Background King Yudhishthira has conversation with Sage Saunaka once he reaches the forest. He requests the Brahmins to go back to town. Sage Saunaka advises not to be possessive etc. King Yudhishthira replies back saying he is just doing his duty & what a married man/head should do etc. Sage Saunaka says that the goal alone is not to be focused but also the means towards the goal. For that he advises (a) To keep mind calm (b) To develop required skills…something like that. He advises you have to keep up your meta value (the personality of person, what we call) while you work towards it.
The below is Kannada Translation as picked from Vyasaonline.com. It can be also viewed in English in 2 places
Source from Wisdomlib.org
Source from sacredtexts.com
| Verse | translation | |
| वैशंपायन उवाच। प्रभातायां तु शर्वर्यां तेषामक्लिष्टकर्मणाम्। वनं यियासतां विप्रास्तस्थुर्भिक्षाभुजोऽग्रतः। तानुवाच ततो राजा कुन्तीपुत्रो युधिष्ठिरः ॥03-002-001॥ | ವೈಶಂಪಾಯನನು ಹೇಳಿದನು: “ನಕ್ಷತ್ರಗಳಿಂದೊಡಗೂಡಿದ ರಾತ್ರಿ ಕಳೆದು ಪ್ರಭಾತವಾದಾಗ ಭಿಕ್ಷವನ್ನೇ ಉಂಡು ಜೀವಿಸುವ ವಿಪ್ರರು ವನಕ್ಕೆ ಹೊರಡಲು ತಯಾರಾಗಿದ್ದ ಆ ಅಕ್ಷಿಷ್ಟಕರ್ಮಿಗಳ ಎದಿರು ನಿಂತರು. ಆಗ ಕುಂತೀಪುತ್ರ ರಾಜ ಯುಧಿಷ್ಠಿರನು ಅವರನ್ನುದ್ದೇಶಿಸಿ ಹೇಳಿದನು | |
| वयं हि हृतसर्वस्वा हृतराज्या हृतश्रियः। फलमूलामिषाहारा वनं यास्याम दुःखिताः ॥03-002-002॥ | “ರಾಜ್ಯ, ಸಂಪತ್ತು ಮತ್ತು ಎಲ್ಲವನ್ನೂ ಕಳೆದುಕೊಂಡು ದುಃಖತರಾದ ನಾವು ವನಕ್ಕೆ ತೆರಳಿ ಫಲಮೂಲಗಳನ್ನು ಸೇವಿಸಿ ಜೀವಿಸುತ್ತೇವೆ. | |
| वनं च दोषबहुलं बहुव्यालसरीसृपम्। परिक्लेशश्च वो मन्ये ध्रुवं तत्र भविष्यति ॥03-002-003॥ | ವನವು ಹಲವಾರು ಆಪತ್ತುಗಳು, ಹಲವಾರು ಕ್ರೂರಪ್ರಾಣಿಗಳು ಮತ್ತು ಸರ್ಪಗಳಿಂದ ತುಂಬಿದೆ. ಅಲ್ಲಿ ನಿಮಗೆ ನಿಜವಾಗಿಯೂ ಅತ್ಯಂತ ಕಷ್ಟಗಳಾಗುತ್ತವೆ ಎನ್ನುವುದು ನನ್ನ ಯೋಚನೆ. | |
| ब्राह्मणानां परिक्लेशो दैवतान्यपि सादयेत्। किं पुनर्मामितो विप्रा निवर्तध्वं यथेष्टतः ॥03-002-004॥ | ಬ್ರಾಹ್ಮಣರ ಪರಿಕ್ಷೇಷವು ದೇವತೆಗಳನ್ನೂ ಹಿಡಿಯುತ್ತದೆ. ಇನ್ನು ನನ್ನಂಥವರೇನು? ವಿಪ್ರರೇ, ನಿಮಗೆ ಇಷ್ಟವಾದರೆ ಹಿಂದಿರುಗಿರಿ.” | |
| ब्राह्मणा ऊचुः। गतिर्या भवतां राजंस्तां वयं गन्तुमुद्यताः। नार्हथास्मान्परित्यक्तुं भक्तान्सद्धर्मदर्शिनः ॥03-002-005॥ | ಬ್ರಾಹ್ಮಣರು ಹೇಳಿದರು: “ರಾಜ ! ನೀವು ಹೋಗುತ್ತಿರುವಲ್ಲಿಗೇ ನಾವೂ ಹೋಗಲು ತಯಾರಿದ್ದೇವೆ. ನಿನ್ನ ಭಕ್ತರಾದ, ನಿನ್ನಲ್ಲಿ ಧರ್ಮವನ್ನು ಕಾಣುವ ನಮ್ಮನ್ನು ಪರಿತ್ಯಜಿಸಬೇಡ. | |
| अनुकम्पां हि भक्तेषु दैवतान्यपि कुर्वते। विशेषतो ब्राह्मणेषु सदाचारावलम्बिषु ॥03-002-006॥ | ಭಕ್ತರ ಮೇಲೆ ಅನುಕಂಪವನ್ನು ದೇವತೆಗಳೂ ಮಾಡುತ್ತಾರೆ, ವಿಶೇಷವಾಗಿ ಸದಾಚಾರವನ್ನೇ ಅವಲಂಬಿಸುರುವ ಬ್ರಾಹ್ಮಣರ ಮೇಲೆ.” | |
| युधिष्ठिर उवाच। ममापि परमा भक्तिर्ब्राह्मणेषु सदा द्विजाः। सहायविपरिभ्रंशस्त्वयं सादयतीव माम् ॥03-002-007॥ | ಯುಧಿಷ್ಠಿರನು ಹೇಳಿದನು: “ದ್ವಿಜರೇ! ನನಗೂ ಕೂಡ ಬ್ರಾಹ್ಮಣರಲ್ಲಿ ಪರಮ ಭಕ್ತಿಯಿದೆ. ಆದರೆ, ನಮ್ಮ ಒಟ್ಟಿಗೆ ಬರುವ ನಿಮ್ಮ ಕಷ್ಟಗಳನ್ನು ನನಗೆ ಸಹಿಸಲಾಗುತ್ತಿಲ್ಲ. | |
