂಧರ್ವನು ಹೇಳಿದನು: “ಹೀಗೆ ಹೇಳಿದ ತಕ್ಷಣವೇ ಆ ಅನಿಂದಿತೆಯು ಮೇಲೆ ಹೋದಳು ಮತ್ತು ರಾಜನು ಪುನಃ ಅಲ್ಲಿಯೇ ಭೂಮಿಯ ಮೇಲೆ ಬಿದ್ದನು.

अमात्यः सानुयात्रस्तु तं ददर्श महावने।
क्षितौ निपतितं काले शक्रध्वजमिवोच्छ्रितम् ॥01-162-002॥

ಅವನ ಅಮಾತ್ಯ ಮತ್ತು ಅನುಯಾಯಿಗಳು ಆ ಮಹಾವನದಲ್ಲಿ ಕಾಲದಲ್ಲಿ ಶಕ್ರಧ್ವಜವು ಬಿದ್ದಂತೆ ಭೂಮಿಯ ಮೇಲೆ ಮೂರ್ಥಿತನಾಗಿ ಬಿದ್ದಿದ್ದ ಅವನನ್ನು ಕಂಡರು.

तं हि दृष्ट्वा महेष्वासं निरश्वं पतितं क्षितौ।
बभूव सोऽस्य सचिवः संप्रदीप्त इवाग्निना ॥01-162-003॥

ಬೆಳಗುತ್ತಿರುವ ಅಗ್ನಿಯಂತೆ ನಿರಶ್ವನಾಗಿ ಕ್ಲಿತಿಯಲ್ಲಿ ಬಿದ್ದಿರುವ ಮಹೇಷ್ಟಾಸನನ್ನು ನೋಡಿದ ಅವನನ್ನು ಅವನ ಸಚಿವನು ನೋಡಿದನು.

त्वरया चोपसंगम्य स्नेहादागतसंभ्रमः।
तं समुत्थापयामास नृपतिं काममोहितम् ॥01-162-004॥
भूतलाद्भूमिपालेशं पितेव पतितं सुतम्।
प्रज्ञया वयसा चैव वृद्धः कीर्त्या दमेन च ॥01-162-005॥

ತ್ವರೆಮಾಡಿ ಅವನ ಬಳಿ ಹೋಗಿ ಸ್ನೇಹಭಾವದಿಂದ ಸಂಭ್ರಮಗೊಂಡು ಪ್ರಜ್ಞೆ, ವಯಸ್ಸು, ಕೀರ್ತಿ ಮತ್ತು ದಮದಲ್ಲಿ ವೃದ್ಧನಾಗಿದ್ದ ಅವನು ಕಾಮಮೋಹಿತ ನೃಪತಿಯನ್ನು ಭೂಮಿಯ ಮೇಲೆ ಬಿದ್ದಿರುವ ಸುತನನ್ನು ತಂದೆಯು ಹೇಗೋ ಹಾಗೆ ಭೂಮಿಯಿಂದ ಮೇಲೆತ್ತಿದನು.

अमात्यस्तं समुत्थाप्य बभूव विगतज्वरः।
उवाच चैनं कल्याण्या वाचा मधुरयोत्थितम्।
मा भैर्मनुजशार्दूल भद्रं चास्तु तवानघ ॥01-162-006॥

ಅವನನ್ನು ಮೇಲಕ್ಕೆತ್ತಿದ ಅಮಾತ್ಯನು ಉದ್ವೇಗವು ಹೊರಟುಹೋಗಿ ಎದ್ದುನಿಂತಿರುವ ಕಲ್ಯಾಣಕರನಿಗೆ ಈ ರೀತಿಯ ಮಧುರ ಮಾತುಗಳನ್ನಾಡಿದನು: “ಮನುಜಶಾರ್ದೂಲ! ಅನಘ! ಭಯಪಡಬೇಡ! ಎಲ್ಲವೂ ಮಂಗಳಕರವಾಗುತ್ತದೆ.”

