Source: Vyasaonline.com
https://bombay.indology.info/mahabharata/text/UD/MBh03.txt
Source: Sacred Texts
Source: Wisdomlibs
मानसं शमयेत्तस्माज्ज्ञानेनाग्निमिवाम्बुना।
प्रशान्ते मानसे दुःखे शारीरमुपशाम्यति ॥03-002-025॥
ನೀರಿನಿಂದ ಅಗ್ನಿಯನ್ನು ಹೇಗೋ ಹಾಗೆ ಜ್ಞಾನದಿಂದ ಮನಸ್ಸನ್ನು ಆರಿಸಬೇಕು. ಮನಸ್ಸು ಪ್ರಶಾಂತವಾದಾಗ ಶರೀರ ದುಃಖವು ಆರಿಹೋಗುತ್ತದೆ.
Mind should be calmed from knowledge like how fire is cooled by water. A calm mind will extinguish body’s sadness.
मनसो दुःखमूलं तु स्नेह इत्युपलभ्यते।
स्नेहात्तु सज्जते जन्तुर्दुःखयोगमुपैति च ॥03-002-026॥
ಸ್ನೇಹವೇ ಮಾನಸಿಕ ದುಃಖದ ಮೂಲ. ಸ್ನೇಹದಿಂದ ಮೋಹವುಂಟಾಗುತ್ತದೆ ಮತ್ತು ಮೋಹದಿಂದ ಜೀವಿಯು ದುಃಖವನ್ನು ಹೊಂದುತ್ತಾನೆ.
Friendship is the source of mental suffering. With friendship Lust arises and from lust the living being suffers.
स्नेहमूलानि दुःखानि स्नेहजानि भयानि च।
शोकहर्षौ तथायासः सर्वं स्नेहात्प्रवर्तते ॥03-002-027॥
ಸ್ನೇಹವೇ ದುಃಖದ ಮೂಲ ಮತ್ತು ಸ್ನೇಹದಿಂದಲೇ ಭಯವು ಹುಟ್ಟುತ್ತವೆ. ಶೋಕ, ಹರ್ಷ, ಮತ್ತು ಆಯಾಸ ಸರ್ವವೂ ಸ್ನೇಹದಿಂದಲೇ ಹುಟ್ಟುತ್ತವೆ.
Friendship is the source of sorrow and friendship is the source of fear. Grief, joy, and fatigue are all they are born out of friendship.
स्नेहात्करणरागश्च प्रजज्ञे वैषयस्तथा।
अश्रेयस्कावुभावेतौ पूर्वस्तत्र गुरुः स्मृतः ॥03-002-028॥
ಭಾವ-ಅನುರಾಗಗಳೆರಡೂ ಸ್ನೇಹದಿಂದಲೇ ಹುಟ್ಟುತ್ತವೆ. ಇವೆರಡರಲ್ಲಿ ಮೊದಲನೆಯದಾದ ಭಾವವೇ ಹೆಚ್ಚು ಅಶ್ರೇಯಸ್ಕರ ಎಂದು ಹೇಳುತ್ತಾರೆ.
Both feelings and affections are born out of friendship. Of the two, the former is said to be the more unsavory.
कोटराग्निर्यथाशेषं समूलं पादपं दहेत्।
धर्मार्थिनं तथाल्पोऽपि रागदोषो विनाशयेत् ॥03-002-029॥
ಪೊಟರಿನಲ್ಲಿ ಹತ್ತಿದ ಬೆಂಕಿಯು ಹೇಗೆ ಸಮೂಲವಾಗಿ ಆ ಮರವನ್ನು ಸುಟ್ಟುಬಿಡುತ್ತದೆಯೋ ಹಾಗೆ ಅಲ್ಪ ರಾಗದೋಷವೂ ಧರ್ಮಾರ್ಥಿಯನ್ನು ನಾಶಮಾಡುತ್ತದೆ.
How a firewood burns itself fully from a small start as it heats a pot, so a small fault/blot will destroy a person who is religiously doing his duties
विप्रयोगे न तु त्यागी दोषदर्शी समागमात्।
विरागं भजते जन्तुर्निर्वैरो निष्परिग्रहः ॥03-002-030॥
ಕೇವಲ ಪ್ರಾಪಂಚಿಕ ವಿಷಯಗಳನ್ನು ಅನುಭವಿಸುವುದಿಲ್ಲವೆಂದ ಮಾತ್ರಕ್ಕೆ ಅವನು ತ್ಯಾಗಿಯಾಗುವುದಿಲ್ಲ! ಪ್ರಾಪಂಚಿಕ ವಿಷಯಗಳಲ್ಲಿ ಮುಳುಗಿ ಅದರಿಂದಾಗುವ ದೋಷಗಳನ್ನು ಸಂಪೂರ್ಣವಾಗಿ ಅರಿತು ಅದರಿಂದ ನಿವೃತ್ತಿಯನ್ನು ಹೊಂದುವವನು ತ್ಯಾಗಿ ಎನಿಸಿಕೊಳ್ಳುತ್ತಾನೆ. ಅಂಥವನು ವಿರಾಗಿಯೂ, ಎಲ್ಲರ ಪ್ರೀತಿಪಾತ್ರನೂ, ಯಾರೊಂದಿಗೆ ವೈರತ್ವವಿಲ್ಲದವನೂ, ಸ್ವತಂತ್ರನೂ ಆಗಿರುತ್ತಾನೆ.
By not indulging in worldly matters he can’t become renouncer. (Same as Bhagavad Gita Chapter 3 Verse 4) By drowning in worldy matters and understanding and facing the incorrectness/errors/imperfections in worldly affairs and one who tackles those and comes out of it and helps others also to come out of it eventually corrects where possible will be called as renouncer. Such a person will be not disappointed, will not disappoint anyone, loved by all, free from enmity and independent.
तस्मात्स्नेहं स्वपक्षेभ्यो मित्रेभ्यो धनसंचयात्।
स्वशरीरसमुत्थं तु ज्ञानेन विनिवर्तयेत् ॥03-002-031॥
ಆದ್ದರಿಂದಲೇ ಸ್ವಶರೀರದಿಂದ ಉದ್ಭವವಾದ ತನ್ನವರು, ಮಿತ್ರರು ಮತ್ತು ಧನಸಂಚಯದ ಮೇಲಿರುವ ಸ್ನೇಹವನ್ನು ಜ್ಞಾನದಿಂದ ಕಡಿಮೆಮಾಡಿಕೊಳ್ಳಬೇಕು.
By gleaning more knowledge we have to reduce the feelings on Friends, relatives and with business partners. (The interaction will be at knowledge exchange level then.)
ज्ञानान्वितेषु मुख्येषु शास्त्रज्ञेषु कृतात्मसु।
न तेषु सज्जते स्नेहः पद्मपत्रेष्विवोदकम् ॥03-002-032॥
ಪದ್ಮ ಪತ್ರವು ನೀರಿನಿಂದ ಹೇಗೆ ಒದ್ದೆಯಾಗುವುದಿಲ್ಲವೋ ಹಾಗೆ ಜ್ಞಾನಾನ್ವಿತರನ್ನು, ಮುಖ್ಯರನ್ನು ಶಾಸ್ತ್ರಜ್ಞರನ್ನು ಮತ್ತು ಕೃತಾತ್ಮರನ್ನು ಈ ಯಾವ ಸ್ನೇಹಗಳೂ ಹಿಡಿಯುವುದಿಲ್ಲ”.
That’s the reason friendships are not binding for the learned, the chiefs (Officials in Office), the Scholars and the artisans (unless above advice is not followed) just as the Lotus is not wetted by water.