| आहरेयुर्हि मे येऽपि फलमूलमृगांस्तथा। त इमे शोकजैर्दुःखैर्भ्रातरो मे विमोहिताः ॥03-002-008॥ द्रौपद्या विप्रकर्षेण राज्यापहरणेन च। दुःखान्वितानिमान्क्लेशैर्नाहं योक्तुमिहोत्सहे ॥03-002-009॥ | ಫಲ, ಮೂಲ, ಮೃಗ ಮುಂತಾದವುಗಳನ್ನೇ ಸೇವಿಸಲಿರುವ ನನ್ನ ಈ ತಮ್ಮಂದಿರು ದ್ರೌಪದಿಗೆ ಮಾಡಲಾದ ಅಪಮಾನ ಮತ್ತು ರಾಜ್ಯಾಪಹರಣದ ಶೋಕದಿಂದ ವಿಮೋಹಿತರಾಗಿದ್ದಾರೆ. ಇನ್ನೂ ಹೆಚ್ಚಿನ ಕಷ್ಟಗಳನ್ನು ಅವರಿಗೆ ಕೊಡಲು ಸಾದ್ಯವಿಲ್ಲ. ಅವರು ಸಾಕಷ್ಟು ದುಃಖತರಾಗಿದ್ದಾರೆ? | |
| ब्राह्मणा ऊचुः। अस्मत्पोषणजा चिन्ता मा भूत्ते हृदि पार्थिव। स्वयमाहृत्य वन्यानि अनुयास्यामहे वयम् ॥03-002-010॥ | ಬ್ರಾಹ್ಮಣರು ಹೇಳಿದರು: “ಪಾರ್ಥಿವ ! ನಮ್ಮ ಆಹಾರದ ಕುರಿತು ನಿನ್ನ ಹೃದಯದಲ್ಲಿ ಚಿಂತೆ ಬೇಡ. ನಮ್ಮ ಅಹಾರವನ್ನು ವನದಿಂದ ನಾವೇ ಹುಡುಕಿ ತಂದುಕೊಳ್ಳುತ್ತೇವೆ. | |
| अनुध्यानेन जप्येन विधास्यामः शिवं तव। कथाभिश्चानुकूलाभिः सह रंस्यामहे वने ॥03-002-011॥ | ಅನುಧ್ಯಾನ, ತಪಗಳಿಂದ ನಾವು ನಿನಗೆ ಶುಭವನ್ನು ತರುತ್ತೇವೆ. ಅನುಕೂಲಕರ ಕಥೆ ಮುಂತಾದವುಗಳ ಮೂಲಕ ವನದಲ್ಲಿ ನಾವು ನಿಮ್ಮನ್ನು ರಮಿಸುತ್ತೇವೆ.” | |
| युधिष्ठिर उवाच। एवमेतन्न संदेहो रमेयं ब्राह्मणैः सह। न्यूनभावात्तु पश्यामि प्रत्यादेशमिवात्मनः ॥03-002-012॥ | ಯುಧಿಷ್ಠಿರನು ಹೇಳಿದನು: “ಹಾಗೆಯೇ ಆಗಲಿ! ಸಂದೇಹವಿಲ್ಲ. ನಾನೂ ಕೂಡ ಬ್ರಾಹ್ಮಣರ ಸಂಘದಲ್ಲಿ ರಮಿಸುತ್ತೇನೆ. ನಾನು ಇಂಥಹ ಸ್ಥ ತಿಗೆ ಇಳಿದಿದ್ದೇನೆಂದು ನನ್ನಲ್ಲಿ ನ್ಯೂನ ಭಾವವನ್ನು ಕಾಣುತ್ತಿದ್ದೇನೆ. | |
| कथं द्रक्ष्यामि वः सर्वान्स्वयमाहृतभोजनान्। मद्भक्त्या क्लिश्यतोऽनर्हान्धिक्पापान्धृतराष्ट्रजान् ॥03-002-013॥ | ನನ್ನ ಮೇಲಿನ ಭಕ್ತಿಯಿಂದ, ಕಷ್ಟಗಳಿಗೆ ಅನರ್ಹರಾದ ನೀವೆಲ್ಲರೂ ಸ್ವಯಂ ಅಹಾರವನ್ನು ತರುವುದನ್ನು ನಾನು ಹೇಗೆ ನೋಡಲಿ? ಪಾಪಿ ಧಾರ್ತರಾಷ್ಟ್ರರಿಗೆ ಧಿಕ್ಕಾರ!” | |
| वैशंपायन उवाच। इत्युक्त्वा स नृपः शोचन्निषसाद महीतले। तमध्यात्मरतिर्विद्वाञ्शौनको नाम वै द्विजः। योगे सांख्ये च कुशलो राजानमिदमब्रवीत् ॥03-002-014॥ | ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ನೃಪನು ಚಿಂತಿಸುತ್ತಾ ನೆಲದಮೇಲೆಯೇ ಕುಳಿತುಕೊಂಡನು. ಅವರ ಮಧ್ಯದಿಂದ ಶೌನಕ ಎಂಬ ಹೆಸರಿನ ಒಬ್ಬ ಆತ್ಮರತಿ, ವಿದ್ವಾನ್, ಯೋಗ-ಸಾಂಖ್ಯಗಳಲ್ಲಿ ಕುಶಲ ದ್ವಿಜನು ರಾಜನಿಗೆ ಹೇಳಿದನು | |
| शोकस्थानसहस्राणि भयस्थानशतानि च। दिवसे दिवसे मूढमाविशन्ति न पण्डितम् ॥03-002-015॥ | “ಸಾವಿರಗಟ್ಟಲೆ ಶೋಕಗಳು ಮತ್ತು ನೂರಾರು ಭಯಗಳು ದಿನ ದಿನವೂ ಮೂಢರನ್ನು ಕಾಡುತ್ತವೆ. ಪಂಡಿತರನ್ನಲ್ಲ. | |
| न हि ज्ञानविरुद्धेषु बहुदोषेषु कर्मसु। श्रेयोघातिषु सज्जन्ते बुद्धिमन्तो भवद्विधाः ॥03-002-016॥ | ನಿನ್ನಂಥಹ ಬುದ್ಧಿವಂತರು ಜ್ಞಾನಕ್ಕೆ ವಿರುದ್ಧವಾದ ಅನೇಕ ದೋಷಗಳನ್ನುಳ್ಳ, ಶ್ರೇಯಸ್ಸನ್ನು ನಾಶಪಡಿಸುವ ಕರ್ಮಗಳನ್ನು ಮಾಡುವುದಿಲ್ಲ. | |
| अष्टाङ्गां बुद्धिमाहुर्यां सर्वाश्रेयोविघातिनीम्। श्रुतिस्मृतिसमायुक्तां सा राजंस्त्वय्यवस्थिता ॥03-002-017॥ | ರಾಜ! ನಿನ್ನಲ್ಲಿ ಅಷ್ಟಾಂಗಗಳನ್ನೊಡಗೂಡಿದ, ಸರ್ವ ಆಶ್ರೇಯಗಳನ್ನೂ ನಾಶಪಡಿಸುವ, ಶೃತಿಸ್ಮೃತಿಸಮಾಯುಕ್ತವೆನಿಸಿಕೊಂಡ ಬುದ್ಧಿಯು ಇದೆ. | |