क्षुत्पिपासापरिश्रान्तं तर्कयामास तं नृपम्।
पतितं पातनं संख्ये शात्रवाणां महीतले ॥01-162-007॥

ಹಲವಾರು ಶತ್ರುಗಳನ್ನು ರಣರಂಗದಲ್ಲಿ ಬೀಳಿಸುವ ನೃಪನು ಹಸಿವು ಬಾಯಾರಿಕೆಗಳಿಂದ ಬಳಲಿ ಮಹೀತಲದಲ್ಲಿ ಬಿದ್ದಿದ್ದಾನೆ ಎಂದು ಅವನು ಯೋಚಿಸಿದನು.

वारिणाथ सुशीतेन शिरस्तस्याभ्यषेचयत्।
अस्पृशन्मुकुटं राज्ञः पुण्डरीकसुगन्धिना ॥01-162-008॥

ರಾಜನ ಮುಕುಟವನ್ನು ಮುಟ್ಟದೆಯೇ ಅವನು ಪುಂಡರೀಕಸುಗಂಧಿತ ತಣ್ಣನೆಯ ನೀರನ್ನು ಅವನ ತಲೆಯ ಮೇಲೆ ಸಿಂಚಿಸಿದನು.

ततः प्रत्यागतप्राणस्तद्बलं बलवान्नृपः।
सर्वं विसर्जयामास तमेकं सचिवं विना ॥01-162-009॥

ಪುನಃ ಚೇತರಿಸಿಕೊಂಡ ಬಲವಾನ್‌ ನೃಪನು ತನ್ನ ಸಚಿವ ಮಾತ್ರನನ್ನು ಬಿಟ್ಟು ಉಳಿದ ಎಲ್ಲ ಬಲವನ್ನೂ ವಿಸರ್ಜಿಸಿದನು.

ततस्तस्याज्ञया राज्ञो विप्रतस्थे महद्बलम्।
स तु राजा गिरिप्रस्थे तस्मिन्पुनरुपाविशत् ॥01-162-010॥

ರಾಜನ ಆಜ್ಞೆಯಂತೆ ಆ ಮಹಾಬಲವು ಹೊರಟುಹೋದ ನಂತರ ರಾಜನು ಪುನಃ ಗಿರಿಪ್ಪಸ್ಥದಲ್ಲಿ ಕುಳಿತುಕೊಂಡನು.

ततस्तस्मिन्गिरिवरे शुचिर्भूत्वा कृताञ्जलिः।
आरिराधयिषुः सूर्यं तस्थावूर्ध्वभुजः क्षितौ ॥01-162-011॥

ಆಗ ಆ ಗಿರಿವರದಲ್ಲಿ ಅವನು ಶುಚಿರ್ಭೂತನಾಗಿ ಅಂಜಲೀಬದ್ಧನಾಗಿ ಭುಜಗಳನ್ನು ಮೇಲಕ್ಕೆತ್ತಿ ಸೂರ್ಯನನ್ನು ಆರಾಧಿಸುತ್ತಾ ನಿಂತುಕೊಂಡನು.

जगाम मनसा चैव वसिष्ठमृषिसत्तमम्।
पुरोहितममित्रघ्नस्तदा संवरणो नृपः ॥01-162-012॥

ಆಗ ಆ ಅಮಿತ್ರಫ್ನ ನೃಪ ಸಂವರಣನು ತನ್ನ ಪುರೋಹಿತ ಖಷಿಸತ್ತಮ ವಸಿಷ್ಠನನ್ನು ಮನಸ್ಸಿನಲ್ಲಿಯೇ ನೆನೆಸಿಕೊಂಡನು.

नक्तंदिनमथैकस्थे स्थिते तस्मिञ्जनाधिपे।
अथाजगाम विप्रर्षिस्तदा द्वादशमेऽहनि ॥01-162-013॥

ಹನ್ನೆರಡು ದಿನಗಳ ಪರ್ಯಂತ ಆ ಜನಾಧಿಪನು ಅದೇ ಸ್ಥಳದಲ್ಲಿ ನಿಂತುಕೊಂಡಿದ್ದನು ಹನ್ನೆರಡನೆಯ ದಿನ ಆ ವಿಪ್ರರ್ಷಿಯು ಅಲ್ಲಿಗೆ ಬಂದನು.