| अर्थकृच्छ्रेषु दुर्गेषु व्यापत्सु स्वजनस्य च। शारीरमानसैर्दुःखैर्न सीदन्ति भवद्विधाः ॥03-002-018॥ | ನಿನ್ನಂಥವರು ಕಷ್ಟ ಕಾರ್ಪಣ್ಯಗಳಿಂದ ಮತ್ತು ಸ್ವಜನರ ಕಷ್ಟಗಳಿಂದ ದುಃಖಪಟ್ಟು ಶರೀರ ಮತ್ತು ಮನಸ್ಸಿನಲ್ಲಿ ಕುಸಿಯುವುದಿಲ್ಲ. | |
| श्रूयतां चाभिधास्यामि जनकेन यथा पुरा। आत्मव्यवस्थानकरा गीताः श्लोका महात्मना ॥03-002-019॥ | ಹಿಂದೆ ಮಹಾತ್ಮ ಜನಕನು ನೀಡಿದ ಆತ್ಮವನ್ನು ಸ್ಥಿರಗೊಳಿಸುವಂತಹ ಶ್ಲೋಕಗಳ ಗೀತೆಯನ್ನು ಹೇಳುತ್ತೇನೆ. ಕೇಳು. | |
| मनोदेहसमुत्थाभ्यां दुःखाभ्यामर्दितं जगत्। तयोर्व्याससमासाभ्यां शमोपायमिमं शृणु ॥03-002-020॥ | ಈ ಜಗತ್ತು ಮನಸ್ಸು ಮತ್ತು ದೇಹಗಳಲ್ಲಿ ಉದ್ಭವಿಸುವ ಎರಡು ದುಃಖಗಳಿಂದ ಕಾಡಿಸಲ್ಪಡುತ್ತಿದೆ. ಇವುಗಳನ್ನು ಪ್ರತ್ಯೇಕವಾಗಿ ಮತ್ತು ಒಟ್ಟಿಗೇ ಹೇಗೆ ಕಡಿಮೆಮಾಡಿಕೊಳ್ಳಬಹುದು ಎನ್ನುವುದನ್ನು ಕೇಳು. | |
| व्याधेरनिष्टसंस्पर्शाच्छ्रमादिष्टविवर्जनात्। दुःखं चतुर्भिः शारीरं कारणैः संप्रवर्तते ॥03-002-021॥ | ವ್ಯಾಧಿ, ಶ್ರಮ, ಇಷ್ಟವಿಲ್ಲವನ್ನು ಹೊಂದುವುದು’ ಮತ್ತು ಇಷ್ಟವಿದ್ದವುಗಳನ್ನು ಕಳೆದುಕೊಳ್ಳುವುದು? ಇವೇ ನಾಲ್ಕು ಶರೀರ ಜನ್ಯ ದುಃಖಕ್ಕೆ ಕಾರಣಗಳು. | |
| तदाशुप्रतिकाराच्च सततं चाविचिन्तनात्। आधिव्याधिप्रशमनं क्रियायोगद्वयेन तु ॥03-002-022॥ | ಈ ಆದಿವ್ಯಾಧಿಗಳೆರಡನ್ನೂ ಎರಡು ಕ್ರಿಯಾಯೋಗಗಳಿಂದ ನಿವಾರಿಸಬಹುದು: ಅವುಗಳಿಗೆ ಪ್ರತಿಕಾರಗಳನ್ನು ಮಾಡುವುದು ಮತ್ತು ಸತತವಾಗಿ ಅವುಗಳ ಕುರಿತು ಚಿಂತಿಸದೇ ಇರುವುದು. | |
| मतिमन्तो ह्यतो वैद्याः शमं प्रागेव कुर्वते। मानसस्य प्रियाख्यानैः संभोगोपनयैर्नृणाम् ॥03-002-023॥ मानसेन हि दुःखेन शरीरमुपतप्यते। अयःपिण्डेन तप्तेन कुम्भसंस्थमिवोदकम् ॥03-002-024॥ | ಆದುದರಿಂದ ಬುದ್ಧಿವಂತ ವೈದ್ಯರು ಮೊದಲು ಪ್ರೀತಿಕರ ಮಾತುಗಳಿಂದಲೂ, ಭೋಗವಸ್ತುಗಳನ್ನು ಕೊಡುವುದರ ಮೂಲಕವೂ ಮನುಷ್ಯರ ದುಃಖವನ್ನು ಉಪಶಮನ ಮಾಡಲು ಪ್ರಯತ್ನಿಸುತ್ತಾರೆ. ಕಾದ ಕಬ್ಬಿಣದ ಗುಂಡನ್ನು ನೀರಿನ ಕುಂಡದಲ್ಲಿ ಅದ್ದಿದರೆ ನೀರೂ ಹೇಗೆ ಬಿಸಿಯಾಗಿ ಕುದಿಯುತ್ತದೆಯೋ ಹಾಗೆ ಮಾನಸಿಕ ದುಃಖದಿಂದ ಶರೀರವೂ ಪರಿತಪಿಸುತ್ತದೆ. | |
| मानसं शमयेत्तस्माज्ज्ञानेनाग्निमिवाम्बुना। प्रशान्ते मानसे दुःखे शारीरमुपशाम्यति ॥03-002-025॥ | ನೀರಿನಿಂದ ಅಗ್ನಿಯನ್ನು ಹೇಗೋ ಹಾಗೆ ಜ್ಞಾನದಿಂದ ಮನಸ್ಸನ್ನು ಆರಿಸಬೇಕು. ಮನಸ್ಸು ಪ್ರಶಾಂತವಾದಾಗ ಶರೀರ ದುಃಖವು ಆರಿಹೋಗುತ್ತದೆ. | |
| मनसो दुःखमूलं तु स्नेह इत्युपलभ्यते। स्नेहात्तु सज्जते जन्तुर्दुःखयोगमुपैति च ॥03-002-026॥ | ಸ್ನೇಹವೇ ಮಾನಸಿಕ ದುಃಖದ ಮೂಲ. ಸ್ನೇಹದಿಂದ ಮೋಹವುಂಟಾಗುತ್ತದೆ ಮತ್ತು ಮೋಹದಿಂದ ಜೀವಿಯು ದುಃಖವನ್ನು ಹೊಂದುತ್ತಾನೆ. | |
| स्नेहमूलानि दुःखानि स्नेहजानि भयानि च। शोकहर्षौ तथायासः सर्वं स्नेहात्प्रवर्तते ॥03-002-027॥ | ಸ್ನೇಹವೇ ದುಃಖದ ಮೂಲ ಮತ್ತು ಸ್ನೇಹದಿಂದಲೇ ಭಯವು ಹುಟ್ಟುತ್ತವೆ. ಶೋಕ, ಹರ್ಷ, ಮತ್ತು ಆಯಾಸ ಸರ್ವವೂ ಸ್ನೇಹದಿಂದಲೇ ಹುಟ್ಟುತ್ತವೆ. | |
| स्नेहात्करणरागश्च प्रजज्ञे वैषयस्तथा। अश्रेयस्कावुभावेतौ पूर्वस्तत्र गुरुः स्मृतः ॥03-002-028॥ | ಭಾವ-ಅನುರಾಗಗಳೆರಡೂ ಸ್ನೇಹದಿಂದಲೇ ಹುಟ್ಟುತ್ತವೆ. ಇವೆರಡರಲ್ಲಿ ಮೊದಲನೆಯದಾದ ಭಾವವೇ ಹೆಚ್ಚು ಅಶ್ರೇಯಸ್ಕರ ಎಂದು ಹೇಳುತ್ತಾರೆ. | |
| कोटराग्निर्यथाशेषं समूलं पादपं दहेत्। धर्मार्थिनं तथाल्पोऽपि रागदोषो विनाशयेत् ॥03-002-029॥ | ಪೊಟರಿನಲ್ಲಿ ಹತ್ತಿದ ಬೆಂಕಿಯು ಹೇಗೆ ಸಮೂಲವಾಗಿ ಆ ಮರವನ್ನು ಸುಟ್ಟುಬಿಡುತ್ತದೆಯೋ ಹಾಗೆ ಅಲ್ಪ ರಾಗದೋಷವೂ ಧರ್ಮಾರ್ಥಿಯನ್ನು ನಾಶಮಾಡುತ್ತದೆ. | |
| विप्रयोगे न तु त्यागी दोषदर्शी समागमात्। विरागं भजते जन्तुर्निर्वैरो निष्परिग्रहः ॥03-002-030॥ | ಕೇವಲ ಪ್ರಾಪಂಚಿಕ ವಿಷಯಗಳನ್ನು ಅನುಭವಿಸುವುದಿಲ್ಲವೆಂದ ಮಾತ್ರಕ್ಕೆ ಅವನು ತ್ಯಾಗಿಯಾಗುವುದಿಲ್ಲ! ಪ್ರಾಪಂಚಿಕ ವಿಷಯಗಳಲ್ಲಿ ಮುಳುಗಿ ಅದರಿಂದಾಗುವ ದೋಷಗಳನ್ನು ಸಂಪೂರ್ಣವಾಗಿ ಅರಿತು ಅದರಿಂದ ನಿವೃತ್ತಿಯನ್ನು ಹೊಂದುವವನು ತ್ಯಾಗಿ ಎನಿಸಿಕೊಳ್ಳುತ್ತಾನೆ. ಅಂಥವನು ವಿರಾಗಿಯೂ, ಎಲ್ಲರ ಪ್ರೀತಿಪಾತ್ರನೂ, ಯಾರೊಂದಿಗೆ ವೈರತ್ವವಿಲ್ಲದವನೂ, ಸ್ವತಂತ್ರನೂ ಆಗಿರುತ್ತಾನೆ. | |
| तस्मात्स्नेहं स्वपक्षेभ्यो मित्रेभ्यो धनसंचयात्। स्वशरीरसमुत्थं तु ज्ञानेन विनिवर्तयेत् ॥03-002-031॥ | ಆದ್ದರಿಂದಲೇ ಸ್ವಶರೀರದಿಂದ ಉದ್ಭವವಾದ ತನ್ನವರು, ಮಿತ್ರರು ಮತ್ತು ಧನಸಂಚಯದ ಮೇಲಿರುವ ಸ್ನೇಹವನ್ನು ಜ್ಞಾನದಿಂದ ಕಡಿಮೆಮಾಡಿಕೊಳ್ಳಬೇಕು. | |
| ज्ञानान्वितेषु मुख्येषु शास्त्रज्ञेषु कृतात्मसु। न तेषु सज्जते स्नेहः पद्मपत्रेष्विवोदकम् ॥03-002-032॥ | ಪದ್ಮ ಪತ್ರವು ನೀರಿನಿಂದ ಹೇಗೆ ಒದ್ದೆಯಾಗುವುದಿಲ್ಲವೋ ಹಾಗೆ ಜ್ಞಾನಾನ್ವಿತರನ್ನು, ಮುಖ್ಯರನ್ನು ಶಾಸ್ತ್ರಜ್ಞರನ್ನು ಮತ್ತು ಕೃತಾತ್ಮರನ್ನು ಈ ಯಾವ ಸ್ನೇಹಗಳೂ ಹಿಡಿಯುವುದಿಲ್ಲ”. | |
| रागाभिभूतः पुरुषः कामेन परिकृष्यते। इच्छा संजायते तस्य ततस्तृष्णा प्रवर्तते ॥03-002-033॥ | ರಾಗಕ್ಕೆ ಅಧೀನನಾದ ಪುರುಷನನ್ನು ವಿಷಯ ವಸ್ತುಗಳು ಎಳೆಯುತ್ತವೆ. ಅವುಗಳ ಮೇಲೆ ಆಸೆಯುಂಟಾಗುತ್ತದೆ. ಆ ಅಸೆಗಳು ಮುಂದೆ ತೃಷ್ಣೆಯಾಗಿ ಪಂವರ್ತನೆಗೊಳ್ಳುತ್ತವೆ. | |
| तृष्णा हि सर्वपापिष्ठा नित्योद्वेगकरी नृणाम्। अधर्मबहुला चैव घोरा पापानुबन्धिनी ॥03-002-034॥ | ಈ ತೃಷ್ಣೆಯೇ ಸರ್ವ ಪಾಪಿಷ್ಟ. ಇದೇ ನಿತ್ಯವೂ ಮನುಷ್ಯನನ್ನು ಅಧರ್ಮ ಮಾರ್ಗಕ್ಕೆ ಪ್ರಚೋದಿಸುತ್ತಿರುತ್ತದೆ ಮತ್ತು ಘೋರ ಪಾಪಗಳಿಗೆ ಅವನನ್ನು ಬಂಧಿಸುತ್ತದೆ. | |
| या दुस्त्यजा दुर्मतिभिर्या न जीर्यति जीर्यतः। योऽसौ प्राणान्तिको रोगस्तां तृष्णां त्यजतः सुखम् ॥03-002-035॥ | ಇದನ್ನು ತ್ಯಜಿಸುವುದು ದುರ್ವತಿಗಳಿಗೆ ಬಹಳ ಕಷ್ಟ. ದೇಹ ಜೀರ್ಣವಾದರೂ ಇದು ಜೀರ್ಣವಾಗುವುದಿಲ್ಲ. ಇದು ಪ್ರಾಣವನ್ನೇ ಅಂತ್ಯಮಾಡುವ ರೋಗ. ತೃಷ್ಟೆಯನ್ನು ತ್ಯಜಿಸುವುದೇ ಸುಖ”. | |
| अनाद्यन्ता तु सा तृष्णा अन्तर्देहगता नृणाम्। विनाशयति संभूता अयोनिज इवानलः ॥03-002-036॥ | ಈ ತೃಷ್ಣೆಗೆ ಮೊದಲಿಲ್ಲ ಕೊನೆಯಿಲ್ಲ. ಮನುಷ್ಯನ ಒಳದೇಹವನ್ನು ಸೇರಿ ಅಯೋನಿಜ ಅಗ್ನಿಯಂತೆ ಹುಟ್ಟಿ ನಾಶಪಡಿಸುತ್ತದೆ. | |
| यथैधः स्वसमुत्थेन वह्निना नाशमृच्छति। तथाकृतात्मा लोभेन सहजेन विनश्यति ॥03-002-037॥ | ಕಟ್ಟಿಗೆಯು ಹೇಗೆ ತನ್ನಿಂದ ಹುಟ್ಟಿದ ಬೆಂಕಿಯಿಂದಲೇ ನಾಶಹೊಂದುತ್ತದೆಯೋ ಹಾಗೆ ತಾನೇ ಹುಟ್ಟಿಸಿಕೊಂಡ ಲೋಭದಿಂದ ಮನುಷ್ಯನು ಸಹಜವಾಗಿ ನಾಶಹೊಂದುತ್ತಾನೆ. | |
| राजतः सलिलादग्नेश्चोरतः स्वजनादपि। भयमर्थवतां नित्यं मृत्योः प्राणभृतामिव ॥03-002-038॥ | ಮರ್ತ್ಯರು ನಿತ್ಯವೂ ಹೇಗೆ ಮೃತ್ಯುವಿನ ಭಯದಲ್ಲಿರುತ್ತಾರೆಯೋ ಹಾಗೆ ಸಂಪತ್ತುಳ್ಳವನು ಸದಾ ರಾಜ, ನೀರು, ಅಗ್ಕಿ ಕಳ್ಳರು ಮತ್ತು ಸ್ವಜನರ ಭಯದಿಂದ ಇರುತ್ತಾನೆ. | |