स विदित्वैव नृपतिं तपत्या हृतमानसम्।
दिव्येन विधिना ज्ञात्वा भावितात्मा महानृषिः ॥01-162-014॥

तथा तु नियतात्मानं स तं नृपतिसत्तमम्।
आबभाषे स धर्मात्मा तस्यैवार्थचिकीर्षया ॥01-162-015॥

ನೃಪತಿಯು ತಪತಿಯಲ್ಲಿ ಮನಸ್ಸನ್ನು ಕಳೆದುಕೊಂಡಿದ್ದಾನೆ ಎಂದು ದಿವ್ಯ ವಿಧಿಯಿಂದ ಆ ಭಾವಿತಾತ್ಮ ಮಹಾನೃಷಿಯು ತಿಳಿದುಕೊಂಡನು. ಆಗ ಅವನಿಗೆ ಒಳ್ಳೆಯದನ್ನೇ ಮಾಡಬೇಕೆಂದು ಬಯಸಿದ ಆ ಧರ್ಮಾತ್ಮನು ನಿಯತಾತ್ಮ ನೃಪತಿಸತ್ತಮನಲ್ಲಿ ಮಾತನಾಡಿದನು.

स तस्य मनुजेन्द्रस्य पश्यतो भगवानृषिः।
ऊर्ध्वमाचक्रमे द्रष्टुं भास्करं भास्करद्युतिः ॥01-162-016॥

ಆ ಮನುಜೇಂದ್ರನು ನೋಡುತ್ತಿದ್ದಂತೆಯೇ ಭಗವಾನೃಷಿಯು ಭಾಸ್ಕರದ್ಯುತಿ ಭಾಸ್ಕರನನ್ನು ನೋಡಲು ಮೇಲೆ ಹೋದನು.

सहस्रांशुं ततो विप्रः कृताञ्जलिरुपस्थितः।
वसिष्ठोऽहमिति प्रीत्या स चात्मानं न्यवेदयत् ॥01-162-017॥

ಆಗ ಸಹಸ್ಪಾಂಶುವಲ್ಲಿ ಕೃತಾಂಜಲಿಯಾಗಿ ನಿಂತು ವಿಪ್ರನು “ನಾನು ವಸಿಷ್ಠ ಎಂದು ತನ್ನನ್ನು ತಾನೇ ನಿವೇದಿಸಿಕೊಂಡನು.

तमुवाच महातेजा विवस्वान्मुनिसत्तमम्।
महर्षे स्वागतं तेऽस्तु कथयस्व यथेच्छसि ॥01-162-018॥

ಆಗ ಮಹಾತೇಜಸ್ವಿ ವಿವಸ್ವತನು ಆ ಮುನಿಸತ್ತಮನಿಗೆ “ಮಹರ್ಷೇ ! ನಿನಗೆ ಸ್ವಾಗತವು ಏನನ್ನು ಇಚ್ಛಿಸಿ ಬಂದೆ ಹೇಳು.”

Adhyaya 163

वसिष्ठ उवाच।
यैषा ते तपती नाम सावित्र्यवरजा सुता।
तां त्वां संवरणस्यार्थे वरयामि विभावसो ॥01-163-001॥

ವಸಿಷ್ಠನು ಹೇಳಿದನು: “ವಿಭಾವಸೋ ! ಸಂವರಣನಿಗಾಗಿ ತಪತೀ ಎಂಬ ಹೆಸರಿನ ನಿನ್ನ ಮಗಳು ಮತ್ತು ಸಾವಿತ್ರಿಯ ತಂಗಿಯನ್ನು ಕೇಳಿಕೊಂಡು ಬಂದಿದ್ದೇನೆ.

स हि राजा बृहत्कीर्तिर्धर्मार्थविदुदारधीः।
युक्तः संवरणो भर्ता दुहितुस्ते विहंगम ॥01-163-002॥

ವಿಹಂಗಮ! ಉದಾರ ಮನಸ್ಕನಾದ, ಬೃಹಶ್ಕೀರ್ತಿ, ಧರ್ಮ, ಮತ್ತು ಅರ್ಥವನ್ನು ಹೊಂದಿರುವ ರಾಜ ಸಂವರಣನು ನಿನ್ನ ಮಗಳಿಗೆ ಯೋಗ್ಯ ವರನಾಗುತ್ತಾನೆ.””