| यथा ह्यामिषमाकाशे पक्षिभिः श्वापदैर्भुवि। भक्ष्यते सलिले मत्स्यैस्तथा सर्वेण वित्तवान् ॥03-002-039॥ | ಮಾಂಸದ ತುಂಡನ್ನು ಆಕಾಶದಲ್ಲೆಸೆದರೆ ಪಕ್ಷಿಗಳು, ಭೂಮಿಯಲಿಟ್ಟರೆ ಪಶುಗಳು, ನೀರಿನಲ್ಲಿಟ್ಟರೆ ಮೀನುಗಳು ಹೇಗೆ ತಿಂದುಬಿಡುವವೋ ಹಾಗೆ ಹಣವಿದ್ದವನಿಗೆ ಎಲ್ಲದರಿಂದಲೂ ಭಯ. | |
| अर्थ एव हि केषांचिदनर्थो भविता नृणाम्। अर्थश्रेयसि चासक्तो न श्रेयो विन्दते नरः। तस्मादर्थागमाः सर्वे मनोमोहविवर्धनाः ॥03-002-040॥ कार्पण्यं दर्पमानौ च भयमुद्वेग एव च। अर्थजानि विदुः प्राज्ञा दुःखान्येतानि देहिनाम् ॥03-002-041॥ | ಕೆಲವು ಮನುಷ್ಯರಿಗೆ ಅರ್ಥವೇ ಅನರ್ಥವಾಗುತ್ತದೆ. ಐಶ್ವರ್ಯ ಮತ್ತು ಕೀರ್ತಿಗಳಲ್ಲಿಯೇ ಆಸಕ್ತನಾದ ಮನುಷ್ಯನಿಗೆ ಶ್ರೇಯಸ್ಸು ದೊರೆಯಲಾರದು. ಆದುದರಿಂದ ಹಣವು ಬರುತ್ತಿದ್ದಂತೆ ಮನಸ್ಸಿನ ಮೋಹವು ಹೆಚ್ಚಾಗುತ್ತದೆ, ಕಾರ್ಪಣ್ಯ ದರ್ಪ, ಮತ್ತು ಭಯ ಉದ್ವೇಗಗಳೂ ಹೆಚ್ಚಾಗುತ್ತವೆ. | |
| अर्थस्योपार्जने दुःखं पालने च क्षये तथा। नाशे दुःखं व्यये दुःखं घ्नन्ति चैवार्थकारणात् ॥03-002-042॥ | ಅರ್ಥಸಂಚಯದಿಂದ ಮನುಷ್ಯರಿಗೆ ಹುಟ್ಟುವ ದುಃಖಗಳನ್ನು ಪ್ರಾಜ್ಞರು ಅರಿತುಕೊಂಡಿದ್ದಾ ರೆ. ಹಣವನ್ನು ಗಳಿಸುವಾಗ ದುಃಖ, ಅದನ್ನು ಇಟ್ಟುಕೊಳ್ಳುವುದರಲ್ಲಿ ಮತ್ತು ಖರ್ಚುಮಾಡುವುದರಲ್ಲಿ ಕಷ್ಟ, ನಾಶವಾದರೆ ದುಃಖ, ವ್ಯಯವಾದರೆ ದುಃಖ. ಕೆಲವರು ಹಣಕ್ಕಾಗಿ ಕೊಲೆಯನ್ನೂ ಮಾಡುತ್ತಾರೆ | |
| अर्था दुःखं परित्यक्तुं पालिताश्चापि तेऽसुखाः। दुःखेन चाधिगम्यन्ते तेषां नाशं न चिन्तयेत् ॥03-002-043॥ असंतोषपरा मूढाः संतोषं यान्ति पण्डिताः। अन्तो नास्ति पिपासायाः संतोषः परमं सुखम् ॥03-002-044॥ | ಸಂಪತ್ತನ್ನು ತ್ಯಜಿಸುವುದು ಕಷ್ಟ. ಪಾಲಿಸುವುದು ಅದಕ್ಕಿಂತಲೂ ಕಷ್ಟ. ಗಳಿಸುವುದೇ ಅತಿ ಕಷ್ಟವಾದ ಸಂಪತ್ತು ನಾಶವಾದರೆ ಚಿಂತಿಸಬಾರದು. ಮೂಢರು ಅಸಂತೋಷಪರರು. ಪಂಡಿತರು ಸಂತೋಷವನ್ನು ಹೊಂದುತ್ತಾರೆ. ಬಾಯಾರಿಕೆಗೆ ಕೊನೆಯೇ ಇಲ್ಲ. ಸಂತೋಷವೇ ಪರಮ ಸುಖ. | |
| तस्मात्संतोषमेवेह धनं पश्यन्ति पण्डिताः। अनित्यं यौवनं रूपं जीवितं द्रव्यसंचयः। ऐश्वर्यं प्रियसंवासो गृध्येदेषु न पण्डितः ॥03-002-045॥ | ಆದುದರಿಂದ ಸಂತೋಷವೇ ಪರಮ ಧನವೆಂದು ಪಂಡಿತರು ಕಂಡುಕೊಂಡಿದ್ದಾರೆ. ಯೌವನ, ರೂಪ, ಜೀವಿತ, ದ್ರವ್ಯಸಂಚಯ, ಐಶ್ವರ್ಯ, ಪ್ರಿಯರ ಸಹವಾಸ ಎಲ್ಲವೂ ಅನಿತ್ಯ. ಪಂಡಿತರು ಇವುಗಳ ಮೇಲೆ ಆಸೆಪಡುವುದಿಲ್ಲ. | |
| त्यजेत संचयांस्तस्मात्तज्जं क्लेशं सहेत कः। न हि संचयवान्कश्चिद्दृश्यते निरुपद्रवः ॥03-002-046॥ | ಕೂಡಿಡುವುದನ್ನು ಬಿಟ್ಟುಬಿಡು! ಅದರಿಂದಾಗುವ ಕಷ್ಟಗಳನ್ನು ಯಾರು ತಾನೇ ಸಹಿಸಿಯಾರು? ಉಪದ್ರವಗಳಿಲ್ಲದೇ ಒಟ್ಟುಗೂಡಿಸುವವನನ್ನು ಕಾಣುವುದೇ ಇಲ್ಲ. | |
| अतश्च धर्मिभिः पुम्भिरनीहार्थः प्रशस्यते। प्रक्षालनाद्धि पङ्कस्य दूरादस्पर्शनं वरम् ॥03-002-047॥ | ಆದುದರಿಂದಲೇ ಧಾರ್ಮಿಕರು ಸಂಪತ್ತಿನ ಅನಾಸಕ್ತರನ್ನು ಪ್ರಶಂಸಿಸುತ್ತಾರೆ. ಕೆಸರನ್ನು ನಂತರ ಒರೆಸಿಕೊಳ್ಳುವುದಕ್ಕಿಂತ ಅದನ್ನು ಮುಟ್ಟದೇ ಇರುವುದು ಒಳ್ಳೆಯದು! | |
| युधिष्ठिरैवमर्थेषु न स्पृहां कर्तुमर्हसि। धर्मेण यदि ते कार्यं विमुक्तेच्छो भवार्थतः ॥03-002-048॥ | ಯುಧಿಷ್ಠಿರ ! ಸಂಪತ್ತನ್ನು ಬಯಸಬಾರದು. ಧರ್ಮದ ಪ್ರಕಾರ ನಡೆಯಬೇಕೆಂದರೆ ನೀನು ಸಂಪತ್ತನ್ನು ಬಯಸುವುದನ್ನು ಬಿಟ್ಟುಬಿಡು!” | |
| युधिष्ठिर उवाच। नार्थोपभोगलिप्सार्थमियमर्थेप्सुता मम। भरणार्थं तु विप्राणां ब्रह्मन्काङ्क्षे न लोभतः ॥03-002-049॥ | ಯುಧಿಷ್ಠಿರನು ಹೇಳಿದನು: “ಭೋಗಿಸುವ ಇಚ್ಛೆಯಿಂದ ನಾನು ಸಂಪತ್ತನ್ನು ಬಯಸುತ್ತಿಲ್ಲ. ಬ್ರಹ್ಮನ್! ವಿಪ್ರರನ್ನು ಪೊರೆಯಲು ಬಯಸುತ್ತೇನೆಯೇ ಹೊರತು ಲೋಭದಿಂದಲ್ಲ. | |
| कथं ह्यस्मद्विधो ब्रह्मन्वर्तमानो गृहाश्रमे। भरणं पालनं चापि न कुर्यादनुयायिनाम् ॥03-002-050॥ | ಬ್ರಹ್ಮನ್! ಈಗ ಗೃಹಸ್ಥಾಶ್ರಮದಲ್ಲಿರುವ ನನ್ನಂಥವನು ಅನುಸರಿಸಿ ಬಂದಿರುವವರ ಪಾಲನೆ ಪೋಷಣೆಯನ್ನು ಹೇಗೆ ಮಾಡಬಲ್ಲ? | |
| संविभागो हि भूतानां सर्वेषामेव शिष्यते। तथैवापचमानेभ्यः प्रदेयं गृहमेधिना ॥03-002-051॥ | ಎಲ್ಲವನ್ನೂ ಎಲ್ಲರೊಂದಿಗೂ ಹಂಚಿಕೊಳ್ಳಬೇಕು ಎಂದು ಕಲಿಸಿಕೊಡುತ್ತಾರೆ. ಅದರಂತೆ ಗೃಹಸ್ಥ ನಾದವನು ಯಾರು ಅಡುಗೆ ಮಾಡಿಕೊಳ್ಳುವುದಿಲ್ಲವೋ ಅವರಿಗೆ ಕೊಡಬೇಕು”. | |
| तृणानि भूमिरुदकं वाक्चतुर्थी च सूनृता। सतामेतानि गेहेषु नोच्छिद्यन्ते कदाचन ॥03-002-052॥ | ಒಳ್ಳೆಯವರ ಮನೆಯಲ್ಲಿ ಈ ನಾಲ್ಕಕ್ಕೆ ಎಂದೂ ಕೊರತೆಯಿರಬಾರದು. ಆಹಾರ, ನೆಲ, ನೀರು ಮತ್ತು ಸ್ವಾಗತದ ಮಾತುಗಳು. | |
| देयमार्तस्य शयनं स्थितश्रान्तस्य चासनम्। तृषितस्य च पानीयं क्षुधितस्य च भोजनम् ॥03-002-053॥ | ಆರ್ತನಾದವನಿಗೆ ಹಾಸಿಗೆಯನ್ನು ಕೊಡಬೇಕು, ನಿಂತು ಆಯಾಸಗೊಂಡವನಿಗೆ ಆಸನವನ್ನು ಕೊಡಬೇಕು, ಬಾಯಾರಿದವನಿಗೆ ನೀರನ್ನು ಕೊಡಬೇಕು, ಮತ್ತು ಹಸಿದವನಿಗೆ ಊಟವನ್ನು ನೀಡಬೇಕು. | |
| चक्षुर्दद्यान्मनो दद्याद्वाचं दद्याच्च सूनृताम्। प्रत्युद्गम्याभिगमनं कुर्यान्न्यायेन चार्चनम् ॥03-002-054॥ | ಒಳ್ಳೆಯ ನೋಟದಲ್ಲಿ ನೋಡಬೇಕು, ಒಳ್ಳೆಯ ಮನಸ್ಸನ್ನು ತೋರಿಸಬೇಕು, ಒಳ್ಳೆಯ ಮಾತನ್ನು ಆಡಬೇಕು, ಮತ್ತು ಮೇಲೆದ್ದು ಬಂದವನನ್ನು ಸ್ವಾಗತಿಸಿ ನ್ಯಾಯೋಚಿತವಾಗಿ ಸತ್ಕರಿಸಬೇಕು. | |
| अघिहोत्रमनड्वांश्च ज्ञातयोऽतिथिबान्धवाः। पुत्रदारभृताश्चैव निर्दहेयुरपूजिताः ॥03-002-055॥ | ಸರಿಯಾದ ಗೌರವವನ್ನು ನೀಡದಿದ್ದರೆ ಅಗ್ನಿಹೋತ್ರ ಸಾಕಿದ ಪ್ರಾಣಿಗಳು, ದಾಯಾದಿಗಳು, ಅತಿಥಿ-ಬಾಂಧವರು, ಸೊಸೆ, ಸೇವಕರೂ ಎಲ್ಲವನ್ನೂ ಅದು ಸುಟ್ಟುಚಡುತ್ತದೆ. | |
| नात्मार्थं पाचयेदन्नं न वृथा घातयेत्पशून्। न च तत्स्वयमश्नीयाद्विधिवद्यन्न निर्वपेत् ॥03-002-056॥ | ಕೇವಲ ತನಗೋಸ್ಕರ ಮಾತ್ರ ಅನ್ನವನ್ನು ಮಾಡಬಾರದು ಮತ್ತು ವೃಥಾ ಪಶುವನ್ನು ಕೊಲ್ಲಬಾರದು. ಹಾಗೆಯೇ ಅಡುಗೆಯನ್ನು ವಿಧಿವತ್ತಾಗಿ ನೈವೇದ್ಯ ಮಾಡದೇ ತಾನೊಬ್ಬನೇ ಊಟಮಾಡಜಾರದು. | |
| श्वभ्यश्च श्वपचेभ्यश्च वयोभ्यश्चावपेद्भुवि। वैश्वदेवं हि नामैतत्सायंप्रातर्विधीयते ॥03-002-057॥ | ನಾಯಿಗಳು ಮತ್ತು ಪಕ್ಷಿಗಳಿಗೆಂದು ನೆಲದ ಮೇಲೆ ಸ್ವಲ್ಪ ಆಹಾರವನ್ನು ಹಾಕಬೇಕು. ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ವಿಧಿವತ್ತಾಗಿ ವೈಶ್ವದೇವವನ್ನು ಮಾಡಬೇಕು”. | |
| विघसाशी भवेत्तस्मान्नित्यं चामृतभोजनः। विघसं भृत्यशेषं तु यज्ञशेषं तथामृतम् ॥03-002-058॥ | ಆದುದರಿಂದ ನಿತ್ಯವೂ ವಿಘಸ ಮತ್ತು ಅಮೃತವನ್ನು ಊಟಮಾಡಬೇಕು. ಅವಲಂಬಿಸಿರುವವರು ತಿಂದು ಉಳಿದಿದ್ದುದು ವಿಘಸ ಮತ್ತು ಯಜ್ಞದಿಂದ ಉಳಿದ ಆಹಾರವು ಅಮೃತ. | |