गन्धर्व उवाच।
इत्युक्तः सविता तेन ददानीत्येव निश्चितः।
प्रत्यभाषत तं विप्रं प्रतिनन्द्य दिवाकरः ॥01-163-003॥

ಗಂಧರ್ವನು ಹೇಳಿದನು: “ಅವಳನ್ನು ಅವನಿಗೇ ಕೊಡಬೇಕೆಂದು ಮೊದಲೇ ನಿಶ್ಚಯಿಸಿದ್ದ ಸವಿತು ದಿವಾಕರನು ಆ ವಿಪ್ರನನ್ನು ನಮಸ್ಕರಿಸಿ ಉತ್ತರಿಸಿದನು:

वरः संवरणो राज्ञां त्वमृषीणां वरो मुने।
तपती योषितां श्रेष्ठा किमन्यत्रापवर्जनात् ॥01-163-004॥

“ನೀನು ಖಷಿಗಳಲ್ಲಿ ಶ್ರೇಷ್ಠನು ಹೇಗೋ ಹಾಗೆ ರಾಜರಲ್ಲಿ ಸಂವರಣನು ಶ್ರೇಷ್ಠ ಮತ್ತು ಕನ್ಕೆಯರಲ್ಲಿ ತಪತಿಯು ಶ್ರೇಷ್ಠೆ. ಹೀಗಿರುವಾಗ ಅವಳನ್ನು ಬೇರೆ ಎಲ್ಲಿ ಯಾಕೆ ಕೊಡಬೇಕು?”

ततः सर्वानवद्याङ्गीं तपतीं तपनः स्वयम्।
ददौ संवरणस्यार्थे वसिष्ठाय महात्मने।
प्रतिजग्राह तां कन्यां महर्षिस्तपतीं तदा ॥01-163-005॥
वसिष्ठोऽथ विसृष्टश्च पुनरेवाजगाम ह।
यत्र विख्यातकीर्तिः स कुरूणामृषभोऽभवत् ॥01-163-006॥

ಆಗ ಸ್ವಯಂ ತಪನನು ಸರ್ವಾನವದ್ಯಾಂಗಿ ತಪತಿಯನ್ನು ಸಂವರಣನಿಗಾಗಿ ಮಹಾತ್ಮ ವಸಿಷ್ಠನಿಗೆ ಕೊಟ್ಟನು. ಮಹರ್ಷಿಯು ಕನ್ಯೆ ತಪತಿಯನ್ನು ಸ್ವೀಕರಿಸಿದನು. ಅವನಿಂದ ಬೀಳ್ಕೊಂಡ ವಸಿಷ್ಠನು ಪುನಃ ವಿಖ್ಯಾತಕೀರ್ತಿ ಕುರುಗಳ ವೃಷಭನಿದ್ದಲ್ಲಿಗೆ ಬಂದನು.

स राजा मन्मथाविष्टस्तद्गतेनान्तरात्मना।
दृष्ट्वा च देवकन्यां तां तपतीं चारुहासिनीम्।
वसिष्ठेन सहायान्तीं संहृष्टोऽभ्यधिकं बभौ ॥01-163-007॥

ಮನ್ಮಥಾವಿಷ್ಯನಾಗಿ ಅಂತರಾತ್ಮವನ್ನೇ ಅವಳೊಡನೆ ಕಳುಹಿಸಿಕೊಟ್ಟಿದ್ದ ರಾಜನು ವಸಿಷ್ಠನೊಡನೆ ಬಂದಿದ್ದ ಚಾರುಹಾಸಿನಿ ದೇವಕನ್ಯೆ ತಪತಿಯನ್ನು ನೋಡಿ ಅತ್ಯಧಿಕ ಹರ್ಷಗೊಂಡನು.

कृच्छ्रे द्वादशरात्रे तु तस्य राज्ञः समापिते।
आजगाम विशुद्धात्मा वसिष्ठो भगवानृषिः ॥01-163-008॥

तपसाराध्य वरदं देवं गोपतिमीश्वरम्।
लेभे संवरणो भार्यां वसिष्ठस्यैव तेजसा ॥01-163-009॥

ರಾಜನು ದ್ವಾದಶ ರಾತ್ರಿಗಳ ಕೃಚ್ಛ್ರವನ್ನು ಪೂರೈಸುತ್ತಿದ್ದಂತೆಯೇ ವಿಶುದ್ಧಾತ್ಮ ಭಗವಾನೃಷಿ ವಸಿಷ್ಠನು ಬಂದನು. ವರದ, ದೇವ, ಗೋಪಿ, ಈಶ್ವರನನ್ನು ತಪಸ್ಸಿನಿಂದ ಆರಾಧಿಸಿ ವಸಿಷ್ಠನ ತೇಜಸ್ಸಿನಿಂದ ಸಂವರಣನು ಭಾರ್ಯೆಯನ್ನು ಪಡೆದನು.