| एतां यो वर्तते वृत्तिं वर्तमानो गृहाश्रमे। तस्य धर्मं परं प्राहुः कथं वा विप्र मन्यसे ॥03-002-059॥ | ಗೃಹಸ್ಥಾಶ್ರಮದಲ್ಲಿರುವ ಯಾರು ಈ ರೀತಿ ವರ್ತಿಸುತ್ತಾರೆಯೋ ಅವನ ಧರ್ಮವು ಶ್ರೇಷ್ಠವಾದುದು ಎಂದು ಹೇಳುತ್ತಾರೆ. ವಿಪ್ರ! ನಿನ್ನ ಅಭಿಪ್ರಾಯವೇನು?” | |
| शौनक उवाच। अहो बत महत्कष्टं विपरीतमिदं जगत्। येनापत्रपते साधुरसाधुस्तेन तुष्यति ॥03-002-060॥ | ಶೌನಕನು ಹೇಳಿದನು: “ಅಹೋ ಈ ಜಗತ್ತಿನಲ್ಲಿ ಬಹಳಷ್ಟು ರೀತಿಯ ವಿಪರೀತ ಅರ್ಥಕೊಡುವ ಸಿಂದ್ಧಾತಗಳಿವೆ! ಯಾವುದು ಒಳ್ಳೆಯದು ಎಂದೆನಿಸುತ್ತದೆಯೋ ಅದು ಕೆಟ್ಟದು ಎನ್ನೂ ಅನ್ನಿಸಿಕೊಳ್ಳುತ್ತದೆ. | |
| शिश्नोदरकृतेऽप्राज्ञः करोति विघसं बहु। मोहरागसमाक्रान्त इन्द्रियार्थवशानुगः ॥03-002-061॥ | ತಿಳುವಳಿಕೆಯಿಲ್ಲದವನು ಶಿಶ್ನ ಮತ್ತು ಹೊಟ್ಟೆಗಾಗಿ ಬಹಳಷ್ಟು ಸಂಪಾದನೆಯನ್ನು ಮಾಡುತ್ತಾನೆ. ಮೋಹ-ರಾಗಗಳಿಂದ ಪೀಡಿತನಾಗಿ ಇಂದ್ರಿಯಗಳ ಮತ್ತು ಸಂಪತ್ತಿನ ವಶದಲ್ಲಿ ಬರುತ್ತಾನೆ. | |
| ह्रियते बुध्यमानोऽपि नरो हारिभिरिन्द्रियैः। विमूढसंज्ञो दुष्टाश्वैरुद्भ्रान्तैरिव सारथिः ॥03-002-062॥ | ಎಷ್ಟೇ ಬುದ್ಧಿ ವಂತನಾಗಿದ್ದರೂ ಮನುಷ್ಯನನ್ನು ಇಂದ್ರಿಯಗಳೆಂಬ ಕುದುರೆಗಳು ಮೂಢಾತ್ಮ ಭ್ರಾಂತ ಸಾರಥಿಯನ್ನು ದುಷ್ಟ ಕುದುರೆಗಳು ಕೊಂಡೊಯ್ಯುವಂತೆ ಕೊಂಡೊಯ್ಯುತ್ತವೆ. | |
| षडिन्द्रियाणि विषयं समागच्छन्ति वै यदा। तदा प्रादुर्भवत्येषां पूर्वसंकल्पजं मनः ॥03-002-063॥ | ಆರು ಇಂದ್ರಿಯಗಳು ತಮ್ಮ ತಮ್ಮ ವಿಷಯಗಳನ್ನು ಹಿಂಬಾಲಿಸುತ್ತಿರುತ್ತವೆ. ಅದರಿಂದಾಗಿ ಮನಸ್ಸಿನಲ್ಲಿ ಅವುಗಳನ್ನು ಪಡೆಯಲೇ ಬೇಕೆಂಬ ಸಂಕಲ್ಪವು ಮೂಡುತ್ತದೆ. | |
| मनो यस्येन्द्रियग्रामविषयं प्रति चोदितम्। तस्यौत्सुक्यं संभवति प्रवृत्तिश्चोपजायते ॥03-002-064॥ | ಇಂದ್ರಿಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮನಸ್ಸು ಪ್ರಚೋದಿತವಾದಾಗ ಅವನಲ್ಲಿ ಆಸೆಯು ಹುಟ್ಟುತ್ತದೆ ಮತ್ತು ಅವುಗಳನ್ನು ಪಡೆಯುವ ಅಭ್ಯಾಸವು ಉಂಟಾಗುತ್ತದೆ. | |
| ततः संकल्पवीर्येण कामेन विषयेषुभिः। विद्धः पतति लोभाग्नौ ज्योतिर्लोभात्पतंगवत् ॥03-002-065॥ | ಅನಂತರ ಪತಂಗವು ಬೆಳಕೆಂಬ ಭ್ರಾಂತಿಯಿಂದ ಬೆಂಕಿಯಲ್ಲಿ ಬಿದ್ದು ಭಸ್ಮವಾಗಿ ಹೋಗುವಂತೆ ಮಾನವನು ಸಂಕಲ್ಪದಿಂದ ಹುಟ್ಟುವ ಕಾಮನ ವಿಷಯಗಳೆಂಬ ಬಾಣಗಳಿಗೆ ತುತ್ತಾಗಿ ಲೋಭವೆಂಬ ಮಹಾಗ್ನಿಯಲ್ಲಿ ಬೀಳುತ್ತಾನೆ. | |
| ततो विहारैराहारैर्मोहितश्च विशां पते। महामोहमुखे मग्नो नात्मानमवबुध्यते ॥03-002-066॥ | ವಿಶಾಂಪತೇ! ಆಹಾರ-ವಿಹಾರಗಳಲ್ಲಿ ಮೋಹಿತನಾಗಿ ಅದೇ ಮಹಾಮೋಹಕ ಸುಖದಲ್ಲಿ ಮಗ್ನನಾದವನಿಗೆ ತಾನು ಯಾರು ಎನ್ನುವುದರ ಅರಿವೇ ಇರುವುದಿಲ್ಲ. | |
| एवं पतति संसारे तासु तास्विह योनिषु। अविद्याकर्मतृष्णाभिर्भ्राम्यमाणोऽथ चक्रवत् ॥03-002-067॥ | ಹೀಗೆ ಅವನು ಅವಿದ್ಯ, ಕರ್ಮ ಮತ್ತು ತೃಷ್ಣೆಯಿಂದ ತಿರುಗಿಸಲ್ಬಟ್ಟ ಚಕ್ರದಂತೆ ಒಂದು ಯೋನಿಯಿಂದ ಇನ್ನೊಂದು ಯೋನಿಗೆ ಸೇರುತ್ತಾ ಈ ಸಂಸಾರದಲ್ಲಿ ಬೀಳುತ್ತಾನೆ. | |
| ब्रह्मादिषु तृणान्तेषु हूतेषु परिवर्तते। जले भुवि तथाकाशे जायमानः पुनः पुनः ॥03-002-068॥ | ಹುಲ್ಲಿನ ಕಡ್ಡಿಯಂತೆ ನೀರಿನಲ್ಲಿ, ಭೂಮಿಯಲ್ಲಿ ಮತ್ತು ಆಕಾಶದಲ್ಲಿ ಬ್ರಹ್ಮನಿಂದ ಪುನಃ ಪುನಃ ಹುಟ್ಟುತ್ತಾನೆ. | |
| अबुधानां गतिस्त्वेषा बुधानामपि मे शृणु। ये धर्मे श्रेयसि रता विमोक्षरतयो जनाः ॥03-002-069॥ | ಇದು ತಿಳಿಯದೇ ಇದ್ದವರು ಹೋಗುವ ಮಾರ್ಗ. ಈಗ ಧರ್ಮದಲ್ಲಿರಲು ಬಯಸುವ, ಮೋಕ್ಷವನ್ನು ಬಯಸುವ, ತಿಳಿದವರ ಕುರಿತು ನನ್ನಿಂದ ಕೇಳು. | |
| यदिदं वेदवचनं कुरु कर्म त्यजेति च। तस्माद्धर्मानिमान्सर्वान्नाभिमानात्समाचरेत् ॥03-002-070॥ | ಕರ್ಮವನ್ನು ಮಾಡು ಮತ್ತು ತ್ಯಜಿಸು ಎನ್ನುವುದೇ ವೇದವಾಕ್ಯ. ಇದರಂತೆ ಅಭಿಮಾನದಿಂದ ಯಾವ ಧರ್ಮವನ್ನೂ ಆಚರಿಸಬಾರದು. | |
| इज्याध्ययनदानानि तपः सत्यं क्षमा दमः। अलोभ इति मार्गोऽयं धर्मस्याष्टविधः स्मृतः ॥03-002-071॥ | ಸ್ಮೃತಿಗಳ ಪ್ರಕಾರ ಎಂಟು ವಿಧದ ಧರ್ಮ ಮಾರ್ಗಗಳಿವೆ: ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಕ್ಷಮೆ, ದಮ ಮತ್ತು ಅಲೋಭ. | |
| तत्र पूर्वश्चतुर्वर्गः पितृयानपथे स्थितः। कर्तव्यमिति यत्कार्यं नाभिमानात्समाचरेत् ॥03-002-072॥ | ಇವುಗಳಲ್ಲಿ ಮೊದಲ ನಾಲ್ಕು ಪಿತೃಗಳು ಹೋಗುವ ಮಾರ್ಗದಲ್ಲಿರುವವು ಎಂದು ವರ್ಗೀಕೃತವಾಗಿವೆ. ಇವುಗಳನ್ನು ಅಭಿಮಾನದಿಂದ ಮಾಡಬಾರದು. ಕೇವಲ ಕರ್ತವ್ಯವೆಂದು ಮಾತ್ರ ಮಾಡಬೇಕು. | |
| उत्तरो देवयानस्तु सद्भिराचरितः सदा। अष्टाङ्गेनैव मार्गेण विशुद्धात्मा समाचरेत् ॥03-002-073॥ | ಇತರ ನಾಲ್ಕು ಸದಾ ಒಳ್ಳೆಯ ನಡತೆಯುಳ್ಳವರ ದೇವತೆಗಳ ಮಾರ್ಗಗಳು. ಈ ಎಂಟು ಮಾರ್ಗಗಳ ಆಚರಣೆಯಿಂದಲೇ ವಿಶುದ್ಧಾತ್ಮನಾಗುತ್ತಾನೆ. | |
| सम्यक्संकल्पसंबन्धात्सम्यक्चेन्द्रियनिग्रहात्। सम्यग्व्रतविशेषाच्च सम्यक्च गुरुसेवनात् ॥03-002-074॥ सम्यगाहारयोगाच्च सम्यक्चाध्ययनागमात्। सम्यक्कर्मोपसंन्यासात्सम्यक्चित्तनिरोधनात्। एवं कर्माणि कुर्वन्ति संसारविजिगीषवः ॥03-002-075॥ | ಸರಿಯಾದ ಸಂಕಲ್ಪ-ಸಂಬಂಧಗಳಿಂದ, ಸರಿಯಾದ ಇಂದ್ರಯನಿಗ್ರಹದಿಂದ, ಸರಿಯಾದ ವಿಶೇಷವ್ರತಗಳಿಂದ, ಸರಿಯಾದ ಗುರುಸೇವನೆಯಿಂದ, ಸರಿಯಾದ ಆಹಾರ-ಯೋಗಗಳಿಂದ, ಸರಿಯಾದ ಆಗಮ-ಅಧ್ಯಯನಗಳಿಂದ, ಸರಿಯಾದ ಕರ್ಮ ಮತ್ತು ಸನ್ಯಾಸಗಳಿಂದ, ಸರಿಯಾದ ಚಿತ್ತನಿರೋಧದಿಂದ ಸಂಸಾರವನ್ನು ಗೆಲ್ಲಲಿಚ್ಛಿ ಸುವವರು ಕರ್ಮಗಳನ್ನು ಮಾಡುತ್ತಾರೆ. | |
| रागद्वेषविनिर्मुक्ता ऐश्वर्यं देवता गताः। रुद्राः साध्यास्तथादित्या वसवोऽथाश्विनावपि। योगैश्वर्येण संयुक्ता धारयन्ति प्रजा इमाः ॥03-002-076॥ | ರುದ್ರರು, ಸಾಧ್ಯರು, ಆದಿತ್ಯರು, ವಸವರು ಮತ್ತು ಅಶ್ವಿನರು ರಾಗದ್ವೇಷಗಳಿಂದ ವಿಮುಕ್ತರಾದುದರಿಂದಲೇ ದೈವತ್ವ ಐಶ್ವರ್ಯವನ್ನು ಪಡೆದಿದ್ದಾರೆ. ಯೋಗೈಶ್ವರ್ಯದಿಂದ ಕೂಡಿದವರಾಗಿ ಎಲ್ಲ ಪ್ರಜೆಗಳನ್ನು ಪಾಲಿಸುತ್ತಾರೆ. | |
| तथा त्वमपि कौन्तेय शममास्थाय पुष्कलम्। तपसा सिद्धिमन्विच्छ योगसिद्धिं च भारत ॥03-002-077॥ | ಕೌಂತೇಯ! ಭಾರತ ! ನೀನೂ ಕೂಡ ಅತೀವ ಶಾಂತತೆಯನ್ನು ಸಾಧಿಸಬೇಕು. ತಪಸ್ಸಿನಿಂದ ಮನೋ ಸಿದ್ಧಿಯನ್ನೂ ಯೋಗಸಿದ್ಧಿಯನ್ನೂ ಪಡೆ. | |
| पितृमातृमयी सिद्धिः प्राप्ता कर्ममयी च ते। तपसा सिद्धिमन्विच्छ द्विजानां भरणाय वै ॥03-002-078॥ | ಕರ್ಮಮಯಿಯಾದ ನೀನು ತಂದೆ ತಾಯಿಗಳಿಂದ ಪಡೆಯುವ ಸಿದ್ಧಿಯನ್ನು ಪಡೆದಿದ್ದೀಯೆ. ದ್ವಿಜರನ್ನು ಪಾಲಿಸುವುದರಿಂದ ಮತ್ತು ತಪಸ್ಸಿನಿಂದ ಸಿದ್ಧಿಯನ್ನು ಪಡೆದುಕೋ. | |
| सिद्धा हि यद्यदिच्छन्ति कुर्वते तदनुग्रहात्। तस्मात्तपः समास्थाय कुरुष्वात्ममनोरथम् ॥03-002-079॥ | ಸಿದ್ಧಿಯನ್ನು ಪಡೆದವರೇ ಅದರ ಸಹಾಯದಿಂದ ಬೇಕಾದುದನ್ನೆಲ್ಲ ಮಾಡಬಲ್ಲವರಾಗುತ್ತಾರೆ. ಆದುದರಿಂದ ತಪಸ್ಸಿನಲ್ಲಿ ನಿರತನಾಗಿ ನಿನ್ನ ಮನೋರಥವನ್ನು ಈಡೇರಿಸಿಕೋ. |

Leave a Reply