ततस्तस्मिन्गिरिश्रेष्ठे देवगन्धर्वसेविते।
जग्राह विधिवत्पाणिं तपत्याः स नरर्षभः ॥01-163-010॥

ಆಗ ದೇವಗಂಧರ್ವಸೇವಿತ ಆ ಶ್ರೇಷ್ಠ ಗಿರಿಯಲ್ಲಿಯೇ ಆ ನರರ್ಷಭನು ವಿಧಿವತ್ತಾಗಿ ತಪತಿಯ ಪಾಣಿಗ್ರಹಣ ಮಾಡಿದನು.

वसिष्ठेनाभ्यनुज्ञातस्तस्मिन्नेव धराधरे।
सोऽकामयत राजर्षिर्विहर्तुं सह भार्यया ॥01-163-011॥

ततः पुरे च राष्ट्रे च वाहनेषु बलेषु च।
आदिदेश महीपालस्तमेव सचिवं तदा ॥01-163-012॥

ವಸಿಷ್ಠನ ಅನುಜ್ಞೆಯನ್ನು ಪಡೆದು ಆ ರಾಜರ್ಷಿಯು ತನ್ನ ಭಾರ್ಯೆಯೊಂದಿಗೆ ಅದೇ ಧರಾಧರದಲ್ಲಿ ಕಾಮಿಸಿದನು. ಮಹೀಪಾಲನು ಅದೇ ಸಚಿವನನ್ನು ಪುರ, ರಾಷ್ಟ್ರ, ವಾಹನ ಮತ್ತು ಸೇನೆಗಳ ಮೇಲ್ವಿಚಾರಣೆಗೆ ನೇಮಿಸಿದನು.

नृपतिं त्वभ्यनुज्ञाय वसिष्ठोऽथापचक्रमे।
सोऽपि राजा गिरौ तस्मिन्विजहारामरोपमः ॥01-163-013॥

ನೃಪತಿಯಿಂದ ಬೀಳ್ಕೊಂಡ ವಸಿಷ್ಠನು ಹಿಂದಿರುಗಿದನು. ರಾಜನಾದರೋ ಆ ಗಿರಿಯಲ್ಲಿ ಅಮರನಂತೆ ವಿಹರಿಸಿದನು.

ततो द्वादश वर्षाणि काननेषु जलेषु च।
रेमे तस्मिन्गिरौ राजा तयैव सह भार्यया ॥01-163-014॥

ರಾಜನು ತನ್ನ ಪತ್ನಿಯೊಡನೆ ಹನ್ನೆರಡು ವರ್ಷಗಳು ಆ ಗಿರಿಯ ಕಾನನಗಳಲ್ಲಿ ಮತ್ತು ಜಲದಲ್ಲಿ ರಮಿಸಿದನು.

तस्य राज्ञः पुरे तस्मिन्समा द्वादश सर्वशः।
न ववर्ष सहस्राक्षो राष्ट्रे चैवास्य सर्वशः ॥01-163-015॥

ಆ ರಾಜನ ಪುರ ಮತ್ತು ರಾಷ್ಟ್ರದ ಎಲ್ಲೆಡೆಯಲ್ಲಿಯೂ ಹನ್ನೆರಡು ವರ್ಷಗಳ ಪರ್ಯಂತ ಸಹಸ್ರಾಕ್ಷನು ಮಳೆಯನ್ನು ಸುರಿಸಲಿಲ್ಲ”

तत्क्षुधार्तैर्निरानन्दैः शवभूतैस्तदा नरैः।
अभवत्प्रेतराजस्य पुरं प्रेतैरिवावृतम् ॥01-163-016॥

ಬರಗಾಲ ಪೀಡಿತರಾಗಿ ಸುಖವನ್ನೇ ಕಾಣದ ನರರು ಶವಗಳಾಗಿ ಪ್ರೇತರಾಜನ ಪುರವನ್ನು ಮುತ್ತುವಂತೆ ಮುತ್ತಿಗೆ ಹಾಕಿದರು.

ततस्तत्तादृशं दृष्ट्वा स एव भगवानृषिः।
अभ्यपद्यत धर्मात्मा वसिष्ठो राजसत्तमम् ॥01-163-017॥

तं च पार्थिवशार्दूलमानयामास तत्पुरम्।
तपत्या सहितं राजन्नुषितं द्वादशीः समाः ॥01-163-018॥

ಆ ದೃಶ್ಯವನ್ನು ನೋಡಿದ ಧರ್ಮಾತ್ಮ ಭಗವಾನೃಷಿ ವಸಿಷ್ಠನು ರಾಜಶರ್ದೂಲನಿದ್ದಲ್ಲಿಗೆ ಹೋಗಿ ಹನ್ನೆರಡು ವರ್ಷಗಳು ರಾಜ್ಯದಿಂದ ಹೊರಗೆ ವಾಸಿಸುತ್ತಿದ್ದ ಆ ಪಾರ್ಥಿವ ಶಾರ್ದೂಲನನ್ನು ತಪತಿಯ ಸಹಿತ ಪುರಕ್ಕೆ ಮರಳಿ ಕರೆತಂದನು.

ततः प्रवृष्टस्तत्रासीद्यथापूर्वं सुरारिहा।
तस्मिन्नृपतिशार्दूले प्रविष्टे नगरं पुनः ॥01-163-019॥

ಆ ನೃಪತಿಶಾರ್ದೂಲನು ಪುನಃ ನಗರವನ್ನು ಪ್ರವೇಶಿಸಿದ ನಂತರ ಸುರಾರಿಹನು ಅಲ್ಲಿ ಮೊದಲಿನಂತೆಯೇ ಮಳೆಯನ್ನು ಸುರಿಸಿದನು.

ततः सराष्ट्रं मुमुदे तत्पुरं परया मुदा।
तेन पार्थिवमुख्येन भावितं भावितात्मना ॥01-163-020॥

ಭಾವಿತಾತ್ಮ ಪಾರ್ಥಿವ ಮುಖ್ಯನ ಮೂಲಕ ಅವರ ರಾಷ್ಟ್ರ ಮತ್ತು ಪುರವು ಪರಮ ಸಂತಸವನ್ನು ಹೊಂದಿತು.

ततो द्वादश वर्षाणि पुनरीजे नराधिपः।
पत्न्या तपत्या सहितो यथा शक्रो मरुत्पतिः ॥01-163-021॥

ಪತ್ನಿ ತಪತಿಯ ಸಹಿತ ನರಾಧಿಪನು ಇನ್ನೂ ಹನ್ನೆರಡು ವರ್ಷಗಳು ಮರುತ್ಪತಿ ಶಕ್ರನ ಹಾಗೆ ಯಜ್ಞಗಳನ್ನು ನೆರವೇರಿಸಿದನು.

एवमासीन्महाभागा तपती नाम पौर्विकी।
तव वैवस्वती पार्थ तापत्यस्त्वं यया मतः ॥01-163-022॥

ಪಾರ್ಥ ! ಈ ರೀತಿ ತಪತಿ ಎಂಬ ಹೆಸರಿನ ಮಹಾಭಾಗೆಯು ನಿನ್ನ ಪೂರ್ವಜಳಾಗಿದ್ದಳು. ಆ ವೈವಸ್ಥತಿಯಿಂದಾಗಿ ನೀನು ತಾಪತ್ಯ ಎಂದು ಕರೆಯಲ್ಪಡುತ್ತೀಯೆ.

तस्यां संजनयामास कुरुं संवरणो नृपः।
तपत्यां तपतां श्रेष्ठ तापत्यस्त्वं ततोऽर्जुन ॥01-163-023॥

ನೃಪ ಸಂವರಣನು ಅವಳಲ್ಲಿ ಕುರುವನ್ನು ಪಡೆದನು. ಅರ್ಜುನ ತಪತಿಯಿಂದಾಗಿ ತಾಪಸಿಗಳಲ್ಲಿ ಶ್ರೇಷ್ಠನಾದ ನೀನು ತಾಪತ್ಯನಾದೆ.””

Leave a Reply